ಪಾಯಿಂಟ್ ಪಟ್ಟಿಯ ಅಗ್ರ ಕ್ರಮಾಂಕದ ಎರಡು ತಂಡಗಳ ಜಿದ್ದಾಜಿದ್ದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ದಾಖಲೆಯ 49 ನೇ ಶತಕದಬ್ಬರ ಹಾಗೂ ರವೀಂದ್ರ ಜಡೇಜಾ ಮತ್ತು ಕುಲದೀಪ್ ಯಾದವ್ ಅವರ ಕೈಚಳಕದಿಂದ 243ರನ್ ಗಳ ಬೃಹತ್ ಜಯ ಸಾಧಿಸಿತು.
ಕೊಲ್ಕತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡರು, ಆರಂಭಿಕ ಆಟಗಾರರಾದ ಶುಭ್ಮನ್ ಗಿಲ್ (23) ಹಾಗೂ ರೋಹಿತ್ ಶರ್ಮಾ (40) ರನ್ ಭರ್ಜರಿ ಆರಂಭ ನೀಡಿದರು.
ಮೊದಲ ವಿಕೆಟ್ ನಷ್ಟಕ್ಕೆ 63 ರನ್ ಗಳಿಸಿದ್ದ ಭಾರತ ತಂಡ ನಾಯಕ ರೋಹಿತ್ ಶರ್ಮಾ ಅವರನ್ನು ಕಳೆದುಕೊಂಡಿತು, ನಂತರ ಗಿಲ್ ಕೂಡ ವಿಕೆಟ್ ಒಪ್ಪಿಸಿದರು, ಆಗ ಕ್ರೀಸ್ ಗೆ ಬಂದ ಮಧ್ಯಮ ಕ್ರಮಾಂಕದ ಆಟಗಾರ ಶ್ರೇಯಸ್ ಅಯ್ಯರ್ ಹಾಗೂ ವಿರಾಟ್ ಕೊಹ್ಲಿ ಮೂರನೇ ವಿಕೆಟ್ ಗೆ 134 ರನ್ ಗಳಿಸುವ ಮೂಲಕ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ದರು.
ದಾಖಲೆಯ 49 ನೇ ಶತಕ ಸಿಡಿಸಿದ ವಿರಾಟ್ ಕೊಹ್ಲಿ (101) ರನ್ ಗಳಿಸಿ ಅಜೇಯರಾಗಿ ಉಳಿದರೆ, ಶ್ರೇಯಸ್ ಅಯ್ಯರ್ (77), ಸೂರ್ಯ ಕುಮಾರ್ ಯಾದವ್ (22) ಹಾಗೂ ಅಲ್ ರೌಂಡರ್ ರವೀಂದ್ರ ಜಡೇಜಾ (29) ರನ್ ಗಳಿಸುವ ಮೂಲಕ ತಂಡದ ಮೊತ್ತ 326 ರನ್ ಗಳಿಸಲು ನೆರವಾದರು.
ಬೃಹತ್ ಮೊತ್ತ ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರರಾದ ನಾಯಕ ತೆಂಬು ಬವುಮಾ (11) ಹಾಗೂ ಟೂರ್ನಿಯಲ್ಲಿ ಅತ್ಯಧಿಕ ರನ್ ಗಳಿಸಿರುವ ಕ್ವಿಂಟಾನ್ ಡಿ ಕಾಕ್ (5) ರನ್ ಗಳಿಸಿ ಕ್ರಮವಾಗಿ ಜಡೇಜಾ ಹಾಗೂ ಸಿರಾಜ್ ಗೆ ವಿಕೆಟ್ ಒಪ್ಪಿಸಿದರು.
ನಂತರ ಬಂದ ಮಧ್ಯಮ ಕ್ರಮಾಂಕದ ಆಟಗಾರರಾದ ಡುಸೇನ್ (13), ಕ್ಲಾಸನ್ (1), ಮಾಕ್ರಮ್ (9), ಹಾಗೂ ಮಿಲ್ಲರ್ (11) ರನ್ ಗಳಿಸುವಲ್ಲಿ ಪರದಾಡಿ ವಿಕೆಟ್ ಒಪ್ಪಿಸಿದರು,ಆ ಮೂಲಕ ತಂಡ 83 ರನ್ ಗೆ ಆಲೌಟ್ ಆಯಿತು.
ಭಾರತದ ಪರವಾಗಿ ಆಲ್ ರೌಂಡರ್ ರವೀಂದ್ರ ಜಡೇಜಾ (5), ಕುಲದೀಪ್ ಯಾದವ್ ಹಾಗೂ ಮೊಹಮದ್ ಶಮಿ ಎರಡು ವಿಕೆಟ್ ಕಬಳಿಸಿದರೆ ಸಿರಾಜ್ ಒಂದು ವಿಕೆಟ್ ಪಡೆದು ಎದುರಾಳಿಗಳನ್ನು ಆಲೌಟ್ ಮಾಡಿದರು.
ಏಕದಿನ ಕ್ರಿಕೆಟ್ ನಲ್ಲಿ ಅತ್ಯಧಿಕ ಶತಕ (49) ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿದ್ದ ದಾಖಲೆಯ ಶತಕ ಸಿಡಿಸಿ ದಾಖಲೆ ಸರಿಗಟ್ಟಿದರು, ಆ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.