ವಿಶ್ವ ಹಿರಿಯ ನಾಗರಿಕರ ದಿನಾಚರಣೆ – ಹಿರಿಯ ನಾಗರಿಕರು ಅನುಭವದ ಕಣಜಗಳು – ಎಡಿಸಿ ಸೈಯಿದಾ ಅಯಿಷಾ

ನಾಗರಿಕರು ಅನುಭವದ ಗ್ರಂಥಗಳು ಅವರ ಜೊತೆ ಸಮಯ ಕಳೆಯಿರಿ ಅವರ ಆರೋಗ್ಯಕ್ಕೆ ಭದ್ರತೆ ಕೊಡಿ. ಹಿರಿಯರ ತ್ಯಾಗ ಪರಿಶ್ರಮದಿಂದ ಇಂದು ನಾವೆಲ್ಲರೂ ಸುಖ-ಸೌಕರ್ಯವನ್ನು ಅನುಭವಿಸುತ್ತಿದ್ದೇವೆ ಹಿರಿಯ ನಾಗರಿಕರನ್ನು ಪ್ರೀತಿಸಿ, ಗೌರವಿಸಿ ಅವರ ಆಶೀರ್ವಾದವನ್ನು ಪಡೆದು ಸಂತೋಷದ ವಾತಾವರಣ ನಿರ್ಮಿಸೋಣ ಎಂದು ಅಪರ ಜಿಲ್ಲಾಧಿಕಾರಿ ಸೈಯಿದಾ ಅಯಿಷಾ ಅವರು ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಹಿರಿಯರ ತ್ಯಾಗ ಸೇವೆ, ಜ್ಞಾನವನ್ನು ನೆನಪಿಸುವ ಮಹತ್ತರ ದಿನವಾಗಿದೆ. ಹಿರಿಯರು ನಮ್ಮ ಭೂತಕಾಲದ ನೆನಪುಗಳು ವರ್ತಮಾನದ ಆಸ್ತಿಗಳು ಮತ್ತು ಭವಿಷ್ಯದ ಪ್ರೇರಣೆ. ಅವರು ನಮ್ಮ ಸಮಾಜದ ಬೆನ್ನೆಲುಬು ತಮ್ಮ ಜೀವನವನ್ನು ಕುಟುಂಬ,ಸಮಾಜ ಮತ್ತು ದೇಶದ ಅಭಿವೃದ್ಧಿಗೆ ಅರ್ಪಿಸಿದ್ದಾರೆ. ಹಿರಿಯರು ಸಂಸ್ಕೃತಿಯ ಸಾಗರ ಅನುಭವದ ವಿಶ್ವಕೋಶ. ಅವರ ಆಶೀರ್ವಾದವಿಲ್ಲದೆ ಯಾವ ಕುಟುಂಬ ಸಮೃದ್ಧಿ ಹೊಂದಲು ಸಾಧ್ಯವಿಲ್ಲ. ನಾವು ಹಿರಿಯರನ್ನು ಕೇವಲ ಕುಟುಂಬದ ಸದಸ್ಯರಾಗಿ ಕಾಣಬಾರದು ಅವರನ್ನು ಜ್ಞಾನಿಗಳಾಗಿ ಮಾರ್ಗದರ್ಶಕರಾಗಿ ಕಾಣಬೇಕು. ಅವರ ಪ್ರೀತಿ ಸಲಹೆ ಮಾರ್ಗದರ್ಶನಗಳು ನಮ್ಮ ಬದುಕಿಗೆ ದಾರಿ ತೋರುವ ದೀಪಗಳು ಎಂದರು.

ಜಿಲ್ಲೆಯಲ್ಲಿ 1,12,236 ಜನ ಹಿರಿಯ ನಾಗರಿಕರು ಪಿಂಚಣಿ ತೆಗೆದುಕೊಳ್ಳುತ್ತಿದ್ದಾರೆ. ಹಿರಿಯ ನಾಗರಿಕರು ಓಡಾಡುವಾಗ ಕೆಲ ಸಂದರ್ಭದಲ್ಲಿ ಬಿದ್ದು ಪ್ರಾಣ ಹಾನಿಗಳು ಆಗಿವೆ ಕೆಲವರು ಕೈ ಕಾಲುಗಳನ್ನು ಕಳೆದು ಕೊಂಡಿದ್ದಾರೆ ಹೀಗೆ ಹಲವಾರು ರೀತಿ ಅನಾಹುತಗಳು ಆಗಿವೆ ಅದಕ್ಕಾಗಿ ಹಿರಿಯ ನಾಗರಿಕರಿಗೆ ಅನುಕೂಲವಾಗಲು ನಮ್ಮ ಊರುಗೋಲು ಎಂಬ ಕಾರ್ಯಕ್ರಮ ರೂಪಿಸಿ ಅದರಲ್ಲಿ 5000 ಹಿರಿಯ ನಾಗರಿಕರಿಗೆ ಊರಗೋಲನ್ನು ವಿತರಿಸಲಾಯಿತು.

ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಿವಕುಮಾರ್ ಮಾತನಾಡಿ ಹಿರಿಯ ನಾಗರಿಕರು ಅನುಭವದಿಂದ ಪಾಠ ಕಲಿತಿರುತ್ತಾರೆ. ಹಿರಿಯರು ಹೇಳುವ ಕಥೆಯಲ್ಲಿ ನೈತಿಕತೆಯ ಸಾರಂಶ, ನೀತಿ ಪಾಠ ತುಂಬಿರುತ್ತದೆ. ಅವರು ಮಾನಸಿಕವಾಗಿ ಸಧೃಡರಾಗಿರುತ್ತಾರೆ. ಅವರು ವಿದ್ಯಾಭ್ಯಾಸ ಮಾಡಿರದಿದ್ದರು ಔಷಧೋಪಚಾರದ ಅರಿವಿರುತ್ತಿತ್ತು. ಅವರ ಅನುಭವದ ಸಾಮರ್ಥ್ಯ ಬಹಳ ದೊಡ್ಡದು ಹಾಗಾಗಿ ಅವರ ಮಾತನ್ನು ಕೇಳಬೇಕು. ಇಂದು ನಾನು ಅಧಿಕಾರಿಯಾಗಿ ಕೆಲಸ ನಿರ್ವಹಿಸಲು ಕಾರಣ ಹಿರಿಯರು ಎಂದು ನೆನಪಿಸಿಕೊಂಡರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನೆಲಮಂಗಲ ತಾಲ್ಲೂಕಿನ ಎಂ.ಆರ್. ರುದ್ರೇಶ್ ವಯಸ್ಸು 69 ಪೋಲಿಸ್ ಇಲಾಖೆಯಲ್ಲಿ ಎ.ಎಸ್.ಐ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುತ್ತಾರೆ, ಹೊಸಕೋಟೆಯ ಕೃಷ್ಣಮೂರ್ತಿ ವಯಸ್ಸು 87 ಇವರು 31 ವರ್ಷಗಳ ಕಾಲ ಅರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಹಿರಿಯ ಆರೋಗ್ಯ ನಿರ್ದೇಶಕರಾಗಿ ನಿವೃತ್ತಿ ಹೊಂದಿದ್ದಾರೆ, ದೊಡ್ಡಬಳ್ಳಾಪುರ ತಾಲ್ಲೂಕಿನ ಹೆಚ್ ಹನುಮಂತರಾಯಪ್ಪ ವಯಸ್ಸು 90 ನಿವೃತ್ತ ಗಾಮ ಲೆಕ್ಕಾಧಿಕಾರಿಗಳು, ದೇವನಹಳ್ಳಿ ತಾಲ್ಲೂಕಿನ ರಮೇಶ್ ವಯಸ್ಸು 61 ಕಲಾವಿದರು ಇವರುಗಳಿಗೆ ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲಿ ವಿಜೇತರಾದ ಹಿರಿಯ ನಾಗರಿಕರಿಗೆ ಬಹುಮಾನ ನೀಡಿದರು. ಜೊತೆಗೆ ಬ್ಯಾಪ್ಟಿಸ್ಟ್ ಆಸ್ಪತ್ರೆಯವರ ವತಿಯಿಂದ ಇಬ್ಬರು ಅಂಗವಿಕಲರಿಗೆ ಕೃತಕ ಕಾಲುಗಳನ್ನು ನೀಡಲಾಯಿತು

ಕಾರ್ಯಕ್ರಮದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸತೀಶ್ ಪಾಣಿ,ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕರ ಮುದ್ದಣ ಎಂ, ಹಾಗೂ ಇಲಾಖೆ ಅಧಿಕಾರಿ ಜಗದೀಶ್ ಎನ್. ಎಂ, ಹಿರಿಯ ನಾಗರಿಕರ ನಿವೃತ್ತ ಸಂಘದ ಕಾರ್ಯದರ್ಶಿ ಪ್ರಭಾಕರ್, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಜಿಲ್ಲಾ ಸಂಯೋಜಕ ರವಿಕುಮಾರ್ ಹಾಗೂ ಜಿಲ್ಲೆಯ ಹಿರಿಯ ನಾಗರಿಕರು ಉಪಸ್ಥಿತರಿದ್ದರು.

Ramesh Babu

Journalist

Recent Posts

ಆನ್ ಲೈನ್ ನಲ್ಲಿ ಒಂದು ರೂ. ಗೆ ಹಾಲು ಮಾರಾಟ: ಪ್ರಾಂತ ರೈತ ಸಂಘ ಆಕ್ರೋಶ: ಅಮಿತ್ ಶಾ ರಾಜೀನಾಮೆಗೆ ಆಗ್ರಹ

ಕೋಲಾರ: ಅಮೆಜಾನ್‌ ಸಹಭಾಗಿತ್ವದ ಫ್ಲಿಪ್ ಕಾರ್ಟ್ ನಲ್ಲಿ ಲೀಟರ್ ಹಾಲನ್ನು ಒಂದು ರೂ. ಗೆ ಮಾರಾಟದ ಅವಕಾಶ ಕಲ್ಪಿಸಿರುವುದು ಅತ್ಯಂತ…

7 hours ago

ಪ್ರತ್ಯೇಕ ಅಪಘಾತ ಕೇಸ್ : ಮೂವರು ಮೂವರು ರಿಸರ್ವ್ ಸಬ್ ಇನ್‌ಸ್ಪೆಕ್ಟರ್‌ಗಳು ಸೇರಿ ನಾಲ್ವರು ಸಾವು: ಹಲವರಿಗೆ ಗಾಯ

ಭೀಕರ ಅಪಘಾತದಲ್ಲಿ ಮೂವರು ರಿಸರ್ವ್ (ಮೀಸಲು ಪೊಲೀಸ್ ಪಡೆ) ಸಬ್ ಇನ್‌ಸ್ಪೆಕ್ಟರ್‌ಗಳು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಇದಲ್ಲದೆ, ಚಾಮರಾಜನಗರ ಮತ್ತು…

8 hours ago

ಕಾನ್ಸಿರಾಮ್ ಅವರ 92ನೇ ಹುಟ್ಟುಹಬ್ಬ: ಬಹುಜನರ ಏಳಿಗೆಗಾಗಿ ಕಾನ್ಸಿರಾಮ್ ಕೊಡುಗೆ ಅಪಾರ- ನಂದಿಗುಂದ ಪಿ‌.ವೆಂಕಟೇಶ್

ಕಾನ್ಸಿರಾಮ್ ಅವರು 1978 ರಲ್ಲಿ ಅಖಿಲ ಭಾರತ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ನೌಕರರ ಒಕ್ಕೂಟ (ಬಿಎಎಂಸಿಇಎಫ್‌) ಸ್ಥಾಪಿಸಿದ್ದರು. 1984ರಲ್ಲಿ ಬಹುಜನ್‌…

9 hours ago

ಪುರುಷಾಧಿಪತ್ಯಕ್ಕೆ ಸೆಡ್ಡು ಹೊಡೆದು, ತಂದೆ ಅಂತ್ಯಸಂಸ್ಕಾರ ಮಾಡಿದ ಹೆಣ್ಣುಮಕ್ಕಳು

ಚಿಕ್ಕಮಗಳೂರು: ಪುರುಷ ಪ್ರಾಧಾನ್ಯತೆಯ ಸಂಪ್ರದಾಯಕ್ಕೆ ತಿಲಾಂಜಲಿ ಇಟ್ಟು, ಹೆಣ್ಣು ಮಕ್ಕಳೇ ತಮ್ಮ ತಂದೆಯ ಅಂತ್ಯಸಂಸ್ಕಾರ ನಡೆಸಿ ಲಿಂಗ ಸಮಾನತೆಯ ಸಂದೇಶ…

10 hours ago

ಯುವತಿಯಿಂದ ಮದ್ವೆಗೆ ನಿರಾಕರಣೆ: HIV ಇಂಜೆಕ್ಷನ್ ಚುಚ್ಚಿದ ಯುವಕ.!

ಹೈದರಾಬಾದ್: ಮದುವೆಯಾಗಲು ನಿರಾಕರಿಸಿದ ಯುವತಿಯೊಬ್ಬಳಿಗೆ ಆಕೆಯ ಪ್ರಿಯಕರನೇ HIV ಪಾಸಿಟಿವ್ ಇಂಜಕ್ಷನ್ ಚುಚ್ಚಿದ ಆಘಾತಕಾರಿ ಘಟನೆ ಹೈದರಾಬಾದ್‌ನ ಮೆಡ್ಚಲ್ ಪ್ರದೇಶದಲ್ಲಿ…

19 hours ago

ಗುರುಭವನದಲ್ಲಿ ಅದ್ಧೂರಿ ವಿಶ್ವ ಮಹಿಳಾ ದಿನಾಚರಣೆ

ಸೇವೆಗಾಗಿ ಬಾಳು ಭಾರತ ಸೇವಾದಳ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಭಾರತ ಸೇವಾದಳ ದೇವನಹಳ್ಳಿ ತಾಲೂಕು ಘಟಕ, ಕರ್ನಾಟಕ ರಾಜ್ಯ ಪ್ರಾಥಮಿಕ…

1 day ago