ವಾರದ ಬಡ್ಡಿ ದಂಧೆ: ಸಾಲಗಾರರ ಕಿರುಕುಳ ತಾಳಲಾರದೆ ವ್ಯಕ್ತಿ ಆತ್ಮಹತ್ಯೆ

ದೊಡ್ಡಬಳ್ಳಾಪುರ : ನಗರದ ಹಲವೆಡೆ ವಾರದ ಬಡ್ಡಿ ದಂಧೆ ನಡೆಯುತ್ತಿದ್ದು, ವಾರದ ಬಡ್ಡಿಗೆ ಸಾಲ ಪಡೆದಿದ್ದ ವ್ಯಕ್ತಿ ಸಾಲಗಾರರ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.

ನಗರದ ವಿನಾಯಕ ನಗರದ ಕಾರ್ಮೆಲ್ ಜ್ಯೋತಿ ಶಾಲೆ ಬಳಿ ವಾಸವಾಗಿದ್ದ ಪರ್ವೀಜ್ (45) ಆತ್ಮಹತ್ಯೆಗೆ ಶರಣಾದ ವ್ಯಕ್ತಿ.

ದೊಡ್ಡಬಳ್ಳಾಪುರ ನಗರದ ಅಂಬೇಡ್ಕರ್ ಭವನದ ಮುಂದೆ ದ್ವಿಚಕ್ರ ವಾಹನ ಸರ್ವೀಸ್ ಇಟ್ಟುಕೊಂಡಿದ್ದ ಪರ್ವೇಜ್ ಅವರು ( ವಾರಕ್ಕೆ ಶೇ ₹7)  ಬಡ್ಡಿಗೆ ಹಲವರ ಬಳಿ ಕೈ ಸಾಲ ಪಡೆದಿದ್ದರು ಎಂದು ತಿಳಿದುಬಂದಿದೆ.

ಪರ್ವೇಜ್ ಆತ್ಮಹತ್ಯೆ ಕುರಿತು ಮಾತನಾಡಿದ ಕರುನಾಡಸೇನೆ ತಾಲ್ಲೂಕು ಅಧ್ಯಕ್ಷ ತೆರದಾಳ್ ಶ್ರೀನಿವಾಸ್ ಅವರು, ಪರ್ವೇಜ್ ನಮ್ಮ ಸಂಘಟನೆಯ ಕಾರ್ಯಕರ್ತರಾಗಿದ್ದರು, ಮೃದು ಸ್ವಭಾವದ ಅವರು ಯಾರಿಗೂ ತೊಂದರೆ ಕೊಟ್ಟವರಲ್ಲ, ಪೊಲೀಸರು ಸಜ್ಜನ ವ್ಯಕ್ತಿಯ ಸಾವಿಗೆ ಕಾರಣವಾದವರ ವಿರುದ್ಧ ಸೂಕ್ತ ಕಾನೂನು ರೀತಿಯ ಕ್ರಮ ಜರುಗಿಸಬೇಕು. ವಾರದ ಬಡ್ಡಿ ದಂದೆಗೆ ಕಡಿವಾಣ ಹಾಕಿ ಮುಂದೆ ಆಗಬಹುದಾದ ಅನಾಹುತಗಳನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Reply

Your email address will not be published. Required fields are marked *