ವಾಂಖೆಡೆಯಲ್ಲಿ ಚೆನ್ನೈ ಪಾರಮ್ಯ, ಏಳು ವಿಕೆಟ್‌ಗಳ ಜಯ

ಮುಂಬೈ: ತವರಿನಂಗಳದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿನ ನಗೆ ಬೀರಲು ಯತ್ನಿಸಿದ ಮುಂಬೈಯನ್ನು ಸಂಘಟಿತ ಹೋರಾಟದ ಮೂಲಕ ಏಳು ವಿಕೆಟ್‌ಗಳ ಅಂತರದಲ್ಲಿ ಸೋಲಿಸಿ ಚೆನ್ನೈ ಸತತ ಎರಡನೇ ಜಯದ ನಗೆ ಬೀರಿತು.

ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ನಾಯಕ ಮಹೇಂದ್ರ ಸಿಂಗ್ ದೋನಿ ಅವರ ನಿರ್ಧಾರ ಸರಿಯಾಗಿಯೇ ಇತ್ತು, ಮೊದಲ ವಿಕೆಟ್ ನಷ್ಟಕ್ಕೆ ಆರಂಭಿಕ ಬ್ಯಾಟ್ಸ್‌ಮನ್ಗಳಾದ ನಾಯಕ ರೋಹಿತ್ ಶರ್ಮಾ (21) ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ (32) ಉತ್ತಮ ಆರಂಭ ನೀಡಿದರೂ ತುಷಾರ್ ದೇಶಪಾಂಡೆ ಹಾಗೂ ರವೀಂದ್ರ ಜಡೇಜಾಗೆ ವಿಕೆಟ್ ಒಪ್ಪಿಸಿದರು.

ನಂತರ ಬಂದ ಕೆಮರೂನ್ ಗ್ರೀನ್ (12), ಸೂರ್ಯ ಕುಮಾರ್ ಯಾದವ್ (1) ಹೆಚ್ಚು ಹೊತ್ತು ನಿಲ್ಲಲಿಲ್ಲ, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ಗಳಾದ ತಿಲಕ್ ವಮಾ೯(22) ಹಾಗೂ ಟೀಮ್ ಡೇವಿಡ್ (31) ರನ್ ಗಳಿಸಿ ತಂಡದ ಮೊತ್ತವನ್ನು 150 ರ ಗಡಿ ದಾಟಿಸಿದರು.

ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ವೇಗಕ್ಕೆ ಕಡಿವಾಣ ಹಾಕಿದ ಆಲ್ ರೌಂಡರ್ ರವೀಂದ್ರ ಜಡೇಜಾ ಮೂರು ವಿಕೆಟ್, ಸ್ಪಿನ್ನರ್ ಸ್ಯಾಂಟ್ನರ್ ಹಾಗೂ ತುಷಾರ್ ದೇಶಪಾಂಡೆ ತಲಾ ಎರಡು ವಿಕೆಟ್ ಪಡೆಯುವ ಮೂಲಕ ಮೇಲುಗೈ ಸಾಧಿಸಿದರು.

ಸಾಧಾರಣ 158 ರನ್ ಗುರಿ ಬೆನ್ನಟ್ಟಿದ ಚೆನ್ನೈ ತಂಡದ ಆರಂಭಿಕರಾಗಿ ಕಾನ್ವೆ ಜೊತೆಗೆ ಸ್ಥಳೀಯ ಪ್ರತಿಭೆ ಅಂಜಿಕ್ಯಾ ರಹಾನೆ ಇನ್ನಿಂಗ್ಸ್ ಆರಂಭಿಸಿದರು, ಆದರೆ ಕಾನ್ವೆ (0) ತಂಡದ ಮೊತ್ತ ಸೊನ್ನೆ ಆಗಿರುವಾಗಲೆ ಪೆವಿಲಿಯನ್ ಗೆ ತೆರಳಿದರು.

ನಂತರ ಜೊತೆಯಾದ ರುತುರಾಜ್ ಗಾಯಕ್ವಾಡ್ ಅಜೇಯ (40) ಹಾಗೂ ಅಂಜಿಕ್ಯಾ ರಹಾನೆ (61) ರನ್ ಗಳಿಸಿ ಭದ್ರ ಬುನಾದಿ ಹಾಕಿದರು ನಂತರ ಬಂದ ಶಿವಂ ದುಬೆ (28) ಹಾಗೂ ಅಂಬಾಟಿ ರಾಯಡು (20) ರನ್ ಗಳಿಸಿ ತಂಡಕ್ಕೆ ಗೆಲುವು ತಂದು ಕೊಟ್ಟರು.

ಅತ್ಯುತ್ತಮವಾಗಿ ಬೌಲಿಂಗ್ ಹಾಗೂ ಫೀಲ್ಡಿಂಗ್ ವಿಭಾಗದಲ್ಲಿ ಮಿಂಚಿದ ಆಲ್ ರೌಂಡರ್ ರವೀಂದ್ರ ಜಡೇಜಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

Leave a Reply

Your email address will not be published. Required fields are marked *