ಪ್ರತೀ ವರ್ಷದಂತೆ ಈ ವರ್ಷವೂ ಸಹ ದೇಶದ ಗಡಿ ಕಾಯುವ ವೀರ ಯೋಧರ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರು ದೀಪಾವಳಿ ಹಬ್ಬವನ್ನ ಆಚರಿಸಿದರು.
ದೀಪಾವಳಿ ಪ್ರಯುಕ್ತ ಚೀನಾ ಗಡಿಯ ಹಿಮಾಚಲ ಪ್ರದೇಶದ ಲೆಪ್ಚಾ ಕೇಂದ್ರಕ್ಕೆ ಭೇಟಿ ನೀಡಿ ಯೋಧರಿಗೆ ಸಿಹಿ ಹಂಚಿ ಹಬ್ಬದ ಶುಭ ಕೋರಿದರು. 2022ರಲ್ಲಿ ಭಾರತ ಮತ್ತು ಪಾಕಿಸ್ತಾನ ಗಡಿಯ ಕಾರ್ಗಿಲ್‌ನಲ್ಲಿ ಸೈನಿಕರ ಜೊತೆ ದೀಪಾವಳಿ ಆಚರಣೆ ಮಾಡಿದ್ದರು. ಬಳಿಕ ಯೋಧರೊಂದಿಗೆ ಸಂವಾದ ನಡೆಸಿದರು.