ವಿಶ್ವ ಮಧುಮೇಹ ದಿನಾಚರಣೆ ಪ್ರಯುಕ್ತ ಅಂತಾರಾಷ್ಟ್ರೀಯ ಲಯನ್ಸ್ ಕ್ಲಬ್, ಲಯನ್ಸ್ ಕ್ಲಬ್ ಆಫ್ ಆರ್.ಎಲ್.ಜಾಲಪ್ಪ ಶಿಕ್ಷಣ ಸಂಸ್ಥೆ, ಅಕ್ಷಯ ಲಿಯೋ ಕ್ಲಬ್, ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಶಿಡ್ಲಘಟ್ಟ, ಲಯನ್ಸ್ ಕ್ಲಬ್ ಆಫ್ ಬೆಂಗಳೂರು, ನೆಲಮಂಗಲ, ತೊಂಡೇಭಾವಿ, ಆಲಿಪುರ, ಮತ್ತು ಶ್ರೀ ಕೊಂಗಾಡಿಯಪ್ಪ ಕಾಲೇಜಿನ ಎನ್‌ಸಿಸಿ ಕೆಡೆಟ್‌ಗಳ ಸಹಯೋಗದಲ್ಲಿ ನಗರದಲ್ಲಿಂದು ಸಾರ್ವಜನಿಕರಲ್ಲಿ ಮಧುಮೇಹದ ಬಗ್ಗೆ ಅರಿವು ಮೂಡಿಸಲು ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ವಾಕಾಥಾನ್ ನಡೆಸಿಲಾಯಿತು.
ವರ್ಷದಿಂದ ವರ್ಷಕ್ಕೆ ಮಧುಮೇಹ ರೋಗಿಗಳು ಹೆಚ್ಚಾಗುತ್ತಿದ್ದಾರೆ. ಜನರ ಜೀವನ ಶೈಲಿ ಬದಲಾವಣೆ, ಪಾಶ್ಚಿಮಾತ್ಯ ಆಹಾರ ಶೈಲಿ ಅನುಕರಣೆ, ಒತ್ತಡದ ಜೀವನ, ಜಂಕ್‌ಪುಡ್ ಸೇವನೆಯಿಂದ ಮಧುಮೇಹ ಹೆಚ್ಚಾಗುತ್ತಿದೆ. ಕಳೆದ 35 ವರ್ಷಗಳಲ್ಲಿ ದೇಶದಲ್ಲಿ ಶೇ.40ರಷ್ಟು ಮಧುಮೇಹಿಗಳ ಸಂಖ್ಯೆ ಹೆಚ್ಚಾಗಿದೆ ಎಂಬ ಹಲವಾರು ಸಂಶೋಧನಾ ವರದಿಗಳಿಂದ ತಿಳಿದುಬಂದಿದೆ. ಮಧುಮೇಹ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯತೆ ಇದೆ.
ಸತ್ತ್ವಯುತ, ಪರಿಶುದ್ಧ ಆಹಾರ ಸೇವನೆ, ದಿನನಿತ್ಯ ದೈಹಿಕ ಚಟುವಟಕಗಳಲ್ಲಿ ತೊಡಗಿದರೆ ಮಧುಮೇಹ ಹತೋಟಿಗೆ ತರಬಹುದು ಎಂಬೆಲ್ಲಾ ಅಂಶಗಳನ್ನು ಸಾರ್ವಕನಿಕರಲ್ಲಿ ಜಾಗೃತಿ ಮೂಡಿಸಲಾಯಿತು.