ಜೂನ್ 1 ರಂದು ಸಾರ್ವತ್ರಿಕ ಚುನಾವಣೆಯ ಏಳನೇ ಮತ್ತು ಕೊನೆಯ ಹಂತದ ಮತದಾನ ನಡೆಯಲಿದ್ದು, ಲೋಕಸಭೆ ಚುನಾವಣೆಗೆ ಉತ್ತರ ಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ. ಮೂರನೇ ಅವಧಿಗೆ ದಾಖಲೆಯ ಅಂತರದಿಂದ ಗೆಲುವಿನ ಉತ್ಸಾಹ ಮತ್ತು ನಿರೀಕ್ಷೆಯಲ್ಲಿದ್ದಾರೆ.
ವಾರಣಾಸಿ ಲೋಕಸಭಾ ಸ್ಥಾನಕ್ಕೆ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ. ಈ ಐತಿಹಾಸಿಕ ಸ್ಥಾನದ ಜನರಿಗೆ ಸೇವೆ ಸಲ್ಲಿಸುವುದು ಗೌರವವಾಗಿದೆ. ಜನರ ಆಶೀರ್ವಾದದಿಂದ ಕಳೆದ ದಶಕದಲ್ಲಿ ಇಲ್ಲಿ ಗಮನಾರ್ಹ ಸಾಧನೆಗಳು ನಡೆದಿವೆ. ಮುಂದಿನ ದಿನಗಳಲ್ಲಿ ಈ ಕಾಮಗಾರಿಗಳು ಇನ್ನಷ್ಟು ವೇಗ ಪಡೆದುಕೊಳ್ಳಲಿದೆ ಎಂದು ಮೋದಿ ತಿಳಿಸಿದ್ದಾರೆ.