ವಿಶ್ವಕಪ್ ನಲ್ಲಿ ಭಜ೯ರಿ ಆರಂಭ ಪಡೆದಿರುವ ಭಾರತ ತಂಡ ತನ್ನ ಗೆಲುವಿನ ಓಟವನ್ನು ಬಾಂಗ್ಲಾದೇಶದ ವಿರುದ್ದವೂ ಮುಂದುವರಿದು ಅಜೇಯವಾಗಿ ಟೇಬಲ್ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿತು.
ಆಲ್ ರೌಂಡರ್ ಶಕಿಬ್ ಅಲ್ ಹಸನ್ ಅವರ ಅನುಪಸ್ಥಿತಿಯಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶದ ನಾಯಕ ಶಾಂಟೋ ಬ್ಯಾಟಿಂಗ್ ಆಯ್ದುಕೊಂಡರು, ಬಾಂಗ್ಲಾದೇಶದ ಆರಂಭಿಕ ಆಟಗಾರರಾದ ತಾನ್ಜಿನ್ ಹಸನ್ (51) ಹಾಗೂ ಲಿಟನ್ ದಾಸ್ (66) ರನ್ ಗಳಿಸಿ 93 ರನ್ ಗಳ ಭದ್ರ ಅಡಿಪಾಯ ಹಾಕಿದರು.
ಉತ್ತಮವಾಗಿ ಆಡುತ್ತಿದ್ದ ಬ್ಯಾಟಿಂಗ್ ಪಡೆಯನ್ನು ಬಲೆಗೆ ಬೀಳಿಸಿದ್ದು ಕುಲದೀಪ್ ಯಾದವ್ ಹಾಗೂ ರವೀಂದ್ರ ಜಡೇಜಾ ಬಲೆಗೆ ಬೀಳಿಸಿದರು, ನಂತರ ಬಂದ ಯಾವುದೇ ಬ್ಯಾಟ್ಸಮನ್ ಗಳು ಹೆಚ್ಚು ಹೊತ್ತು ನಿಲ್ಲಲಿಲ್ಲ.
ಆದರೆ ಮಧ್ಯಮ ಕ್ರಮಾಂಕದ ಆಟಗಾರರಾದ ರಹೀಮ್ (38) ಹಾಗೂ ಮೊಹಮದ್ ಉಲ್ಲಾ (46) ರನ್ ಗಳಿಸುವ ಮೂಲಕ ತಂಡವನ್ನು 250 ರ ಗಡಿ ದಾಟಿಸಿದರು, ಭಾರತದ ಪರವಾಗಿ ಜಸ್ಪ್ರಿತ್ ಬುಮ್ರಾ, ಸಿರಾಜ್ ಹಾಗೂ ಅಲ್ ರೌಂಡರ್ ರವೀಂದ್ರ ಜಡೇಜಾ ತಲಾ ಎರಡು ವಿಕೆಟ್ ಪಡೆದರೆ ಶಾರ್ದುಲ್ ಠಾಕೂರ್ ಹಾಗೂ ಕುಲದೀಪ್ ಯಾದವ್ ಒಂದು ವಿಕೆಟ್ ಪಡೆದರು
ಗುರಿ ಬೆನ್ನತ್ತಿದ್ದ ಭಾರತ ತಂಡದ ಆರಂಭಿಕ ಆಟಗಾರರಾದ ನಾಯಕ ರೋಹಿತ್ ಶರ್ಮಾ ಏಳು ಬೌಂಡರಿ ಹಾಗೂ ಎರಡು ಸಿಕ್ಸರ್ ಸಹಿತ (48) ಹಾಗೂ ಶುಭಮನ್ ಗಿಲ್ ಐದು ಬೌಂಡರಿ ಹಾಗೂ ಎರಡು ಸಿಕ್ಸರ್ ಸಿಡಿಸಿ (53) ರನ್ ಗಳಿಸುವ ಮೂಲಕ 88 ರನ್ ಜೊತೆಯಾಟ ನಡೆಸಿ ಹಸನ್ ಮೊಹಮದ್ ಹಾಗೂ ಹಸನ್ ಮಿರ್ಜಾಗೆ ವಿಕೆಟ್ ಒಪ್ಪಿಸಿದರು.
ನಂತರ ಒಂದಾದ ಅನುಭವಿ ಆಟಗಾರ ವಿರಾಟ್ ಕೋಹ್ಲಿ ಆರು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ನೆರವಿನಿಂದ (103)ಹಾಗೂ ಮಧ್ಯಮ ಕ್ರಮಾಂಕದ ಆಟಗಾರ ಶ್ರೇಯಸ್ ಅಯ್ಯರ್(19) ಹಾಗೂ ಕನ್ನಡಿಗ ಕೆ.ಎಲ್. ರಾಹುಲ್ (34) ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.
ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡಿದ ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.