ವಿದೇಶದಿಂದ ಕೋಟ್ಯಾಂತರ ಮೌಲ್ಯದ ಚಿನ್ನವನ್ನ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 7 ಜನರನ್ನು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ 3 ಕೋಟಿ 9 ಲಕ್ಷ ಮೌಲ್ಯದ 5 ಕೆಜಿ 135 ಗ್ರಾಂ ಚಿನ್ನವನ್ನು ಗುಪ್ತಾಂಗ, ಒಳ ಉಡುಪು, ಮಹಿಳೆಯರ ಪರ್ಸ್, ಮತ್ತು ಹ್ಯಾಂಡ್ ಬ್ಯಾಗ್ ನಲ್ಲಿ ತಂದಿರುವುದು ಬೆಳಕಿಗೆ ಬಂದಿದೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆ ನಡೆಸಿರುವ ಕಸ್ಟಮ್ಸ್ ಅಧಿಕಾರಿಗಳು, ಕುವೈತ್, ದುಬೈ, ಶಾರ್ಜಾ, ಅಬುದಬಿ ಮತ್ತು ಬ್ಯಾಂಕಾಕ್ ನಿಂದ ಬಂದಿದ್ದ 7 ಜನ ಪ್ರಯಾಣಿಕರಿಂದ ಚಿನ್ನವನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಸ್ಟಮ್ಸ್ ಅಧಿಕಾರಿಗಳಿಂದ ತನಿಖೆ ಮುಂದುವರಿದಿದೆ.