ವಿಷಮುಕ್ತ ಕೃಷಿಯಿಂದ ರೈತರ ಆರ್ಥಿಕ ಪ್ರಗತಿ ಸಾಧ್ಯ: ನಟರಾಜ್ ವಿ

ದೊಡ್ಡಬಳ್ಳಾಪುರ: ಅತಿಯಾದ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಬಳಕೆಯಿಂದ ಮಣ್ಣಿನ ಫಲವತ್ತತೆ ಕುಸಿಯುವುದರ ಜೊತೆಗೆ ಮನುಷ್ಯನ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ. ರೈತರು ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ಕೃಷಿ ವೆಚ್ಚ ಕಡಿಮೆ ಮಾಡಿ ಆರ್ಥಿಕವಾಗಿ ಸದೃಢರಾಗಬಹುದು ಎಂದು ರಾಜ್ಯಮಟ್ಟದ ಕೃಷಿ ಪಂಡಿತ ಪ್ರಶಸ್ತಿ ವಿಜೇತ ಸಾವಯವ ಕೃಷಿಕ ನಟರಾಜ್ ವಿ. ತಿಳಿಸಿದರು.

ತಾಲೂಕಿನ ತಿಪ್ಪಾಪುರ ಗ್ರಾಮದ ಮಂಜುನಾಥ್ ಸಿ. ಅವರ ತೋಟದಲ್ಲಿ ಯುವ ಸಂಚಲನ ಚಾರಿಟೇಬಲ್ ಟ್ರಸ್ಟ್ (ರಿ.) ವತಿಯಿಂದ ಆಯೋಜಿಸಿದ್ದ ‘ವಿಷಮುಕ್ತ ಕೃಷಿಯ ಕಡೆಗೆ’ ಎಂಬ ಒಂದು ದಿನದ ವಿಶೇಷ ಕೃಷಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ದ್ರವರೂಪದ ಗೊಬ್ಬರ, ಹಸಿರೆಲೆ ಗೊಬ್ಬರ ಹಾಗೂ ಸ್ಥಳೀಯವಾಗಿ ಲಭ್ಯವಿರುವ ನೈಸರ್ಗಿಕ ಪರಿಕರಗಳನ್ನು ಬಳಸಿಕೊಂಡು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿಕೊಳ್ಳಬೇಕು. ಸಾವಯವ ಕೃಷಿಯಿಂದ ಉತ್ಪಾದನಾ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ರೈತರು ಒಂದು ಎಕರೆ ಜಮೀನಿನಲ್ಲಿಯೇ ಉತ್ತಮ ಆದಾಯ ಗಳಿಸಿ ಗೌರವಯುತ ಜೀವನ ನಡೆಸಲು ಸಾಧ್ಯವಿದೆ ಎಂದು ಸಲಹೆ ನೀಡಿದರು.

ರೈತ ಸಂಘದ ಮುಖಂಡೆ ಸುಲೋಚನಾ ವೆಂಕಟರೆಡ್ಡಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಾವಯವ ಕೃಷಿಯ ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ಸಾಕಷ್ಟು ವಂಚನೆಗಳು ನಡೆಯುತ್ತಿವೆ. ನೈಜ ಸಾವಯವ ಬೆಳೆಗಾರರ ಸಂಖ್ಯೆ ಕಡಿಮೆಯಿದ್ದು, ಕೆಲವು ಕಡೆ ನಕಲಿ ಉತ್ಪನ್ನಗಳನ್ನು ಸಾವಯವ ಉತ್ಪನ್ನಗಳೆಂದು ಬಿಂಬಿಸಿ ಗ್ರಾಹಕರಿಗೆ ಮೋಸ ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಾವಯವ ಕೃಷಿಯ ಕುರಿತು ಜಾಗೃತಿ ಮೂಡಿಸುವ ಕಾರ್ಯಾಗಾರಗಳು ಹೆಚ್ಚು ಅಗತ್ಯವಾಗಿವೆ ಎಂದರು.

ಯುವ ಸಂಚಲನ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಚಿದಾನಂದ್ ಮಾತನಾಡಿ, ಜನರಿಗೆ ವಿಷಮುಕ್ತ ಹಾಗೂ ಶುದ್ಧ ಆಹಾರ ಒದಗಿಸುವುದು ಮತ್ತು ರೈತರ ಬದುಕನ್ನು ಸುಸ್ಥಿರಗೊಳಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಯುವಕರು ಕೃಷಿಯನ್ನು ಲಾಭದಾಯಕ ಹಾಗೂ ಪರಿಸರಸ್ನೇಹಿ ಉದ್ಯಮವನ್ನಾಗಿ ರೂಪಿಸಿಕೊಳ್ಳಲು ಇಂತಹ ತರಬೇತಿ ಕಾರ್ಯಕ್ರಮಗಳು ಸಹಕಾರಿಯಾಗಲಿವೆ. ಮುಂದಿನ ದಿನಗಳಲ್ಲಿಯೂ ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ಮುಂದುವರಿಸಲಾಗುವುದು ಎಂದು ತಿಳಿಸಿದರು.

ಕಾರ್ಯಾಗಾರದಲ್ಲಿ ಸುತ್ತಮುತ್ತಲಿನ ಗ್ರಾಮಗಳ ರೈತರು ಹಾಗೂ ಕೃಷಿ ಆಸಕ್ತರು ಭಾಗವಹಿಸಿ ಸಾವಯವ ಕೃಷಿ ಪದ್ಧತಿ, ನೈಸರ್ಗಿಕ ಗೊಬ್ಬರ ತಯಾರಿಕೆ ಮತ್ತು ಕೀಟ ನಿರ್ವಹಣೆ ಕುರಿತು ತಜ್ಞರಿಂದ ಪ್ರಾಯೋಗಿಕ ಮಾಹಿತಿ ಪಡೆದುಕೊಂಡರು.

ಈ ಸಂದರ್ಭದಲ್ಲಿ ಸ್ಥಳೀಯ ರೈತ ಸಂಘದ ಹನುಮಂತರಾಯಪ್ಪ, ಪ್ರಗತಿಪರ ಕೃಷಿಕರು ಹಾಗೂ ಯುವ ಸಂಚಲನ ಚಾರಿಟೇಬಲ್ ಟ್ರಸ್ಟ್‌ನ ಸದಸ್ಯರು ಉಪಸ್ಥಿತರಿದ್ದರು.

Ramesh Babu

Journalist

Recent Posts

ಬೆಳಗಾವಿ: 4.21 ಲಕ್ಷ ರೂ.ಮೌಲ್ಯದ ಅನಧಿಕೃತ ಜೈವಿಕ ಉತ್ತೇಜಕಗಳ ಜಪ್ತಿ

ನೋಂದಣಿ ಪರವಾನಗಿಯಿಲ್ಲದ ಹಾಗೂ ಅನಧಿಕೃತ ಜೈವಿಕ ಉತ್ತೇಜಕಗಳನ್ನು (Biostimulation products) ದಾಸ್ತಾನು ಇರಿಸಿಕೊಂಡಿದ್ದ ಮಳಿಗೆಯ ಮೇಲೆ ಕೃಷಿ ಇಲಾಖೆಯ ಜಾಗೃತ…

6 minutes ago

ಇತಿಹಾಸದ ಸತ್ಯ ಮಾರುಕಟ್ಟೆಯಲ್ಲಿ ಮಾರಾಟಕ್ಕಿದೆ……

ಗಾಂಧಿ ಹತ್ಯೆ ಹಿಂದಿನ ಸತ್ಯ, ಲಾಲ್ ಬಹದ್ದೂರ್ ಶಾಸ್ತ್ರಿ ಸಾವಿನ ಸತ್ಯ, ಬಸವಣ್ಣನವರ ಮರಣದ ಹಿಂದಿನ ಸತ್ಯ, ಟಿಪ್ಪು ಸುಲ್ತಾನ್…

1 hour ago

ಇರುವುದೊಂದೇ ಬದುಕು. ಅದನ್ನು ಅರ್ಥಪೂರ್ಣವಾಗಿ ಸಾರ್ಥಕ ಪಡಿಸಿಕೊಳ್ಳೋಣ….

ಎಲ್ಲಿ ಜೀವನ ನಡೆವುದೋ ಅದೇ ನನ್ನೂರು, ಯಾರು ಸ್ನೇಹದಿ ಬರುವರೋ ಅವರೇ ನನ್ನೋರು........... ಒಂದು ಚಿತ್ರ ಗೀತೆಯ ಹಾಡಿನ ಸಾಲುಗಳಿವು.…

1 day ago

2,411 ದಿನಗಳಿಂದ ನಿರಂತರ ಅನ್ನದಾಸೋಹ: ದಾನಿಗಳ ಸೇವೆಗೆ ಗಣ್ಯರ ಮೆಚ್ಚುಗೆ

  ದೊಡ್ಡಬಳ್ಳಾಪುರ: ಹಸಿದವರಿಗೆ ಅನ್ನ ನೀಡುವ ಮಹತ್ಕಾರ್ಯವನ್ನು ಕಳೆದ 2,411 ದಿನಗಳಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಅನ್ನದಾಸೋಹಿ ಮಲ್ಲೇಶ್ ಮತ್ತು…

1 day ago

ಮಾನವೀಯ ಸಂಬಂಧಗಳ ಹುಡುಕುತ್ತಾ………

ಅಕ್ಕ, ತಮ್ಮನ ಕೈ ಹಿಡಿದುಕೊಂಡು ರಸ್ತೆ ದಾಟುತ್ತಾ ಇರುವಾಗ ತಮ್ಮ ಕೈ ಹಿಡಿದೇ ಅಕ್ಕನ ಹಿಂದೆ ಪುಟ್ಟ ಪುಟ್ಟ ಹೆಜ್ಜೆ…

2 days ago

ಹೊನ್ನಘಟ್ಟದಲ್ಲಿ ಮೂರೂವರೆ ಎಕರೆ ಸರ್ಕಾರಿ ಜಮೀನು ಒತ್ತುವರಿ ಆರೋಪ

ದೊಡ್ಡಬಳ್ಳಾಪುರ: ತಾಲ್ಲೂಕಿನ ಹೊನ್ನಘಟ್ಟ ಗ್ರಾಮದಲ್ಲಿ ಸುಮಾರು ಮೂರೂವರೆ ಎಕರೆ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು, ಅದನ್ನು ಬೇರೆಯವರಿಗೆ ಬಾಡಿಗೆಗೆ ನೀಡಲಾಗಿದೆ…

3 days ago