ವಿದ್ಯುತ್ ಚಾಲಿತ ನೇಕಾರ ಕೂಲಿ ಕಾರ್ಮಿಕರ ಸಂಘ ಹಾಗೂ ಇತರೆ ಸಂಘ ಸಂಸ್ಥೆಗಳ ವತಿಯಿಂದ ವಿದ್ಯುತ್ ದರ ಏರಿಕೆ ಖಂಡಿಸಿ ನಗರದ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿ ಬಳಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರ ಬೇಡಿಕೆ
*ನೇಕಾರಿಕೆ ಉದ್ಯೋಗಕ್ಕಾಗಿ ಸರ್ಕಾರ ರೂಪಿಸಿರುವ ವಿಶೇಷ ಯೋಜನೆಯ ಒಂದು ರೂಪಾಯಿ 25ಪೈಸಾ ದರದಲ್ಲಿ ವಿದ್ಯುತ್ ಬಿಲ್ ಬರಬೇಕು
*ನೇಕಾರಿಕೆ ಮೀಟರ್ ಮಿನಿಮಮ್ ಚಾರ್ಜ್ ಎಚ್.ಪಿ ಒಂದಕ್ಕೆ 80 ರಿಂದ 140 ಏರಿಸಿರುವ ಹಾಗೂ ಎಫ್.ಎಸಿ ಶುಲ್ಕ ತಕ್ಷಣ ರದ್ದುಗೊಳಿಸಬೇಕು
* ಹೊಂದಾಣಿಕೆ ಶುಲ್ಕ ಹಾಗೂ ಇತರೆ ಶುಲ್ಕಗಳನ್ನು ತಕ್ಷಣ ರದ್ದುಗೊಳಿಸಬೇಕು
*ಕೆಟ್ಟು ಹೋಗಿರುವ ಮೀಟರ್ ಗಳನ್ನು ಯಾವುದೇ ಶುಲ್ಕ ತೆಗೆದುಕೊಳ್ಳದೆ ತಕ್ಷಣ ಬದಲಾವಣೆ ಮಾಡಿಕೊಡಬೇಕು.
*ಹೆಚ್ಚಾಗಿರುವ ಹೆಚ್.ಪಿಯನ್ನು ಕಡಿಮೆ ಮಾಡಿಕೊಳ್ಳಲು ಯಾವುದೇ ಶುಲ್ಕ ಪಡೆಯಬಾರದು
*ಆರ್ ಆರ್ ಸಂಖ್ಯೆಯಲ್ಲಿ ನಮೂದಾಗಿರುವ ವ್ಯಕ್ತಿಯೂ ಮರಣಹೊಂದಿದ್ದಲ್ಲಿ ಅವರ ಹೆಸರನ್ನು ತೆಗೆದು ಕುಟುಂಬದ ಸದಸ್ಯರಿಗೆ ವರ್ಗಾವಣೆ ಮಾಡಬೇಕು
* ನೇಕಾರಿಕೆ ಬಿಲ್ ಗಳನ್ನು ಬಿಲ್ ಬಂದ ದಿನದಿಂದ30 ದಿನಗಳ ಗಡುವು ಕೊಡಬೇಕು
* ಗೃಹಬಳಕೆ ವಿದ್ಯುತ್ ಸ್ಲಾಬ್ 50 ಯೂನಿಟ್ ಗಳಿಂದ ಪ್ರಾರಂಭಿಸಬೇಕು ಎಂಬ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟು ಪ್ರತಿಭಟನೆ ನಡೆಸಲಾಯಿತು.