ರಾಜ್ಯಾದ್ಯಂತ ನೀರಿಗಾಗಿ ಕೊಳವೆಬಾವಿ, ಬೋರ್‌ವೆಲ್‌ಗಳನ್ನು ಕೊರೆದು, ನೀರು ಸಿಗದಿದ್ದ ಸಂದರ್ಭದಲ್ಲಿ ಕೊಳವೆಬಾವಿ, ಬೋರ್‌ವೆಲ್‌ಗಳನ್ನು ಮುಚ್ಚದೇ, ನೆಲಸಮ ಮಾಡದೆ ಇರುವುದರಿಂದ, ಸಣ್ಣ ಮಕ್ಕಳು ಕೊಳವೆಬಾವಿ, ಬೋರ್‌ವೆಲ್‌ಗಳಲ್ಲಿ ಬಿದ್ದು, ಆಗಿಂದಾಗ್ಗೆ ಅವಘಡವಾಗುತ್ತಿರುವ ವಿಷಯವು ಗಮನದಲ್ಲಿರುತ್ತದೆ.
ಆದ್ದರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಈಗಾಗಲೇ ಕೊರೆಯಿಸಿರುವ, ಕೊರೆಯಿಸುತ್ತಿರುವ ಕೊಳವೆಬಾವಿ, ಬೋರ್‌ವೆಲ್‌ಗಳನ್ನು ನೀರು ಸಿಗದೇ ಇರುವ ಸಂದರ್ಭಗಳಲ್ಲಿ ಅಥವಾ ನೀರು ಬತ್ತಿಹೋಗಿ ಅಳವಡಿಸಿರುವ ಮೋಟರ್, ಪಂಪ್ ಮತ್ತು ಕೇಸಿಂಗ್‌ಗಳನ್ನು ತೆಗೆದಂತಹ ಸಂದರ್ಭಗಳಲ್ಲಿ ಕೂಡಲೇ ಮುಚ್ಚುವಂತೆ, ನೆಲಸಮ ಮಾಡಬೇಕು.
ಒಂದು ವೇಳೆ ಕೊಳವೆಬಾವಿ, ಬೋರ್‌ವೆಲ್ ಗಳನ್ನು ಕೊರೆಯಿಸಿ, ನೀರು ಸಿಗದಂತಹ ಕೊಳವೆ ಬಾವಿಗಳನ್ನು ಮುಚ್ಚದೇ ಇದ್ದ ಪಕ್ಷದಲ್ಲಿ ಜಮೀನಿನ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.