ವರದನಹಳ್ಳಿ ವರದ ಆಂಜನೇಯ ಸ್ವಾಮಿ ದೇಗುಲದ‌ ಜೀರ್ಣೋದ್ಧಾರ

ತಾಲೂಕಿನ ವರದನಹಳ್ಳಿಯ ಶ್ರೀ ವರದ ಅಂಜನೇಯ ದೇವಸ್ಥಾನದ ಜೀರ್ಣೋದ್ಧಾರ ಅಂಗವಾಗಿ ನವೆಂಬರ್ 15 ಮತ್ತು 16 ರಂದು ದೇವಸ್ಥಾನದಲ್ಲಿ ಗಂಗೆಪೂಜೆ, ಹೋಮ, ಕುಂಭಾಬಿಷೇಕ,  ಮಹಾಪ್ರದಕ್ಷಿಣೆ,ಗೋದರ್ಶನ ಸೇರಿದಂತೆ ಹಲವು ಧಾರ್ಮಿಕ ಪೂಜಾವಿಧಾನಗಳನ್ನ ಭಕ್ತರ ಸಮ್ಮುಖದಲ್ಲಿ ನೆರವೇರಿಸಲಾಯಿತು.

ಇಲ್ಲಿನ ಆಂಜನೇಯ‌ಸ್ವಾಮಿ ದೇವಸ್ಥಾನಕ್ಕೆ 300ವರ್ಷಗಳ ಇತಿಹಾಸವಿದೆ ಎಂದು ಇಲ್ಲಿನ‌ ಗ್ರಾಮಸ್ಥರು‌ ತಿಳಿಸಿದ್ದಾರೆ. ಮೊದಲು ಅಭಯ ಆಂಜನೇಯಸ್ವಾಮಿ ಎಂದು ಕರೆಯುತ್ತಿದ್ದರು. ಭಕ್ತರು ಬೇಡಿಕೊಳ್ಳವ ವರಗಳನ್ನ ಶೀಘ್ರವಾಗಿ ಈಡೇರಿಸುತ್ತಿರುವುದರಿಂದ ವರದ ಆಂಜನೇಯನಸ್ವಾಮಿ ಎಂದು‌ ಮರುನಾಮಕರಣ ಮಾಡಲಾಗಿದೆ.

ಶ್ರೀ ವರದ ಅಂಜನೇಯ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮದ ಅಂಗವಾಗಿ ಗ್ರಾಮದಲ್ಲಿ ಹಬ್ಬದ ವಾತಾವರಣ ಏರ್ಪಟ್ಟಿತು.

ಈ ಹಿಂದೆ ದೇವಸ್ಥಾನದ ಮುಂದೆ ಕಲ್ಯಾಣಿ ಇದ್ದು, ಕಲ್ಯಾಣಿಯಲ್ಲಿ ಸದಾ ನೀರು ತುಂಬಿ ತುಳುಕುತ್ತಿತ್ತು. ಕಲ್ಯಾಣಿಯಲ್ಲಿನ ನೀರು ಬಲಗಡೆಯಿಂದ ವೃತ್ತಾಕರದಲ್ಲಿ ತಿರುಗಿದರೆ ಮಳೆಯಾಗುತ್ತಿತ್ತು ಎಂಬ ನಂಬಿಕೆ ಸಹ ಗ್ರಾಮಸ್ಥರಲ್ಲಿ ಇತ್ತು ಎಂದು ಗ್ರಾಮದ ಹಿರಿಯರಾದ ನಾರಾಯಣಸ್ವಾಮಿ ಅವರು ಹೇಳಿದ್ದಾರೆ.

ಊರಿನ ಗ್ರಾಮಸ್ಥರೆಲ್ಲಾ ಸೇರಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಧನ ಸಹಾಯ ನೀಡಿದ್ದಾರೆ, ಗ್ರಾಮದ  ಹನುಮಯ್ಯ. ಅಶ್ವತ್ಥಮ್ಮ, ಬೈರಣ್ಣ ದೇವಸ್ಥಾನದ ಅಭಿವೃದ್ಧಿಗೆ ಭೂದಾನ ಮಾಡಿದ್ದಾರೆ.

ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಹೋಮ, ಯಾಗ, ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ ವ್ಯವಸ್ಥೆ ಮಾಡಲಾಗುತ್ತು.

ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ  ಶಾಸಕ ಧೀರಜ್ ಮುನಿರಾಜ್, ಗ್ರಾಮ ಪಂಚಾಯತಿ ಸದಸ್ಯರಾದ ನಾರಾಯಣಸ್ವಾಮಿ, ಭೈರೇಗೌಡರು, ಮಂಜುಳ ಮೂರ್ತಿ, ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಕಾರ್ಯದರ್ಶಿ ನಾರಾಯಣಸ್ವಾಮಿ. ದೇವಸ್ಥಾನದ ಅಧ್ಯಕ್ಷರಾದ ಆನಂದ್, ಗ್ರಾಮಸ್ಥರಾದ ಉಮಾಭಾರತಿ, ನಿರ್ಮಲ ಸೇರಿದಂತೆಊರಿನ ಗ್ರಾಮಸ್ಥರು ಸೇರಿದಂತೆ ಕುಲ ಬಾಂಧವರು ಹಾಜರಿದ್ದರು

Ramesh Babu

Journalist

Recent Posts

ವಾಲ್ಮೀಕಿ ಜಯಂತಿ ರಜೆ ದಿನಾಂಕ ಬದಲು

ಬೆಂಗಳೂರು: ಮಹರ್ಷಿ ವಾಲ್ಮೀಕಿ ಜಯಂತಿಯ ಸಾರ್ವತ್ರಿಕ ರಜೆ ದಿನಾಂಕವನ್ನು ಬದಲಾಯಿಸಿ ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಹಿಂದೆ…

2 hours ago

ನೇಯ್ಗೆ ಉದ್ಯಮದ ಕಚ್ಚಾ ವಸ್ತುಗಳ ಬೆಲೆ ಏರಿಕೆಗೆ ಖಂಡನೆ: ನೇಕಾರ ಹೋರಾಟ ಸಮಿತಿಯಿಂದ ಪ್ರತಿಭಟನೆ

ದಿನದಿಂದ ದಿನಕ್ಕೆ ನೇಕಾರಿಕೆ ಮಾಡುವುದು ಕಷ್ಟವಾಗುತ್ತಿದೆ. ಸೀರೆ ಉತ್ಪಾದನೆಯಲ್ಲಿ ಬಳಸುವ ಕಚ್ಚ ಸಾಮಗ್ರಿಗಳ ಬೆಲೆ ಗಗನಕ್ಕೆರುತ್ತಿದೆ ಕೂಡಲೇ ಸರ್ಕಾರ ಮಧ್ಯೆ…

5 hours ago

ಜಗಳ ಬಿಡಿಸಲು ಹೋದ ಪೊಲೀಸರ ಮೇಲೆಯೇ ಹಲ್ಲೆ ಆರೋಪ: 112 ತುರ್ತು ಸೇವೆ ಸಿಬ್ಬಂದಿಗೆ ಗಾಯ: ಇಬ್ಬರು ಆರೋಪಿಗಳು ವಶಕ್ಕೆ

ದೊಡ್ಡಬಳ್ಳಾಪುರ: ಕುಡಿದ ಮತ್ತಿನಲ್ಲಿ ಪರಸ್ಪರ ಜಗಳವಾಡುತ್ತಿದ್ದವರನ್ನು ಬಿಡಿಸಲು ತೆರಳಿದ್ದ 112 ತುರ್ತು ಸೇವೆಯ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಆರೋಪ…

8 hours ago

ಮ್ಯಾನ್‌ಹೋಲ್ ತುಂಬಿ ಹೆದ್ದಾರಿಗೆ ಹರಿದ ಕೊಳಚೆ ನೀರು

ದೊಡ್ಡಬಳ್ಳಾಪುರ: ನಗರದ ಡಾ. ಬಿ.ಆರ್. ಅಂಬೇಡ್ಕರ್ (ಟಿಬಿ) ವೃತ್ತದಲ್ಲಿ ಮ್ಯಾನ್‌ಹೋಲ್ ತುಂಬಿ ತುಳುಕುತ್ತಿದ್ದು, ಕೊಳಚೆ ನೀರು ಹೆದ್ದಾರಿಗೆ ಹರಿದು ವಾಹನ…

10 hours ago

ಎಸಿ ಕಚೇರಿ ಮೇಲೆ ಲೋಕಾಯುಕ್ತ ದಾಳಿ: ಕಚೇರಿಯ ಕೆಲ ಅಧಿಕಾರಿಗಳು, ಸಿಬ್ಬಂದಿ ನಾಪತ್ತೆ: ಅಧಿಕಾರಿಗಳಿಗಾಗಿ ಕಾಯುತ್ತಿರುವ ಸಾರ್ವಜನಿಕರು

ದೊಡ್ಡಬಳ್ಳಾಪುರ: ನಗರದ ಉಪವಿಭಾಗಾಧಿಕಾರಿ (ಎಸಿ) ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಲೋಕಾಯುಕ್ತ…

11 hours ago

ಸ್ಪರ್ಧಾತ್ಮಕ ಜಗತ್ತಿಗೆ ಮಕ್ಕಳನ್ನು ಅಣಿಗೊಳಿಸಿ- ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ನೀಲಕಂಠ ಗವಾಂಕರ್ ಸಲಹೆ

ಜಗತ್ತು ದಿನದಿಂದ ದಿನಕ್ಕೆ ವೇಗವಾಗಿ ಬದಲಾಗುತ್ತಿದ್ದು, ಹೆಚ್ಚುತ್ತಿರುವ ಸ್ಪರ್ಧೆಯನ್ನು ಎದುರಿಸುವ ಸಾಮರ್ಥ್ಯವನ್ನು ಮಕ್ಕಳಲ್ಲಿ ಬೆಳೆಸಲು ಪೋಷಕರು ಹಾಗೂ ಶಿಕ್ಷಕರು ಒಟ್ಟಾಗಿ…

1 day ago