ಬೆಂಗಳೂರು ಉತ್ತರ ವಿವಿಯ ಬಿಎಸ್ಸಿ ವಿಧಿವಿಜ್ಞಾನ(forensic science) ವಿಭಾಗದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ದುರ್ಗೇನಹಳ್ಳಿಯ ಅಂಜನ್ ಜಿ.ಎಸ್. ಎಂಬ ವಿದ್ಯಾರ್ಥಿ ನಾಲ್ಕನೇ ರ್ಯಾಂಕ್ ಪಡೆದು ತಾಲೂಕಿಗೆ ಕೀರ್ತಿ ತಂದಿದ್ದಾರೆ.
ಬೆಂಗಳೂರಿನ ಕೆಆರ್ ಪುರಂನಲ್ಲಿನ ಎಸ್ ಸಿಎ ಕಾಲೇಜಿನಲ್ಲಿ ಅಂಜನ್ ಜಿ.ಎಸ್ ಅವರು ಬಿಎಸ್ಸಿ ವಿಧಿವಿಜ್ಞಾನ(forensic science) ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು.
ನಾಲ್ಕನೇ ರ್ಯಾಂಕ್ ಪಡೆದ ಅಂಜನ್ ಜಿ.ಎಸ್ ಅವರಿಗೆ ಕನ್ನಡಪರ ಸಂಘಟನೆ ಮುಖಂಡರು, ಕಾಲೇಜು ಆಡಳಿತ ಮಂಡಳಿ, ಉಪನ್ಯಾಸಕರು, ಗಣ್ಯರು ಸೇರಿದಂತೆ ಇತರರು ಸಿಹಿ ತಿನಿಸಿ ಅಭಿನಂದಿಸಿದರು.