ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಭವ್ಯ ಭವಿಷ್ಯ ರೂಪಿಸಿಕೊಳ್ಳಬೇಕು- ಪವಾಡಶ್ರೀ ಬಸವಣ್ಣ ಮಠದ ಶ್ರೀಸಿದ್ದಲಿಂಗಸ್ವಾಮಿ

ಪುಸ್ತಕ ವಿತರಣೆ ಕಾರ್ಯಕ್ರಮ ಹೆಸರಿಗೋಸ್ಕರ ಮಾಡುತ್ತಿರುವ ಕಾರ್ಯಕ್ರಮವಲ್ಲ‌‌. ಈ ರೀತಿ ಪ್ರತಿ ವರ್ಷ ಪುಸ್ತಕ ನೀಡಲಾಗುತ್ತದೆ. ದಸರಾ ರಜಾದ ವೇಳೆ ಈ ಭಾಗದ ಸುತ್ತಮುತ್ತಲಿನ ಮಠಗಳಿಗೆ ಮಕ್ಕಳನ್ನು ‌ಕರೆದೊಯ್ದು ಮಠಗಳ ಪರಿಚಯ ಮಾಡಿಕೊಡಲಾಗುತ್ತದೆ. ಸರ್ಕಾರಿ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮುಂದಿನ ಓದಿಗೆ ಉಚಿತ ದಾಖಲಾತಿ ನೀಡಲಾಗುತ್ತದೆ. ಈ ಪುಸ್ತಕಗಳನ್ನು ಸರಿಯಾಗಿ ಉಪಯೋಗಿಸುವ ಮೂಲಕ ಶಿಕ್ಷಣದಲ್ಲಿ ‌ಸಾಧನೆ ಮಾಡಬೇಕು ಪವಾಡಶ್ರೀ ಬಸವಣ್ಣ ಮಠದ ಶ್ರೀಸಿದ್ದಲಿಂಗಸ್ವಾಮಿ ಹೇಳಿದರು.

ನಗರದ ಬಸವ ಭವನದಲ್ಲಿ ಭಾನುವಾರ ರಾಜ್ಯ ವೀರಶೈವ ಲಿಂಗಾಯತ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘ, ಪವಾಡಶ್ರೀ ಬಸವಣ್ಣದೇವರ ಮಠ, ಹಾಗೂ ಬಸವ ಭಾರತ ಪ್ರತಿಷ್ಠಾನ ಪವಾಡಶ್ರೀ ಬಸವಣ್ಣ ದೇವರ ಮಠ ನೆಲಮಂಗಲ ಸಹಯೋಗದಲ್ಲಿ ತಾಲೂಕಿನ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವೀರಶೈವ ಲಿಂಗಾಯಿತ ಮಕ್ಕಳಿಗೆ ಲೇಖನ ಸಾಮಗ್ರಿ ಮತ್ತು ನೋಟ್ ಪುಸ್ತಕ ವಿತರಣಾ ಸಮಾರಂಭ ‌ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವನಕಲ್ಲು ಮಠದ ಬಸವರಮಾನಂದ ಮಹಾಸ್ವಾಮಿ ಮಾತನಾಡಿ, ಶಿರಸಂಗಿ ಮಹಾಲಿಂಗ ಸ್ವಾಮಿಯವರು ಲಿಂಗಾಯತ ವಿದ್ಯಾರ್ಥಿಗಳಿಗಾಗಿ ರಾಜ್ಯದಲ್ಲಿ ಮೊದಲ ಬಾರಿಗೆ 1919ರಲ್ಲಿ ಹಾಸ್ಟೆಲನ್ನು ತೆರೆದರು. ಸಿದ್ದಗಂಗಾಶ್ರೀಗಳು ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಬಡ ಮಕ್ಕಳ ಅನುಕೂಲಕ್ಕಾಗಿ ದೊಡ್ಡಬಳ್ಳಾಪುರಕ್ಕೆ ಬಂದು ನೋಟ್ ಬುಕ್ ನೀಡಲಾಗುತ್ತಿದೆ ಎಂದರು.

ಅನ್ನ ಕ್ಷಣಿಕ ತೃಪ್ತಿ ನೀಡಿದರೆ , ಶಿಕ್ಷಣ ಬಳಸಿದಷ್ಟು ಹೆಚ್ಚು ಜ್ಞಾನ ನೀಡುತ್ತದೆ. ವಿದ್ಯಾರ್ಥಿಗಳ ಕಲಿಕೆಗೆ ೫ ಮಾತ್ರೆಗಳು ಅವಶ್ಯಕ ಬೆಳಿಗ್ಗೆ ಬೇಗನೇ ಏಳುವುದು, ಪ್ರತಿದಿನ 15 ನಿಮಿಷ ಧ್ಯಾನ, ಕಲಿಕೆಯೊಂದಿಗೆ ತಂದೆತಾಯಿಗೆ ನೆರವಾಗುವುದು. ಓದಿರುವ ವಿಷಯದ ಪ್ರಮುಖ ವಿಷಯಗಳನ್ನು ಬರೆದಿಡುವುದು, ಪರೀಕ್ಷೆ ದಿ‌ನ ಓದುವುದಲ್ಲ ಪ್ರತಿದಿನ ಓದುವಾಗ ತಿಳಿದ ವಿಷಯಗಳನ್ನು ಶಿಕ್ಷಕರಿಂದ ಮಾಹಿತಿ ಪಡೆಯುವುದು ಇವು 5 ಪ್ರಮುಖ ಮಾತ್ರೆಗಳಾಗಿವೆ. ಈ ಮೂಲಕ ಶೈಕ್ಷಣಿಕ ದೊಡ್ಡ ಸಾಧನೆ‌ ಮಾಡಬಹುದು ಎಂದರು.

ಈ ವೇಳೆ ವಿಜಯಪುರದ ಬಸವಕಲ್ಯಾಣ ಮಠದ ಮಹಾದೇವ ಸ್ವಾಮಿ, ಗುರುವಣ್ಣದೇವರ ಮಠದ ಅಧ್ಯಕ್ಷರಾದ ನಂಜುಂಡ ಸ್ವಾಮಿ, ನಿಜಗುಣ ಜಂಗಮಮಠದ ನಿಜಗುಣ ಸ್ವಾಮಿ, ತಾಲ್ಲೂಕಿನ ಬಸವೇಶ್ವರ ಮಹಾಮಠದ ಅಧ್ಯಕ್ಷರಾದ ನಿಶ್ಚಲ ನಿರಂಜನ ದೇಶಿಕೇಂದ್ರ ಸ್ವಾಮಿಗಳು, ರಾಜ್ಯ ವೀರಶೈವ ಲಿಂಗಾಯತ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಆರ್ ನಾಗರಾಜ್, ಉಪನ್ಯಾಸಕರಾದ ಪ್ರೋ ಬಾಲಚಂದ್ರ, ಬಿಇಒ ರಂಗಪ್ಪ ‌ಸೇರಿದಂತೆ ತಾಲೂಕಿನ ವೀರಶೈವ ಲಿಂಗಾಯತ ಸಮಾಜದ ಮುಖಂಡರು ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *