ಅಹಮದಾಬಾದ್: ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೇಂಡ್ ಹಾಗೂ ರನ್ನರ್ ಆಫ್ ನ್ಯೂಜಿಲ್ಯಾಂಡ್ ನಡುವಣ ಪಂದ್ಯದಲ್ಲಿ ಡೇವಿಡ್ ಕಾನ್ವೆ ಹಾಗೂ ರಚಿನ್ ರವೀಂದ್ರ ಅವರ ದ್ವಿಶತಕದ ಜೊತೆಯಾಟದಿಂದ ನೆರವಿನಿಂದ ಒಂಬತ್ತು ವಿಕೆಟ್ ಗಳ ಬೃಹತ್ ಜಯ ಸಾಧಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಜೋಸ್ ಬಟ್ಲರ್ ನಾಯಕತ್ವದ ಇಂಗ್ಲೇಂಡ್ ತಂಡ ಉತ್ತಮ ಆರಂಭ ಪಡೆಯಿತು ಆರಂಭಿಕ ಆಟಗಾರರಾದ ಜಾನಿ ಬೈರಸ್ಟೊ (33) ಹಾಗೂ ಮಲಾನ್ (14) ರನ್ ಗಳಿಸಿದರು.
ಆಂಗ್ಲರ ಪರವಾಗಿ ಅನುಭವ ಆಟಗಾರ ಜೋ ರೂಟ್ (77) , ಹ್ಯಾರಿ ಬ್ರೂಕ್(25) ಹಾಗೂ ನಾಯಕ ಜೋಶ್ ಬಟ್ಲರ್ (43) ರನ್ ಗಳಿಸುವ ಮೂಲಕ ತಂಡವನ್ನು 280ರ ಗಡಿ ದಾಟಿಸಿದರು ಹಾಗೂ ಉಳಿದ ಎಲ್ಲಾ ಆಟಗಾರರು ಎರಡಂಕಿ ಮೊತ್ತ ದಾಖಲಿಸಿದರು.
ಗುರಿ ಬೆನ್ನತ್ತಿದ್ದ ಕೀವೀಸ್ ತಂಡದ ಆರಂಭಿಕ ಆಟಗಾರ ವಿಲ್ ಯಂಗ್ (0) ಸ್ಯಾಮ್ ಕರನ್ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು, ನಂತರ ಒಂದಾದ ಡೇವಿಡ್ ಕಾನ್ವೆ (152) ಹಾಗೂ ಬೆಂಗಳೂರು ಮೂಲದ ಕೀವೀಸ್ ಕನ್ನಡಿಗ ರಚಿನ್ ರವೀಂದ್ರ (123) ರನ್ ಗಳಿಸುವ ಮೂಲಕ 275 ರನ್ ಗಳ ಜೊತೆಯಾಟ ನೆರವಿನಿಂದ 9 ವಿಕೆಟ್ ಗೆಲುವು ಸಾಧಿಸುವ ಮೂಲಕ ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ಶುಭಾರಂಭ ಮಾಡಿದರು.
ಆಲ್ ರೌಂಡರ್ ಆಟವಾಡಿದ ರಚಿನ್ ರವೀಂದ್ರ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.