ವಾಹನ ಸವಾರರೇ ರಸ್ತೆಗಿಳಿಯುವ ಮುನ್ನ‌ ಹುಷಾರ್…! ಬೆಂಗಳೂರಿನಲ್ಲಿ ‘ಪಂಕ್ಚರ್ ಗ್ಯಾಂಗ್’ ಸಕ್ರಿಯ: ಬೇಕಂತಲೇ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಮೊಳೆ ಎಸೆದು ವಿಕೃತಿ: ಟ್ರಾಫಿಕ್ ಪೊಲೀಸರಿಂದ ಮೊಳೆಗಳ ತೆರವು

ವಾಹನ ಸವಾರರೇ ರಸ್ತೆಗಿಳಿಯುವ ಮುನ್ನ ಜೋಪಾನ.‌ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ‘ಪಂಕ್ಚರ್ ಗ್ಯಾಂಗ್’ ಹೆಚ್ಚು ಸಕ್ರಿಯವಾಗಿದೆ. ಬೇಕಂತಲೇ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಮೊಳೆ ಎಸೆದಿರುತ್ತಾರೆ. ಈ ಮೊಳೆಗಳು ವಾಹನಗಳ ಚಕ್ರಕ್ಕೆ ಚುಚ್ಚಿದರೆ ಹತ್ತಿರದಲ್ಲೇ ಇರುವ ಪಂಕ್ಚರ್ ಅಂಗಡಿಗಳಿಗೆ ಭರ್ಜರಿ ವ್ಯಾಪಾರವಂತೆ…!?.

ಬೆಂಗಳೂರು ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಕುವೆಂಪು ಸರ್ಕಲ್ ಅಂಡರ್‌ಪಾಸ್‌ ರಸ್ತೆಯಲ್ಲಿ ಬಿದ್ದಿದ್ದ ಮೊಳೆಗಳನ್ನು ಆಯ್ದುಕೊಳ್ಳುತ್ತಿರುವ ದೃಶ್ಯ ಕಂಡುಬಂದಿದೆ.

ವಾಹನಗಳನ್ನು ಪಂಕ್ಚರ್ ಮಾಡುವ ಉದ್ದೇಶದಿಂದ ರಸ್ತೆಯಲ್ಲಿ ಲೋಹದ ಮೊಳೆಗಳನ್ನು ಎಸೆಯಲಾಗಿದೆ ಎಂದು ತಿಳಿದುಬಂದಿದೆ. ಇದನ್ನು ಗಮನಿಸಿದ ಸಂಚಾರ ಪೊಲೀಸರು ವಾಹನ ಚಾಲಕರ ಸುರಕ್ಷತೆ ದೃಷ್ಟಿಯಿಂದ ರಸ್ತೆಯಲ್ಲಿ ಎಸೆಯಲಾಗಿದ್ದ ಮೊಳೆಗಳನ್ನು ಸಂಗ್ರಹ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಮೊಳೆ ಎಸೆಯುವವರ ಮೇಲೆ ತೀವ್ರ ನಿಗಾ ವಹಿಸಿದ್ದಾರೆ.

ಈ ದೃಶ್ಯಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.  ಇಬ್ಬರು ಪೊಲೀಸರು ರಸ್ತೆಯ ಮೇಲೆ ಎಸೆದ ಲೋಹದ ಮೊಳೆಗಳನ್ನು ಆರಿಸುವುದನ್ನು ಇದು ತೋರಿಸುತ್ತದೆ. ಪೊಲೀಸರು ಮಾಡಿದ ಕೆಲಸವನ್ನು ಶ್ಲಾಘಿಸಲಾಗಿದೆ. ಜೊತೆಗೆ ತೊಂದರೆ ಸೃಷ್ಟಿಸಲು ಮೊಳೆ ಎಸೆದ ಅಪರಾಧಿಗಳನ್ನು ಖಂಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!