ತಾಲೂಕಿನ ವರದನಹಳ್ಳಿಯ ಶ್ರೀ ವರದ ಅಂಜನೇಯ ದೇವಸ್ಥಾನದ ಜೀರ್ಣೋದ್ಧಾರ ಅಂಗವಾಗಿ ನವೆಂಬರ್ 15 ಮತ್ತು 16 ರಂದು ದೇವಸ್ಥಾನದಲ್ಲಿ ಗಂಗೆಪೂಜೆ, ಹೋಮ, ಕುಂಭಾಬಿಷೇಕ, ಮಹಾಪ್ರದಕ್ಷಿಣೆ,ಗೋದರ್ಶನ ಸೇರಿದಂತೆ ಹಲವು ಧಾರ್ಮಿಕ ಪೂಜಾವಿಧಾನಗಳನ್ನ ಭಕ್ತರ ಸಮ್ಮುಖದಲ್ಲಿ ನೆರವೇರಿಸಲಾಯಿತು.
ಇಲ್ಲಿನ ಆಂಜನೇಯಸ್ವಾಮಿ ದೇವಸ್ಥಾನಕ್ಕೆ 300ವರ್ಷಗಳ ಇತಿಹಾಸವಿದೆ ಎಂದು ಇಲ್ಲಿನ ಗ್ರಾಮಸ್ಥರು ತಿಳಿಸಿದ್ದಾರೆ. ಮೊದಲು ಅಭಯ ಆಂಜನೇಯಸ್ವಾಮಿ ಎಂದು ಕರೆಯುತ್ತಿದ್ದರು. ಭಕ್ತರು ಬೇಡಿಕೊಳ್ಳವ ವರಗಳನ್ನ ಶೀಘ್ರವಾಗಿ ಈಡೇರಿಸುತ್ತಿರುವುದರಿಂದ ವರದ ಆಂಜನೇಯನಸ್ವಾಮಿ ಎಂದು ಮರುನಾಮಕರಣ ಮಾಡಲಾಗಿದೆ.
ಶ್ರೀ ವರದ ಅಂಜನೇಯ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮದ ಅಂಗವಾಗಿ ಗ್ರಾಮದಲ್ಲಿ ಹಬ್ಬದ ವಾತಾವರಣ ಏರ್ಪಟ್ಟಿತು.
ಈ ಹಿಂದೆ ದೇವಸ್ಥಾನದ ಮುಂದೆ ಕಲ್ಯಾಣಿ ಇದ್ದು, ಕಲ್ಯಾಣಿಯಲ್ಲಿ ಸದಾ ನೀರು ತುಂಬಿ ತುಳುಕುತ್ತಿತ್ತು. ಕಲ್ಯಾಣಿಯಲ್ಲಿನ ನೀರು ಬಲಗಡೆಯಿಂದ ವೃತ್ತಾಕರದಲ್ಲಿ ತಿರುಗಿದರೆ ಮಳೆಯಾಗುತ್ತಿತ್ತು ಎಂಬ ನಂಬಿಕೆ ಸಹ ಗ್ರಾಮಸ್ಥರಲ್ಲಿ ಇತ್ತು ಎಂದು ಗ್ರಾಮದ ಹಿರಿಯರಾದ ನಾರಾಯಣಸ್ವಾಮಿ ಅವರು ಹೇಳಿದ್ದಾರೆ.
ಊರಿನ ಗ್ರಾಮಸ್ಥರೆಲ್ಲಾ ಸೇರಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಧನ ಸಹಾಯ ನೀಡಿದ್ದಾರೆ, ಗ್ರಾಮದ ಹನುಮಯ್ಯ. ಅಶ್ವತ್ಥಮ್ಮ, ಬೈರಣ್ಣ ದೇವಸ್ಥಾನದ ಅಭಿವೃದ್ಧಿಗೆ ಭೂದಾನ ಮಾಡಿದ್ದಾರೆ.
ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಹೋಮ, ಯಾಗ, ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ ವ್ಯವಸ್ಥೆ ಮಾಡಲಾಗುತ್ತು.
ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಶಾಸಕ ಧೀರಜ್ ಮುನಿರಾಜ್, ಗ್ರಾಮ ಪಂಚಾಯತಿ ಸದಸ್ಯರಾದ ನಾರಾಯಣಸ್ವಾಮಿ, ಭೈರೇಗೌಡರು, ಮಂಜುಳ ಮೂರ್ತಿ, ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಕಾರ್ಯದರ್ಶಿ ನಾರಾಯಣಸ್ವಾಮಿ. ದೇವಸ್ಥಾನದ ಅಧ್ಯಕ್ಷರಾದ ಆನಂದ್, ಗ್ರಾಮಸ್ಥರಾದ ಉಮಾಭಾರತಿ, ನಿರ್ಮಲ ಸೇರಿದಂತೆಊರಿನ ಗ್ರಾಮಸ್ಥರು ಸೇರಿದಂತೆ ಕುಲ ಬಾಂಧವರು ಹಾಜರಿದ್ದರು