ಕೇರಳದ ವಯನಾಡುವಿನಲ್ಲಿ ಭಾರೀ ಮಳೆಯಾಗಿದ್ದು, ಭೀಕರ ಮಳೆಗೆ ಇಂದು ಬೆಳಗ್ಗೆ ಮೆಪ್ಪಾಡಿ ಬಳಿ ಭಾರೀ ಭೂಕುಸಿತ ಸಂಭವಿಸಿದೆ. ಭೂಕುಸಿತಕ್ಕೆ 24 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನರುಮಣ್ಣಿನಡಿ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ.
ಕೇರಳದ ಮುಂಡಕೈ ಜಲ ಸ್ಫೋಟ ದುರಂತದ ದೃಶ್ಯಗಳು ಇದೀಗ ಹರಿದು ಬರುತ್ತಿದೆ. ಬೆಳಗಿನ ಜಾವ ಒಂದೂವರೆ ಗಂಟೆಗೆ ಜಲ ಸ್ಫೋಟ ಉಂಟಾಗಿ 500ಕ್ಕೂ ಹೆಚ್ಚು ಜನ ಮಣ್ಣಿನಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಇದೀಗ ರಕ್ಷಣಾ ಕಾರ್ಯಕ್ಕೆ ಹೆಲಿಕ್ಯಾಪ್ಟರ್ ಅನ್ನು ಬಳಸಲು ಸಿದ್ಧತೆ ನಡೆಸಲಾಗಿದೆ. ನಾಲ್ಕು ವರ್ಷದ ಹಿಂದೆ ಕೊಡಗಿನಲ್ಲಿ ನಡೆದ ದುರಂತಕಿಂತ ಹೆಚ್ಚಾಗಿ ಸೂರಮಲೆಯಲ್ಲಿ ಜಲ ಸ್ಫೋಟ ಉಂಟಾಗಿ ಮುಂಡಕೈ ಪ್ರದೇಶ ಸಂಪೂರ್ಣವಾಗಿ ನಾಶವಾಗಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಂಟಿಯಾಗಿ ಕಾರ್ಯಚರಣೆ ನಡೆಸಲು ತೀರ್ಮಾನಿಸಿ ಸಿದ್ಧತೆ ನಡೆಸಲಾಗಿದೆ. ಹಲವರು ಕಾಡಿನ ಮಧ್ಯೆ ಸಿಲುಕಿಕೊಂಡಿದ್ದು ಕೆಲವರು ಮನೆಯಲ್ಲಿ ತಂಡೋಪತಂಡವಾಗಿ ಸೇರಿಕೊಂಡಿದ್ದಾರೆ. ಅವರಿಗೆಲ್ಲ ಆಹಾರದ ವ್ಯವಸ್ಥೆ ಇಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಕಲ ವ್ಯವಸ್ಥೆ ಕಲ್ಪಿಸಲು ಸರ್ಕಾರ ಸಿದ್ಧತೆ ನಡೆಸಿದ್ದು, ನೆರೆಯಲ್ಲಿ ಸಿಲುಕಿಕೊಂಡಿರುವವರನ್ನು ರಕ್ಷಣೆ ಮಾಡಲು ಹೆಲಿಕ್ಯಾಪ್ಟರ್ ಬಳಸಲು ತೀರ್ಮಾನಿಸಿ ಹೆಲಿಕ್ಯಾಪ್ಟರ್ ಸ್ಥಳಕ್ಕೆ ದಾವಿಸುತ್ತಿದೆ.
ಮುಂಡಕೈ ಕೆಳಭಾಗದಲ್ಲಿ ಇದ್ದ ಶಾಲೆ ಕಟ್ಟಡ,ದೇವಾಲ ಯ, ಹಲವು ಮನೆಗಳು ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಿದೆ. ವೈನಾಡು ಜಿಲ್ಲೆಯ ವೈತಿರಿ ಪ್ರದೇಶದಲ್ಲಿ ಹಲವು ಹೋಂಸ್ಟೇ ರಿಸರ್ಟ್ ಗಳಿದ್ದು ಭೂಕುಸಿತದಿಂದ ಹಲವು ಹೋಂ ಸ್ಟೇ ಗಳಿಗೂ ಕೂಡ ಈ ಭೂಕುಸಿತದಿಂದ ಅನಾಹುತ ಉಂಟಾಗಿದೆ. ಬೇರೆ ಬೇರೆ ಜಿಲ್ಲೆ ಹಾಗೂ ರಾಜ್ಯದ ಪ್ರವಾಸಿಗರು ಇಲ್ಲಿ ತಂಗಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಸೇನೆ, ಏರ್ಪೋಸ್ ಹಾಗೂ ಎನ್ ಡಿ ಆರ್ ಎಫ್ ತಂಡ ಈಗಾಗಲೇ ಕಾರ್ಯಾಚರಣೆಗೆ ಹೊರಟಿದ್ದು. ಸಂಸದರು ಇಲ್ಲದ ಈ ಜಿಲ್ಲೆಯಲ್ಲಿ ಇದೀಗ ನೇರವಾಗಿ ಪ್ರದಾನ ಮಂತ್ರಿಗಳ ಕಾರ್ಯಾಲಯದಿಂದ ಎಲ್ಲಾ ನೆರವನ್ನು ನೀಡುವುದಾಗಿ ಘೋಷಿಸಿದೆ.