ವಿಭಾಗ ಮಟ್ಟದ ದಸರಾ ಕ್ರೀಡಾಕೂಟ: ವಾಲಿಬಾಲ್‌ ನಲ್ಲಿ ಬೆ.ಗ್ರಾ ತಂಡಕ್ಕೆ ಭರ್ಜರಿ ಗೆಲುವು: ರಾಜ್ಯಮಟ್ಟಕ್ಕೆ ಆಯ್ಕೆ

ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದ ಪುರುಷರ ವಾಲಿಬಾಲ್ ಪಂದ್ಯಾವಳಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ತಂಡ ಪ್ರಥಮ ಸ್ಥಾನ ಗಳಿಸುವ ಮೂಲಕ ರಾಜ್ಯಮಟ್ಟ ಕ್ರೀಡಾಕೂಟಕ್ಕೆ ಆಯ್ಕೆಯಾಗಿದೆ.

ಚಿಕ್ಕಬಳ್ಳಾಪುರ ತಂಡದ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ತಂಡ 2 ಸೆಟ್ ಗಳಲ್ಲಿ ವಿಜಯದ ಪತಾಕೆ ಹಾರಿಸಿತು. ಮೈಸೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ತಂಡ ಭಾಗವಹಿಸಲಿದೆ.

ವಿಜಯ ಸಾಧಿಸಿದ ತಂಡಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪರವಾಗಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಟಿ. ಜಯಲಕ್ಷ್ಮಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ತಂಡದ ತರಬೇತುದಾರರಾಗಿದ್ದ ಶರತ್ ಚಂದ್ರ ಹಾಗೂ ದಯಾನಂದ ಅವರಿಗೂ ಅಭಿನಂದನೆ ತಿಳಿಸಿ, ರಾಜ್ಯಮಟ್ಟದ ಪಂದ್ಯಾವಳಿಗೆ ಶುಭ ಹಾರೈಸಲಾಗಿದೆ.

ವಕೀಲರಾದ ಎಸ್.ಡಿ.ಮುನಿರಾಜು, ರಾಜಘಟ್ಟ ಗ್ರಾ.ಪಂ.ಸದಸ್ಯ ಶಿವಕುಮಾರ್, ಮಂಜು ರಾಜಘಟ್ಟ ಅವರು ತಂಡದ ಪ್ರೋತ್ಸಾಹಕರಾಗಿದ್ದಾರೆ.

Leave a Reply

Your email address will not be published. Required fields are marked *