ವಾಹನ ಸವಾರರೇ ಹುಷಾರ್…! ಬಲಿಗಾಗಿ ಕಾದಿರೋ ರಸ್ತೆ ಬದಿ ಇರುವ ಗುಂಡಿ; ಯಾಮಾರಿ ರಸ್ತೆ ಅಂಚಿಗೆ ಬಂದರೆ ಅಪಘಾತ ಕಟ್ಟಿಟ್ಟಬುತ್ತಿ

ನಗರದ ಟಿ.ಬಿ.ವೃತ್ತ ಹಾಗೂ ಡೈರಿ ಸರ್ಕಲ್ ಮಾರ್ಗ ಮಧ್ಯದಲ್ಲಿ ಇರುವ ಕ್ವಾಲಿಟಿ ಬಾರ್ ಮುಂಭಾಗದ ರಸ್ತೆ ಬದಿಯಲ್ಲಿ ಬಲಿಗಾಗಿ ಕಾದಿರೋ ಗುಂಡಿ.

ಯಾಮಾರಿ ರಸ್ತೆ ಅಂಚಿಗೆ ಬಂದರೆ ದೊಡ್ಡ ಅಪಾಯ ಎದುರಿಸಬೇಕಾಗುತ್ತದೆ. ವಾಹನ ಸವಾರರಿಗೆ ಈ ಗುಂಡಿ ಇದೆ ಎಂದು ಹತ್ತಿರ ಬರುವವರೆಗೂ ಗೊತ್ತಾಗುವುದಿಲ್ಲ, ಹತ್ತಿರ ಬಂದು ನೋಡುವಷ್ಟರಲ್ಲಿ ಅಪಘಾತ ನಡೆದೇಹೋಗುತ್ತದೆ. ರಾತ್ರಿ ವೇಳೆ ಅಂತೂ ಇನ್ನೂ ಕಾಣೋದಿಲ್ಲ. ಅಂತಹ ಸ್ಥಿತಿಯಲ್ಲಿ ಈ ಮರಣ ಗುಂಡಿ ಇದೆ.

ಅವೈಜ್ಞಾನಿಕ, ಕಳಪೆ ರಸ್ತೆ ಕಾಮಗಾರಿಯಿಂದ ಮಳೆ‌ ನೀರಿಗೆ ಕೊರೆದು ಹೋಗುತ್ತಿರುವ ರಸ್ತೆ. ಈ ಗುಂಡಿಯನ್ನು ಸರಿಪಡಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವ ಸಂಬಂಧಪಟ್ಟ ಇಲಾಖೆ. ಕನಿಷ್ಟಪಕ್ಷ ಸ್ಥಳದಲ್ಲಿ ಯಾವ ಮುನ್ನೆಚ್ಚರಿಕಾ ಫಲಕ ಅಳವಡಿಸದ ಅಧಿಕಾರಿಗಳು.

ಅನಾಹುತ ಸಂಭವಿಸುವ ಮುನ್ನ ಗುಂಡಿ ಮಚ್ಚಬೇಕು. ಸ್ಥಳದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಎಚ್ಚರಿಕೆ ಫಲಕ ಅಳವಡಿಸಿ ವಾಹನ ಸವಾರರು ಸುಗಮವಾಗಿ ಸಂಚರಿಸಲು ಅನುವು ಮಾಡಿಕೊಡಬೇಕಾಗಿ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

Leave a Reply

Your email address will not be published. Required fields are marked *