ವರನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ವಧುವಿನ ಮಾಜಿ ಪ್ರಿಯಕರ

ವಧು ವರರಿಗೆ ವಿಶ್‌ ಮಾಡುವ ನೆಪದಲ್ಲಿ ಸ್ಟೇಜ್‌ ಮೇಲೆ ಬಂದಂತಹ ವಧುವಿನ ಮಾಜಿ ಪ್ರಿಯಕರ ಇದ್ದಕ್ಕಿದ್ದಂತೆ ವರನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿರುವ ಘಟನೆ ರಾಜಸ್ಥಾನ್‌ ಚಿತ್ತೋರ್‌ಗಢ ಜಿಲ್ಲೆಯ ಭಿಲ್ವಾರದಲ್ಲಿ ನಡೆದಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್‌ ಆಗಿದೆ.

ಅದೃಷ್ಟವಶಾತ್‌ ವರನಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ. ಹಲ್ಲೆ ನಡೆಸಿರುವ ಆರೋಪಿ ಶಂಕರ್‌ ಲಾಲ್‌ನನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

 

ವಧು ಮತ್ತು ಶಂಕರ್‌ ಲಾಲ್‌ ಎರಡು ವರ್ಷಗಳ ಹಿಂದೆ ಒಂದೇ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಆ ಸಮಯದಲ್ಲಿ ಇವರಿಬ್ಬರ ಮಧ್ಯೆ ಗೆಳೆತನ ಬೆಳೆದಿದೆ. ನಂತರ ಇವರಿಬ್ಬರ ನಡುವೆ ಬ್ರೇಕಪ್‌ ಆಗಿದ್ದು, ಇದೇ ಸೇಡಿನಿಂದ ಶಂಕರ್‌ ಲಲ್‌ ಮಾಜಿ ಗೆಳತಿಯ ಮದುವೆಗೆ ಬಂದು ವರನ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

Leave a Reply

Your email address will not be published. Required fields are marked *