ವಧುವಿಗೆ ತೊಡಿಸಲು ಇಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು

ವಧುವಿಗೆ ತೊಡಿಸಲೆಂದು ಇಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮದುವೆ ಮನೆಯಲ್ಲೇ ಕಳ್ಳತನವಾಗಿರುವ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ರೈತ ಭವನದಲ್ಲಿ ನಡೆದಿದೆ.

ಸಂಬಂಧಿಕರ ಸೋಗಿನಲ್ಲಿ ಬಂದ ಯುವಕನಿಂದಲೇ ಕಳ್ಳತನ ಆಗಿದೆ ಎಂದು ಶಂಕಿಸಲಾಗಿದೆ. ಒಂದು ಚಿನ್ನದ ಕಡಗ, ಒಂದು ಜೋತೆ ಓಲೆ, ಚಿನ್ನದ ನೆಕ್ಲೇಸ್ ಜೊತೆಗೆ 5,000 ರೂ. ಕದ್ದು ಪರಾರಿಯಾಗಿದ್ದಾನೆ ಎಂದು ವಧುವಿನ ಕುಟುಂಬಸ್ಥರು ಆರೋಪಿಸಿದ್ದಾರೆ.

ಘಟನೆ ಸಂಬಂಧ ಕುಶಾಲನಗರ ನಗರ ಠಾಣೆಗೆ ವಧುವಿನ ಪೋಷಕರು ದೂರು ನೀಡಿದ್ದಾರೆ. ನಂತರ ಮದುವೆ ಮಂಟಪಕ್ಕೆ ತೆರಳಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನ ಪರಿಶೀಲಿಸಿದ್ದಾರೆ. ಮುಂದಿನ ತನಿಖೆ ಕೈಗೊಂಡಿದ್ದು, ಕಳ್ಳನಿಗಾಗಿ ಬಲೆ ಬೀಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!