ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಕ್ಷೇತ್ರದಲ್ಲಿನ 276 ಮತಗಟ್ಟೆಗಳಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಮತ್ತು ಉಪವಿಭಾಗಧಿಕಾರಿ ತೇಜಸ್ ಕುಮಾರ್ ತಿಳಿಸಿದರು.
ನಗರದ ಉಪವಿಭಾಗಧಿಕಾರಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಈಗಾಗಲೇ ಕಳೆದ ಎರಡು ವಾರಗಳಿಂದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 276 ಮತಗಟ್ಟೆಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದ M-3 ಶ್ರೇಣಿಯ ಇವಿಎಂ ಮತಯಂತ್ರ ಹಾಗೂ ವಿವಿಪ್ಯಾಟ್ ಪ್ರಾತ್ಯಕ್ಷಿಕೆ ಮಾಡಲಾಗಿದೆ. ಮತದಾರರು ಹಾಗೂ ರಾಜಕೀಯ ಮುಖಂಡರಿಗೆ ಈ ಬಗ್ಗೆ ಸ್ಪಷ್ಟವಾಗಿ ಮಾಹಿತಿ ರವಾನೆ ಮಾಡಲಾಗಿದೆ.
ಈ ಕುರಿತು ಈವರೆಗೆ ಯಾವುದೇ ದೂರು ಬಂದಿಲ್ಲ, ತಾಲೂಕಿನ ಜನತೆಯಲ್ಲಿ ಮತದಾನದ ಮಹತ್ವದ ಬಗ್ಗೆ
ಅರಿವು ಮೂಡಿಸಿ ಈ ಬಾರಿ ಹೆಚ್ಚಿನ ಮತದಾನಕ್ಕೆ ಕ್ರಮವಹಿಸಲಾಗಿದೆ. ಮತದಾನದ ಪ್ರಮಾಣ ಹೆಚ್ಚಳವೇ ನಮ್ಮ ಗುರಿಯಾಗಿದ್ದು, ಪ್ರಾಮಾಣಿಕ, ಪಾರದರ್ಶಕವಾದ ಚುನಾವಣಾ ಮಾಡಲು ಕ್ರಮತೆಗೆದುಕೊಳ್ಳಲಾಗಿದೆ ಎಂದರು. 80 ವರ್ಷ ಮೀರಿದ ಮತದಾರರಲ್ಲಿ 3,349 ಮಂದಿಯನ್ನು ಗುರುತಿಸಲಾಗಿದ್ದು, ಮನೆಯಿಂದಲೇ ಅಂಚೆ ಮತದಾನ ಮಾಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.
ತಹಶೀಲ್ದಾರ್ ಮೋಹನಕುಮಾರಿ ಮಾತನಾಡಿ ಕಳೆದ ಅಕ್ಟೋಬರ್ ನಿಂದಲೇ ಚುನಾವಣಾ ಆಯೋಗದ ನಿರ್ದೇಶನದಂತೆ ಚುನಾವಣಾ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ.
ಕ್ಷೇತ್ರದ 276 ಮತಗಟ್ಟೆಗಳಲ್ಲಿ ಅಗತ್ಯ ಮೂಲಸೌಕರ್ಯ ಖಾತ್ರಿಪಡಿಸಿಕೊಳ್ಳಲಾಗಿದೆ. ವಿದ್ಯುತ್, ವೀಲ್ ಚೇರ್, ನೀರು, ಶೌಚಾಲಯ ಸೇರಿದಂತೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಸಂಪೂರ್ಣ ಮಾಡಿದ್ದೇವೆ ಎಂದರು.
ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ ಅಂಕಿ ಅಂಶ
ದೊಡ್ಡಬಳ್ಳಾಪುರ ಒಟ್ಟು ಮತದಾರರ ಸಂಖ್ಯೆ 2,12,028
ಪುರುಷರು : 1,05,606
ಮಹಿಳಾ ಮತದಾರರು: 1,06,420
ಇತರೆ : 02
80ಕ್ಕೂ ಹೆಚ್ಚು ವಯಸ್ಸಿನ ಮತದಾರರು; 3349
ಒಟ್ಟು ಮತಗಟ್ಟೆಗಳು : 276
ಹೋಬಳಿವಾರು ಮತಗಟ್ಟೆಗಳು:
ಕಸಬಾ ಹೋಬಳಿ – 63,
ಮಧುರೆ ಹೋಬಳಿ – 37
ದೊಡ್ಡಬೆಳವಂಗಲ ಹೋಬಳಿ – 49
ಸಾಸಲು ಹೋಬಳಿ – 34
ನಗರಸಭೆ ವ್ಯಾಪ್ತಿ -79
ಬಾಶೆಟ್ಟಿಹಳ್ಳಿ ಪ.ಪಂ – 14
ಸೂಕ್ಷ್ಮ ಮತಗಟ್ಟೆಗಳು: 80
ಸಾಮಾನ್ಯ ಮತಗಟ್ಟೆಗಳು :196
ಚೆಕ್ ಪೋಸ್ಟ್ ಗಳ ಸಂಖ್ಯೆ : 06
ಕಸಬಾ ಹೋಬಳಿ( ಹೊಸಹುಡ್ಯ ಗೇಟ್, ಕೆಸಿಪಿ ಸರ್ಕಲ್, ರಾಜಘಟ್ಟ ಚೆಕ್ ಪೋಸ್ಟ್)
ದೊಡ್ಡ ಬೆಳವಂಗಲ ಹೋಬಳಿ (ಚಿಕ್ಕ ಬೆಳವಂಗಲ ಶಾಲಾ ಮುಂಭಾಗ) ಆರೂಢಿ ಚೆಕ್ ಪೋಸ್ಟ್,
ಮಧುರೆ ಹೋಬಳಿ ( ದೊಡ್ಡ ಬೆಳವಂಗಲ ಕ್ರಾಸ್ ಕನಸವಾಡಿ ಚೆಕ್ ಪೋಸ್ಟ್.
ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಂಟ್ರೋಲ್ ರೂಂ ನಂಬರ್ 080 27622002
ಮತಗಟ್ಟೆಗಳ ಸಿಬ್ಬಂದಿ ಸಂಖ್ಯೆ 1325
ವಯಸ್ಸಿನ ವಾರು ಮತದಾರರ ವಿವರ:
ವಯಸ್ಸು – ಮತದಾರರ ಸಂಖ್ಯೆ
18-19 5,186
20 -29. 40,234
30-39. 50,287
40-49. 46,352
50-59. 33,052
60-69. 20,452
70-79. 11,458
80-89. 4,021
90-99. 915
100+. 71
ಅಂಚೆ ಮತಗಳ ವಿವರ ಒಟ್ಟು :8,356
80 ವರ್ಷ ವಯಸ್ಸಿನವರ ಮತದಾರರ ಸಂಖ್ಯೆ – 5007
ಅಂಗವಿಕಲ ಮತದಾರರ ಸಂಖ್ಯೆ : 3349
ಸ್ಟ್ರಾಂಗ್ ರೂಂ ಸ್ಥಳ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸ್ನಾತಕೋತ್ತರ ಕೇಂದ್ರ, ದೊಡ್ಡಬಳ್ಳಾಪುರ ಇಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಚುನಾವಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಾರ್ವಜನಿಕರು ಸಹಕರಿಸಬೇಕು ಎಂದು ತಿಳಿಸಿದರು.