ಲಕ್ನೋದಲ್ಲಿ ನಡೆದ ವಿಶ್ವಕಪ್ ನ ಆರನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೇಂಡ್ ತಂಡದ ವಿರುದ್ಧ 100 ರನ್ ಗಳ ಗೆಲುವು ಸಾಧಿಸುವ ಮೂಲಕ ಅಜೇಯ ಓಟದೊಂದಿಗೆ ಭಾರತ ಅಗ್ರಸ್ಥಾನ ಅಲಂಕರಿಸಿತು.
ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಭಾರತ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದರು, ಆರಂಭಿಕ ಆಟಗಾರರಾದ ನಾಯಕ ರೋಹಿತ್ ಶರ್ಮಾ (87) ರನ್ ಗಳಿಸಿದರೆ ಯುವ ಆಟಗಾರ ಶುಭ್ಮನ್ ಗಿಲ್ (9) ರನ್ ಗಳಿಸಿ ನಿರಾಸೆ ಮೂಡಿಸಿದರು.
ನಂತರ ಬಂದ ಅನುಭವಿ ಆಟಗಾರ ವಿರಾಟ್ ಕೋಹ್ಲಿ (0), ಶ್ರೇಯಸ್ ಅಯ್ಯರ್ (4), ಆಲ್ ರೌಂಡರ್ ರವೀಂದ್ರ ಜಡೇಜಾ (8) ರನ್ ಗಳಿಸಿ ಔಟಾದರು, ಕನ್ನಡಿಗ ಕೆ.ಎಲ್ . ರಾಹುಲ್ (39), ಸೂರ್ಯ ಕುಮಾರ್ ಯಾದವ್ (49) ಗಳಿಸುವ ಮೂಲಕ ತಂಡದ ಮೊತ್ತವನ್ನು 229 ರನ್ ಗೆ ಏರಿಸಿದರು.
230 ರನ್ ಗಳ ಗುರಿ ಬೆನ್ನತ್ತಿದ್ದ ಆಂಗ್ಲರನ್ನು ಭಾರತದ ಬೌಲರ್ ಗಳು ಆರಂಭದಲ್ಲೇ ಕಾಡಿದರು, ಬೈರ್ಸ್ಟೋ(14) ಹಾಗೂ ಮಲಾನ್ (16) ಗಳಿಸಿ ಭರವಸೆ ಮೂಡಿಸಿದ್ದರು ಆದರೆ ಕ್ರಮವಾಗಿ ಮೊಹಮ್ಮದ್ ಶಮಿ ಹಾಗೂ ಜಸ್ಪ್ರಿತ್ ಬುಮ್ರಾ ಆಘಾತ ನೀಡಿದರು.
ನಂತರ ಬಂದ ಜೋ ರೂಟ್ ಹಾಗೂ ಆಲ್ ರೌಂಡರ್ ಬೆನ್ ಸ್ಪೋಕ್ ಸೊನ್ನೆ ಸುತ್ತಿದರು, ನಾಯಕ ಜೋಸ್ ಬಟ್ಲರ್ (10) ಹಾಗೂ ಮೊಯಿನ್ ಆಲಿ (15) ರನ್ ಗಳಿಸಿ ಔಟಾದರು.
ಭಾರತದ ಪರವಾಗಿ ವೇಗಿ ಜಸ್ಪ್ರಿತ್ ಬುಮ್ರಾ (3), ಮೊಹಮ್ಮದ್ ಶಮಿ (4) ಕುಲದೀಪ್ ಯಾದವ್ (2) ಹಾಗೂ ರವೀಂದ್ರ ಜಡೇಜಾ ಒಂದು ವಿಕೆಟ್ ಪಡೆದು ವಿಕೆಟ್ ಪಡೆದು ಮಿಂಚಿದರು.