ವಿದ್ಯುತ್ ಸ್ಪರ್ಶಿಸಿ ಗೃಹಿಣಿಯ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಪಾಲ್ ಪಾಲ್ ದಿನ್ನೆ ಗ್ರಾಮದಲ್ಲಿ ಶನಿವಾರ ಸಂಜೆ ಸುಮಾರು 7 ಗಂಟೆ ಸಮಯದಲ್ಲಿ ನಡೆದಿದೆ.
ಮನುಶ್ರೀ (29), ಸಾವನ್ನಪ್ಪಿರುವ ಗೃಹಿಣಿ, ಹತ್ತು ವರ್ಷಗಳ ಹಿಂದೆ ಸಿಂಗನಾಯಕನಹಳ್ಳಿಯ ಮನುಶ್ರೀ ಪಾಲ್ ಪಾಲ್ ದಿನ್ನೆ ಗ್ರಾಮದ ಮೋಹನ್ ಕುಮಾರ್ (35) ಗೆ ಕೊಟ್ಟು ಮದುವೆ ಮಾಡಿದ್ದ ಮನುಶ್ರೀ ತಂದೆ ಪ್ರಕಾಶ್, ಇವರ ದಾಂಪತ್ಯಕ್ಕೆ ಒಂದು ಗಂಡು ಮಗು ಸಹ ಇದೆ.
ನಿನ್ನೆ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಗಂಡನ ಮನೆಯವರ ಪ್ರಕಾರ ಜಾನುವಾರುಗಳಿಗೆ ಮಷಿನ್ ನಲ್ಲಿ ಮೇವು ಕಟ್ ಮಾಡುವಾಗ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ ಮೃತಳ ಕುಟುಂಬಸ್ಥರು ಕೊಲೆ ಆರೋಪ ಮಾಡಿದ್ದು, ವರದಕ್ಷಿಣೆ ಕಾರಣಕ್ಕೆ ಕಿರುಕುಳ ಕೊಟ್ಟು ಕೊಲೆ ಮಾಡಿರುವುದಾಗಿ ಆರೋಪ ಮಾಡಿದ್ದಾರೆ.
(ಮನುಶ್ರೀ-ಮೋಹನ್‌ಕುಮಾರ್ ದಂಪತಿ)
ಈ ಆರೋಪದ ಮೇಲೆ ಮನುಶ್ರೀ ಗಂಡನಾದ ಮೋಹನ್ ಕುಮಾರ್ ನನ್ನು ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.