ಕೋಲಾರ: ಮಾಜಿ ಸಚಿವ ವರ್ತೂರ್ ಪ್ರಕಾಶ್ ಗೆ ತಿಂಗಳು ಮಾಮೂಲಿ ಇಲ್ಲದೇ ಹೋಗಿದ್ದರಿಂದ ಬಾಯಿಗೆ ಬಂದಂತೆ ಮಾತಾಡತ್ತಾ ಇದ್ದಾರೆ ಅವರ ನಾಲಿಗೆಗೂ ಮತ್ತು ಮೆದುಳಿಗೂ ಸಂಪರ್ಕ ಇಲ್ಲದಂತೆ ಆಗಿದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ಹೇಳಿದರು
ತಾಲೂಕಿನ ವೇಮಗಲ್ ನಲ್ಲಿ ಶುಕ್ರವಾರ ಇಂದಿರಾ ಕ್ಯಾಂಟೀನ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಅಧಿಕಾರದಲ್ಲಿ ಇದ್ದಷ್ಟು ದಿನ ಅಧಿಕಾರಿಗಳು ನೀಡುವ ಕಮಿಷನ್ ವರ್ತೂರು ಪ್ರಕಾಶ್ ಅವರಿಗೆ ಜೀವನವಾಗಿತ್ತು ನನಗೆ ಅಂತಹ ಪರಿಸ್ಥಿತಿ ಬೇಕಾಗಿಲ್ಲ ನನಗೆ ಕೋಟ್ಯಾಂತರ ರೂಪಾಯಿ ಬಾಡಿಗೆ ಬರುತ್ತದೆ ನಿನ್ನ ಅವಧಿಯಲ್ಲಿನ ಕಾಮಗಾರಿಗಳು ಮಾಡಕ್ಕೆ ಗುತ್ತಿಗೆದಾರರಿಂದ ಲಂಚ ಪಡೆದಿದ್ದು ಅವರೇ ಹೇಳಿದ್ದಾರೆ ನಾನು ಯಾರ ಹತ್ತಿರವಾದರೂ ಪಡೆದಿದ್ದರೆ ಸಾಬೀತು ಮಾಡಲಿ ಎಂದು ಸಾವಾಲು ಹಾಕಿದರು
ವರ್ತೂರು ಪ್ರಕಾಶ್ ಅವರು ಏನಾದರೂ ಮಾತಾಡಬೇಕು ಅಂತ ಕಾಂಗ್ರೆಸ್ ನಾಯಕರ ವಿರುದ್ದ ಇಲ್ಲಸಲ್ಲದ ಆರೋಪ ಮಾಡಿಕೊಳ್ಳುವುದೇ ಜೀವನವಾಗಿದೆ ಹಿಂದೆ ಸಿದ್ದರಾಮಯ್ಯ ಅವರ ವಿರುದ್ದ ಮಾತಾಡಿ ಮಾತಾಡಿ ಏನಾಗಿದೆ ಅಂತ ರಾಜ್ಯದ ಜನಕ್ಕೆ ಗೊತ್ತಿದೆ ಇನ್ನಾದರೂ ಅವರಿಗೆ ಒಳ್ಳೆಯ ಬುದ್ದಿ ಕೊಟ್ಟು ಒಳ್ಳೆಯದು ಮಾತಾಡಲಿ ಇಲ್ಲ ಯಾರು ತಪ್ಪು ಮಾಡಿದ್ದಾರೆ ಅಂತ ಅ ಕೋಲಾರಮ್ಮ ದೇವರು ನೋಡಿಕೊಳ್ಳಲಿ ಎಂದರು.
ಕಾಂಗ್ರೆಸ್ ಸರ್ಕಾರವು ಬರೀ ಅಭಿವೃದ್ಧಿಗೆ ಒತ್ತು ನೀಡುತ್ತದೆ ಇಂದಿರಾಗಾಂಧಿ ಅವರ ಕಾಲದಲ್ಲಿಯೇ ಬಡವರಿಗೆ ಮನೆಗಳು ಕೊಟ್ಟರು ಪಿಂಚಣಿ ಜಾರಿ ಮಾಡಿದರು ಸಿದ್ದರಾಮಯ್ಯ ಅಕ್ಕಿ ಕೊಟ್ಟಿದ್ದಾರೆ ಕಾಂಗ್ರೆಸ್ ಸರ್ಕಾರವು ಹಸಿವು ಮುಕ್ತ ಕರ್ನಾಟಕವೇ ಮುಖ್ಯ ಉದ್ದೇಶದಿಂದ ಇಂದಿರಾ ಕ್ಯಾಟೀನ್ ಸಹ ಜಾರಿ ಮಾಡಿದ್ದಾರೆ ಕಾಂಗ್ರೆಸ್ ಸರ್ಕಾರ ಇಲ್ಲದಾಗ ಮುಚ್ಚಿದ್ದರು ಇವಾಗ ಕಾಂಗ್ರೆಸ್ ಬಂದ ಮೇಲೆ ಮತ್ತೆ ಪ್ರಾರಂಭ ಮಾಡಿದ್ದಾರೆ ವೇಮಗಲ್ ನಲ್ಲಿ ಉಪ ನೋಂದಣಿ ಕೇಂದ್ರವನ್ನು ಮಾಡಲು ಈಗಾಗಲೇ ಅಧಿಕಾರಿಗಳು ಬಂದು ಹೋಗಿದ್ದಾರೆ ಮುಂದೆ ತಾಲೂಕು ಕೇಂದ್ರ ಮಾಡಲು ಸಹ ಅನುಮೋದನೆ ನೀಡಿದ್ದು ಮುಂದಿನ ದಿನಗಳಲ್ಲಿ ಆಗುತ್ತದೆ ನಮಗೆ ಅಭಿವೃದ್ಧಿ ಮುಖ್ಯವಾಗಿದೆ ನೇರವಾಗಿ ಮಾತಾಡೋ ವ್ಯಕ್ತಿ ತಪ್ಪು ಇದ್ದರೆ ಪ್ರಶ್ನೆ ಮಾಡತ್ತೇವೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಮಾತನಾಡಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ಮೇಲೆ ತಾಲೂಕು ಮತ್ತು ಪಟ್ಟಣ ಪ್ರದೇಶದಲ್ಲಿ ಇಂದಿರಾ ಕ್ಯಾಂಟೀನ್ ಪ್ರಾರಂಭ ಮಾಡಲಾಗಿದೆ ಜಿಲ್ಲೆಯ ನಾಲ್ಕು ಕೇಂದ್ರಗಳಲ್ಲಿ ಹೊಸದಾಗಿ ಪ್ರಾರಂಭ ಮಾಡಿದ್ದಾರೆ ಕೋಲಾರ ಕೇಂದ್ರದಲ್ಲಿ ಇರುವ ಕ್ಯಾಂಟೀನ್ ನಲ್ಲಿ ಅವ್ಯವಸ್ಥೆ ಇದೆ ಸರಿ ಪಡಿಸಬೇಕು ಇಂದಿರಾಗಾಂಧಿ ಅವರ ಹೆಸರು, ನೆನಪು, ಸಾಧನೆಗಳಿಗೆ ಗೌರವ ಕೊಡಬೇಕು ಬಡವರಿಗೆ ಅನುಕೂಲ ಮಾಡಬೇಕು ಎಂದು ಸಿದ್ದರಾಮಯ್ಯ ಅವರು ರಾಜ್ಯದ ಎಲ್ಲಾ ವರ್ಗಗಳಿಗೆ ಅನುಕೂಲ ಮಾಡಿದ್ದಾರೆ ಇಲ್ಲಿ ಸ್ವಚ್ಚತೆ ಕಾಪಾಡಿ ಹಸಿವು ಮುಕ್ತದ ಜೊತೆಗೆ ಗುಡಿಸಲು ಮುಕ್ತ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ತಾಲೂಕು ಅಧ್ಯಕ್ಷ ವಿ.ಎಂ ಮುನಿಯಪ್ಪ,
ಜಿಪಂ ಮಾಜಿ ಸದಸ್ಯ ನಾಗನಾಳ ಸೋಮಣ್ಣ ವೇಮಗಲ್ ಕುರುಗಲ್ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ವೆಂಕಟೇಶ್, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಚಂಜಿಮಲೆ ರಮೇಶ್, ಮುಖಂಡರಾದ ಉದಯಶಂಕರ್, ಮುನಿಅಂಜಿನಪ್ಪ, ಫಯಾಜ್, ಉರಟಅಗ್ರಹಾರ ಚೌಡರೆಡ್ಡಿ, ಶ್ರೀನಿವಾಸ್, ಶ್ರೀರಾಮ್, ಈರಣ್ಣ, ಮೈಲಾಂಡಹಳ್ಳಿ ಮುರಳಿ ಮುಂತಾದವರು ಇದ್ದರು.
ಜು.22ರ ಮಂಗಳವಾರ ದೊಡ್ಡಬಳ್ಳಾಪುರದ ರಾಮಯ್ಯನಪಾಳ್ಯ ಸಮೀಪವಿರುವ ಶ್ರೀ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆಗೆಂದು ಬಿಗ್ ಬಾಸ್ ವಿನ್ನರ್ ನಟ…
ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜಾತಿ ಸಮೀಕ್ಷೆ ಅನಿವಾರ್ಯವಾಗಿದ್ದು, ಈ ದಿಸೆಯಲ್ಲಿ ದೇಶದ ಪ್ರತಿ ನಾಗರಿಕನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ,…
ಬದಲಾವಣೆ......... ರೋಗಗಳ ಆವಾಸಸ್ಥಾನವಾಗುತ್ತಿರುವ ಆಸ್ಪತ್ರೆಗಳು...... ರೋಗಿಗಳ ತವರುಮನೆಯಂತಾಗುತ್ತಿರುವ ಮೆಡಿಕಲ್ ಲ್ಯಾಬೋರೇಟರಿಗಳು..... ಅನಾಗರಿಕ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತಿರುವ ಶಿಕ್ಷಣ ಸಂಸ್ಥೆಗಳು........ ಭ್ರಷ್ಟಾಚಾರದ…
ನಟ ದರ್ಶನ್ ವಿದೇಶದಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಥಾಯ್ಲೆಂಡ್ ನಿಂದ ತಡ ರಾತ್ರಿ 11:45…
ನಿನ್ನೆ(ಜು.24 ಗುರುವಾರ) ಭೀಮನ ಅಮವಾಸ್ಯೆ ಹಿನ್ನೆಲೆ ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ…
ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಗಳಿಂದ ಬೆಳೆ ನಷ್ಟ ಸಂಭವಿಸಿದರೆ ರೈತರಿಗೆ ಪರಿಹಾರ ನೀಡುವ ಮೂಲಕ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಪ್ರಧಾನ…