ವಿದ್ಯುತ್ ತಂತಿ ತುಳಿದು ಪ್ರಾಣ ಕಳೆದುಕೊಂಡ ತಾಯಿ-ಮಗು ಸಾವು

ನೆಲದಲ್ಲಿ ಬಿದ್ದಿದ್ದ ವಿದ್ಯುತ್ ತಂತಿ ಕಾಣಿಸದೇ ಅದನ್ನು ತುಳಿದ ಕಾರಣ ವಿದ್ಯುತ್ ಪ್ರವಹಿಸಿ ತಾಯಿ-ಮಗು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ವೈಟ್ ಫೀಲ್ಡ್‌ನ  ಕಾಡುಗೋಡಿಯಲ್ಲಿ ನಡೆದಿದೆ.

ತಾಯಿ ಸೌಂದರ್ಯ, ಮಗಳು ಲೀಲಾ ಮೃತ ದುರ್ದೈವಿಗಳು. ಇಂದು ಬೆಳಗಿನ ಜಾವ 5 ಗಂಟೆ ವೇಳೆಗೆ ದುರ್ಘಟನೆ ನಡೆದಿದೆ.

ತಾಯಿ ಹಾಗೂ ಮಗಳು ತಮಿಳುನಾಡಿನಿಂದ ಬೆಂಗಳೂರಿನ ಮನೆಗೆ ಬರುತ್ತಿದ್ದ ವೇಳೆ ವಿದ್ಯುತ್ ತಂತಿ ತುಳಿದಿದ್ದಾರೆ. ರಸ್ತೆ ಬದಿ ತಂತಿ ತುಂಡಾಗಿ ನೆಲದಲ್ಲಿ ಬಿದ್ದಿತ್ತು. ಕತ್ತಲಲ್ಲಿ ತಂತಿ ಕಾಣಿಸದೇ ಹೋಗಿದ್ದರಿಂದ ಅದನ್ನು ತುಳಿದಿದ್ದ ತಾಯಿ ಹಾಗೂ ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ವೈಟ್‌ಫೀಲ್ಡ್‌ನ ಹೋಪ್‌ಫಾರ್ಮ್‌ನಲ್ಲಿ ಫುಟ್‌ಪಾತ್‌ನಲ್ಲಿ ಬಿದ್ದಿದ್ದ ಲೈವ್ ವೈರ್‌ನ್ನು ಆಕಸ್ಮಿಕವಾಗಿ ತುಳಿದು ತಾಯಿ ಮತ್ತು ಅವರ 9 ತಿಂಗಳ ಮಗು ಸುಟ್ಟು ಕರಕಲಾಗಿದ್ದು, ಇದು ಆತಂಕಕಾರಿಯಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ವಿಷಾದ ವ್ಯಕ್ತಪಡಿಸಿದ್ದಾರೆ.

 ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಬ್ಬರು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ.  ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಮತ್ತು ಕುಟುಂಬಕ್ಕೆ ಶೀಘ್ರವೇ ಸೂಕ್ತ ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

NammaBescom ಮತ್ತು BBMPCOMM ಜಂಟಿ ಪರಿಶೀಲನೆ ನಡೆಸಲು ಮತ್ತು ನಗರದಾದ್ಯಂತ ಯಾವುದೇ ಅನಗತ್ಯ ಕೇಬಲ್‌ಗಳು ಮತ್ತು ವೈರ್‌ಗಳನ್ನು ತೆಗೆದುಹಾಕುವಂತೆ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *