ನವದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ವಿಶ್ವಕಪ್ ನ ಎರಡನೇ ಪಂದ್ಯದಲ್ಲಿ ಅಫ್ಗಾನಿಸ್ಥಾನದ ವಿರುದ್ಧ ನಾಯಕ ರೋಹಿತ್ ಶರ್ಮಾ ಅವರ ಅಧ್ಬುತ ಬ್ಯಾಟಿಂಗ್ ಹಾಗೂ ಬುಮ್ರಾ ಅವರ ಮಿಂಚಿನ ಬೌಲಿಂಗ್ ಪ್ರದರ್ಶನದಿಂದ ಭಾರತ ತಂಡ ಜಯ ಸಾಧಿಸಿತು.
ಟಾಸ್ ಗೆದ್ದ ಅಫ್ಗಾನಿಸ್ಥಾನದ ನಾಯಕ ಶಾಹಿದಿ ಬ್ಯಾಟಿಂಗ್ ಆಯ್ದುಕೊಂಡರು, ಬೃಹತ್ ಮೊತ್ತ ಕಲೆಹಾಕುವ ಯೋಚನೆಯಲ್ಲಿದ್ದ ಅಫ್ಗಾನಿಸ್ಥಾನಕ್ಕೆ ಉತ್ತಮ ಆರಂಭ ದೊರೆಯಲಿಲ್ಲ, ಆರಂಭಿಕ ಆಟಗಾರ ಇಬ್ರಾಹಿಂ ಜರ್ದನ್ (22) ಹಾಗೂ ಗುರ್ಬಜ್ (21) ರನ್ ಗಳಿಸಿದ್ದಾಗ ಬುಮ್ರಾ ಬ್ರೇಕ್ ಥ್ರೋ ನೀಡಿದರು, ರಹಮತ್(16) ರನ್ ಗಳಿಸಿದ್ದಾಗ ಶಾರ್ದುಲ್ ಠಾಕೂರ್ ವಿಕೆಟ್ ಪಡೆದರು.
ನಂತರ ಒಂದಾದ ನಾಯಕ ಶಾಹಿದಿ (80) ಹಾಗೂ ಹಜಮತ್ ಹುಲ್ಲಾ (62) ರನ್ ಗಳಿಸುವ ಮೂಲಕ ತಂಡವನ್ನು 272 ರನ್ ಗಡಿ ದಾಟಿಸಿದರು, ಭಾರತದ ಪರವಾಗಿ ವೇಗಿ ಜಸ್ಪ್ರಿತ್ ಬುಮ್ರಾ ನಾಲ್ಕು ವಿಕೆಟ್, ಹಾರ್ದಿಕ್ ಪಾಂಡ್ಯ 2 ವಿಕೆಟ್, ಕುಲದೀಪ್ ಯಾದವ್ ಹಾಗೂ ಠಾಕೂರ್ ತಲಾ ಒಂದು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ 16 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ (131) ರನ್ ಹಾಗೂ ಆರಂಭಿಕ ಆಟಗಾರ ಇಶಾನ್ ಕಿಶನ್ 5 ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ (47) ರನ್ ಗಳಿಸುವ ಮೂಲಕ ಮೊದಲ ವಿಕೆಟ್ ಗೆ 156 ರನ್ ಗಳಿಸಿ ಜಯದತ್ತ ಮುನ್ನಡೆಸಿದರು.
ನಂತರ ಒಂದಾದ ಕಿಂಗ್ ಕೊಹ್ಲಿ (55) ಹಾಗೂ ಮಧ್ಯಮ ಕ್ರಮಾಂಕದ ಆಟಗಾರ ಶ್ರೇಯಸ್ ಅಯ್ಯರ್ (25)ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು, ಅಫ್ಗಾನಿಸ್ಥಾನದ ಪರವಾಗಿ ರಶೀದ್ ಖಾನ್ ಎರಡು ವಿಕೆಟ್ ಪಡೆದರು.
ವಿಶ್ವಕಪ್ ನಲ್ಲಿ ಅತ್ಯಂತ ಹೆಚ್ಚು ಶತಕ ಸಿಡಿಸಿದ್ದ ಸಚಿನ್ ತೆಂಡೂಲ್ಕರ್ ಹಾಗೂ ವಿಶ್ವದಲ್ಲಿ ಅತ್ಯಂತ ಹೆಚ್ಚು ಸಿಕ್ಸರ್ ಸಿಡಿಸಿದ್ದ ಸ್ಪೋಟಕ ಬ್ಯಾಟ್ಸ್ಮನ್ ಕ್ರಿಸ್ ಗೇಲ್ ಅವರ ದಾಖಲೆಯನ್ನು ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.