ಕೋಲಾರ: ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷ ಎಂಟು ತಿಂಗಳಿಂದ ವಿಭಾಗೀಯ ಸಂಚಾರಿ ನಿಯಂತ್ರಣಾಧಿಕಾರಿಯಾಗಿ ಸೇವೆ ಸಲ್ಲಿಸಿ ಮಂಗಳೂರಿಗೆ ವರ್ಗಾವಣೆಯಾದ ಜಯಶಂಕರ್ ಅವರನ್ನು ನಗರದ ಕೆಎಸ್ಆರ್‌ಟಿಸಿ ನಿಲ್ದಾಣದಲ್ಲಿ ಮಂಗಳವಾರ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಬೀಳ್ಕೊಡಿಗೆ ಮೂಲಕ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಯಶಂಕರ್, ಸಾರಿಗೆ ಇಲಾಖೆಯಲ್ಲಿ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿದರೆ ತನ್ನಷ್ಟಕ್ಕೇ ತಾನೇ ಸಮಸ್ಯೆಗಳು ದೂರವಾಗುತ್ತವೆ ಎಂಬುದಕ್ಕೆ ಕೋಲಾರ ಜಿಲ್ಲೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯೇ ಉದಾಹರಣೆಯಾಗಿದೆ. ರಾಜ್ಯ ಸರಕಾರದ ಶಕ್ತಿ ಯೋಜನೆಯನ್ನು ಸಮರ್ಪಕವಾಗಿ ಜಿಲ್ಲೆಯಲ್ಲಿ ನಿರ್ವಹಿಸಿದ್ದಾರೆ. ಸಿಬ್ಬಂದಿಯಿಂದ ಕೆಲಸವನ್ನು ತೆಗೆದುಕೊಂಡು ಸಮಸ್ಯೆ ಇಲ್ಲದ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದೇವೆ. ಜಿಲ್ಲೆಯ ಜನರ ಪ್ರೀತಿ, ಗೌರವ, ಸಂತೋಷ ಇನ್ನಷ್ಟು ನಮಗೆ ಕೆಲಸವನ್ನು ಮಾಡಲು ಪೇರಣೆಯಾಗಿದೆ. ಮುಂದೆ ಅವಕಾಶ ಸಿಕ್ಕರೆ ಮತ್ತೆ ಕೋಲಾರದಲ್ಲಿ ನಿಮ್ಮೊಂದಿಗೆ ಕೆಲಸ ಮಾಡೋಣ ಎಂದು ತನ್ನ ಕೆಲಸದ ಅನುಭವವನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಬಸ್ ನಿಲ್ದಾಣಾಧಿಕಾರಿ ಕೆ.ವಿ ಶಿವಕುಮಾರ್, ಡಯಟ್ ಶಿಕ್ಷಣ ಅಧಿಕಾರಿ ಸಿ.ಆರ್ ಅಶೋಕ್, ಸಂಚಾರಿ ನಿಯಂತ್ರಣಾಧಿಕಾರಿಗಳಾದ ರಮೇಶ್(ದೇವೇಗೌಡ), ಹೆಚ್.ಎಂ ಶ್ರೀನಿವಾಸಮೂರ್ತಿ, ಶ್ರೀನಿವಾಸ್, ಅಧಿಕಾರಿಗಳಾದ ರಾಮಮೂರ್ತಿ, ಗೋವಿಂದಪ್ಪ, ಶ್ಯಾಮೇಗೌಡ, ಶ್ರೀನಿವಾಸಗೌಡ, ಶಿವಪ್ಪ, ರಾಹುಲ್, ಸುಬ್ರಮಣಿ, ನಾರಾಯಣಸ್ವಾಮಿ, ಗೋಪಾಲಗೌಡ, ಪ್ರಸಾದ್, ಬಾಲಕೃಷ್ಣ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.