ವಿಮರ್ಶಾ ಕ್ಷೇತ್ರಕ್ಕೆ ಡಿ.ಆರ್ ನಾಗರಾಜ್ ಅವರ ಕೊಡುಗೆ ಅಪಾರ- ಪ್ರಾಂಶುಪಾಲ ಡಾ.ಎಂ.ಚಿಕ್ಕಣ್ಣ 

ದೊಡ್ಡಬಳ್ಳಾಪುರ: ಡಿ.ಆರ್ ನಾಗರಾಜ್ ಅವರು ಕನ್ನಡ‌ ಸಾಹಿತ್ಯದ ಖ್ಯಾತ ವಿಮರ್ಶಕ, ಚಿಂತಕ ಮತ್ತು ಸಾಹಿತಿ. ಇವರ “ಸಾಹಿತ್ಯ ಕಥನ” ಎಂಬ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.”ಅಮೃತ ಮತ್ತು ಗರುಡ”, ಶಕ್ತಿ ಶಾರದೆಯ ಮೇಳ, ನಾಗಾರ್ಜುನ, ಅಲ್ಲಮಪ್ರಭು ಮತ್ತು ಶೈವ ಪ್ರತಿಭೆ, ಇವು ಇವರ ಪ್ರಸಿದ್ಧ ಕೃತಿಗಳು ಎಂದು ಶ್ರೀ ದೇವರಾಜ ಅರಸ್ ಪ್ರಥಮ ದರ್ಜೆ ಸಂಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ ಚಿಕ್ಕಣ್ಣ  ಹೇಳಿದರು.

 ಶ್ರೀ ದೇವರಾಜ ಅರಸ್ ಪ್ರಥಮ ದರ್ಜೆ ಸಂಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ “ಡಿ .ಆರ್ ನಾಗರಾಜ್ ಅವರ ಕೃತಿಗಳ ಅವಲೋಕನ “ಉಪನ್ಯಾಸ ಕಾರ್ಯಕ್ರಮದಲ್ಲಿ  ಮಾತನಾಡಿದ ಅವರು, ಪಾಶ್ಚಾತ್ಯ ದೇಶಗಳ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಅಲ್ಲದೆ ಭಾರತದ ವಿವಿಧ ಕ್ಷೇತ್ರಗಳಲ್ಲಿ ನಡೆದ ವಿಚಾರ ಸಂಕೀರ್ಣಗಳಲ್ಲಿ ಪಾಲ್ಗೊಂಡು ಪ್ರಬಂಧ ಮಂಡಿಸಿದ ಡಿ. ಆರ್ ನಾಗರಾಜ್ ಅವರು, ಆಳವಾದ ವಿದ್ವತ್ತಿನ ವ್ಯಕ್ತಿಯಾಗಿದ್ದವರು, ವಿಮರ್ಶಾ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದ್ದಲ್ಲದೆ  ಉತ್ತಮ ವಾಗ್ಮಿಯೂ ಸಹ ಆಗಿದ್ದರು. ಇಂಗ್ಲಿಷ್ ನಲ್ಲಾಗಲಿ, ಕನ್ನಡದಲ್ಲಾಗಲಿ ಅತ್ಯಂತ ಸಮರ್ಥವಾಗಿ ತಮ್ಮ ವಿಚಾರಗಳನ್ನು ಅಭಿವ್ಯಕ್ತಿಗೊಳಿಸುವ ಸಾಮರ್ಥ್ಯವನ್ನು ಹೊಂದಿದ್ದರು. ಹೀಗಾಗಿ ಅವರು ದೇಶ ವಿದೇಶಗಳ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕರ್ತವ್ಯವನ್ನು ನಿರ್ವಹಿಸಿದ್ದರು ಎಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಧ್ಯಾಪಕರಾದ ಜೆ.ವಿ.ಚಂದ್ರಶೇಖರ್, ಪ್ರಕಾಶ್ ಸಿ.ಪಿ, ಪಿ.ಚೈತ್ರ, ಬಿ.ಶ್ರೀನಿವಾಸ್, ನಾರಾಯಣಸ್ವಾಮಿ, ನಟರಾಜು, ಶ್ರೀಧರ್, ಗ್ರಂಥ ಪಾಲಕರಾದ ಎಚ್ ಕೆ ಪ್ರೇಮ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *