ವಿಜೃಂಭಣೆಯಿಂದ ನಡೆದ ಲಕುಮಿದೇವಿ ವಾರ್ಷಿಕೋತ್ಸವ

ದೊಡ್ಡಬಳ್ಳಾಪುರ: ತಾಲ್ಲೂಕಿನ ಕೂಗೇನಹಳ್ಳಿ ಗ್ರಾಮದಲ್ಲಿ ಬೈರವೇಶ್ವರಸ್ವಾಮಿ ಹಾಗೂ ಲಕುಮಿದೇವಿ ವಾರ್ಷಿಕ ಮಹೋತ್ಸವ ಅದ್ದೂರಿಯಾಗಿ ನಡೆಯಿತು.

ಬೆಳಿಗ್ಗೆ 7 ಗಂಟೆಗೆ ಗಣಪತಿ ಹೋಮದಿಂದ ಪ್ರಾರಂಭವಾದ ವಾರ್ಷಿಕೋತ್ಸವ ಕಾರ್ಯಕ್ರಮ ಮಧ್ಯಾಹ್ನ 12 ಗಂಟೆಗೆ ಪೂರ್ಣಾಹುತಿ ನಡೆಯಿತು.

ಮಧ್ಯಾಹ್ನ ನಡೆದ ಅನ್ನಸಂತರ್ಪಣೆಯಲ್ಲಿ ನೂರಾರು ಜನ ಭಕ್ತಾದಿಗಳು ಭಾಗವಹಿಸಿದ್ದರು.

ಸಂಜೆ ವಿವಿಧ ಕಲಾ ತಂಡಗಳೊಂದಿಗೆ ನಡೆದ ಭೈರವೇಶ್ವೇರಸ್ವಾಮಿ, ಲಕುಮಿದೇವಿ ಬೆಳ್ಳಿಫಲ್ಲಕ್ಕಿ ಉತ್ಸವ ಕೂಗೇನಹಳ್ಳಿಯ ಸೇರಿದಂತೆ ಏಳು ಗ್ರಾಮಗಳಲ್ಲಿ ಸಂಚರಿಸಿತು.

ಈ ಸಂದರ್ಭದಲ್ಲಿ ಮಹಿಳೆಯರು ಅದ್ದೂರಿಯಾಗಿ ಸಿಂಗರಿಸಿದ್ದ ಹೂವಿನ ಆರತಿಗಳೊಂದಿಗೆ ವಾರ್ಷಿಕೋತ್ಸವದಲ್ಲಿ ಭಾಗವಹಿದ್ದರು. ಲಕುಮಿದೇವಿಯನ್ನು ಕಾಂತರ ಚಲನ ಚಿತ್ರದಲ್ಲಿನ ವರಹ ರೂಪದಲ್ಲಿ ತೆಂಗಿನಗರಿಗಳಿಂದ ಶೃಂಗರಿಸಿದ್ದು ಎಲ್ಲಾರ ಆಕರ್ಷಣೆಗೆ ಕಾರಣವಾಗಿತ್ತು.

Leave a Reply

Your email address will not be published. Required fields are marked *