ವೀರಾಪುರದ ದೇವಸ್ಥಾನಗಳಲ್ಲಿ ಸರಣಿ ಕಳ್ಳತನ: 8 ಚಿನ್ನದ ತಾಳಿ 50 ಸಾವಿರ ಕಾಣಿಕೆ ಹಣ ಕಳವು

ಒಂದೇ ರಾತ್ರಿಯಲ್ಲಿ ಎರಡು‌ ದೇವಸ್ಥಾನಗಳಲ್ಲಿನ ಕಾಣಿಕೆ ಹುಂಡಿ ಒಡೆದು ಸರಣಿ ಕಳ್ಳತನ ಮಾಡಿರೋ ಘಟನೆ ತಾಲೂಕಿನ ವೀರಾಪುರದಲ್ಲಿ ಭಾನುವಾರ ತಡರಾತ್ರಿ ನಡೆದಿದೆ.

ಮಾರಮ್ಮ ಮತ್ತು ಅಂಜನೇಯ ದೇವಸ್ಥಾನಗಳಲ್ಲಿ ಕಳವು ಮಾಡಿರುವ ಕಳ್ಳರು, ಹುಂಡಿಯಲ್ಲಿದ್ದ ಹಣ ಹಾಗೂ ಮಾರಮ್ಮ ದೇವತೆ ಕೊರಳಿನಲ್ಲಿದ್ದ 8 ಚಿನ್ನದ ತಾಳಿಗಳು ಮತ್ತು ಬೆಳ್ಳಿ ಅಭರಣಗಳು ಕಳವು ಮಾಡಿರೋ ಕಳ್ಳರು.

ಹುಂಡಿಯಲ್ಲಿದ್ದ 50 ಸಾವಿರ ರೂ. ನೋಟ್ ಗಳನ್ನ ದೋಚಿದ ಕಳ್ಳರು 3,600 ರೂಪಾಯಿಯ ನಾಣ್ಯಗಳನ್ನ ಹುಂಡಿಯಲ್ಲಿಯೇ ಬಿಟ್ಟು ಹೋಗಿದ್ದಾರೆ.

ದೇವಸ್ಥಾನದ ಪೂಜಾರಿ ಸೋಮವಾರದ ಸಂಜೆ 7:30ರ‌ ಸಮಯದಲ್ಲಿ ದೇವಸ್ಥಾನ ಸ್ವಚ್ಛ ಮಾಡಲು ಬಂದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ, ಕಳೆದ 5 ವರ್ಷಗಳಿಂದ ಹುಂಡಿ ಹಣವನ್ನ ಹೊರಗೆ ತೆಗೆದಿರಲಿಲ್ಲ, ಸುಮಾರು 50 ಸಾವಿರಕ್ಕೂ ಹೆಚ್ಚು ಹಣ ಸಂಗ್ರಹವಾಗಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಮಾರಮ್ಮ ದೇವಸ್ಥಾನದಲ್ಲಿ ಕಳವು ಮಾಡಿದ ನಂತರ ಕಳ್ಳರು ಹಿಂಭಾಗದಲ್ಲಿದ್ದ ಅಂಜನೇಯ ದೇವಸ್ಥಾನದ ಹುಂಡಿಯನ್ನ ಕದ್ದು ಗ್ರಾಮದ ಹೊರಗಿನ ನೀಲಿಗಿರಿ ತೋಪಿನಲ್ಲಿ ಹುಂಡಿ ಎಸೆದು ಪರಾರಿಯಾಗಿದ್ದಾರೆ.

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳ ಪರಿಶೀಲನೆ ನಡೆಸಿದ ಪೊಲೀಸರಿಗೆ ಸುತ್ತಮುತ್ತಲಿನ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿದಾಗ ಇಬ್ಬರು ವ್ಯಕ್ತಿಗಳು ಭಾನುವಾರದ ರಾತ್ರಿಯಲ್ಲಿ ದೇವಸ್ಥಾನದ ಬಳಿ ಓಡಾಡಿರುವ ಮಾಹಿತಿ ಸಿಕ್ಕಿದೆ.

Ramesh Babu

Journalist

Recent Posts

ವೃದ್ಧ ದಂಪತಿಗೆ ‘ವಾತ್ಸಲ್ಯ’ ಮನೆ ಹಸ್ತಾಂತರ

ದೊಡ್ಡಬಳ್ಳಾಪುರ: ತಾಲೂಕಿನ ಮೆಣಸಿ ಗ್ರಾಮದಲ್ಲಿ ವಯೋವೃದ್ಧ ದಂಪತಿ ಕೆಂಪಮ್ಮ ಮತ್ತು ಪಾಪಪಿಲ್ಲಪ್ಪ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ…

4 hours ago

ದೊಡ್ಡಬಳ್ಳಾಪುರದಲ್ಲಿ ದಾಖಲೆಗಳಿಲ್ಲದೆ ವಾಸ: ಮೂವರು ವಿದೇಶಿ ಪ್ರಜೆಗಳ ವಶ

ದೊಡ್ಡಬಳ್ಳಾಪುರ: ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ವೇಳೆ ದೊರೆತ ಖಚಿತ ಮಾಹಿತಿಯ ಆಧಾರದ ಮೇಲೆ ಅಕ್ರಮವಾಗಿ ಭಾರತದಲ್ಲಿ ನೆಲೆಸಿದ್ದರೆನ್ನಲಾದ ಮೂವರು ನೈಜೀರಿಯಾ…

7 hours ago

ಘಾಟಿ ಸುಬ್ರಹ್ಮಣ್ಯ‌ ದೇವಾಲಯ ಹುಂಡಿ ಎಣಿಕೆ: 77.58 ಲಕ್ಷ ಸಂಗ್ರಹ

ದೊಡ್ಡಬಳ್ಳಾಪುರ: ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದಲ್ಲಿ ಹುಂಡಿ ಕಾಣಿಕೆ ಎಣಿಕೆ ಕಾರ್ಯ ನಡೆಯಿತು. ಎಣಿಕೆಯಲ್ಲಿ…

10 hours ago

ಲಗೇಜ್ ಟ್ರಾಲಿಯಲ್ಲಿ ಚಿನ್ನ ಸಾಗಾಟ: ಇಬ್ಬರ ಬಂಧನ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲಗೇಜ್ ಟ್ರಾಲಿಯಲ್ಲಿ ಚಿನ್ನದ ಬಿಸ್ಕೆಟ್‌ಗಳನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ಇಬ್ಬರು ಪ್ರಯಾಣಿಕರನ್ನು ಡೈರೆಕ್ಟರೇಟ್…

10 hours ago

ಆಧುನಿಕ ತಂತ್ರಜ್ಞಾನ–ಸಾವಯವ ಕೃಷಿಯಿಂದ ಮಾದರಿಯಾದ ನೆಲಮಂಗಲದ ರೈತ ಮಹಿಳೆ

ನೆಲಮಂಗಲ: ಕಡಿಮೆ ಶಿಕ್ಷಣದ ನಡುವೆಯೂ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಹಾಗೂ ಸಾವಯವ ಪದ್ಧತಿಗಳನ್ನು ಅಳವಡಿಸಿಕೊಂಡು ಸಾಧನೆ ಮಾಡಿರುವ ನೆಲಮಂಗಲ ತಾಲೂಕಿನ…

11 hours ago

ನೊಬೆಲ್ ಪ್ರಶಸ್ತಿ ಮತ್ತೆ ಮನಸ್ಸು ಮತ್ತು ಸಮಾಜ ಪುನ:ಶ್ಚೇತನಗೊಳ್ಳುವಂತೆ ಮಾಡಲಿ

ನೊಬೆಲ್ ಪ್ರಶಸ್ತಿ ಘೋಷಣೆಯ ವಾರ....... ಈ ವಾರ ಪ್ರಕಟವಾಗುತ್ತಿರುವ ನೊಬೆಲ್ ಪ್ರಶಸ್ತಿಗಳ ಕಡೆಯೂ ಸ್ವಲ್ಪ ಮನಸ್ಸು ಹರಿಯಲಿ ಮತ್ತು ಅರಿಯಲಿ..........…

14 hours ago