ವಡಗೂರು ಡಿ.ವಿ ಹರೀಶ್ ಕಾಂಗ್ರೆಸ್ ಮರು ಸೇರ್ಪಡೆಗೆ ನಿಷ್ಠಾವಂತ ಕಾಂಗ್ರೆಸ್ ಮುಖಂಡರ ತೀವ್ರ ವಿರೋಧ

ಕೋಲಾರ: ಅಧಿಕಾರಕ್ಕಾಗಿ ಪಕ್ಷದಿಂದ ಪಕ್ಷಕ್ಕೆ ಹಾರುತ್ತಿರುವ ಕೋಮುಲ್ ಮಾಜಿ ನಿರ್ದೇಶಕ ವಡಗೂರು ಡಿ.ವಿ ಹರೀಷ್ ಅವರನ್ನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷಕ್ಕೆ ಮರು ಸೇರ್ಪಡೆ ವಿರೋಧ ಸೇರಿದಂತೆ ಕೋಮುಲ್ ಕ್ಷೇತ್ರ ವಿಂಗಡಣೆಯಲ್ಲಿ ಹುತ್ತೂರು ಹೋಬಳಿಯನ್ನು ಬಂಗಾರಪೇಟೆ ಕ್ಷೇತ್ರಕ್ಕೆ ಸೇರ್ಪಡೆ ಮಾಡುವ ತೀರ್ಮಾನದ ವಿರುದ್ದ ಕಾಂಗ್ರೆಸ್ ಪಕ್ಷದ ಶಾಸಕರಿಗೆ ಹಾಗೂ ಪಕ್ಷದ ಹೈಕಮಾಂಡ್ ಗೆ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಒತ್ತಾಯ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು.

ತಾಲೂಕಿನ ಹೊಲ್ಲಂಬಳ್ಳಿ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಹುತ್ತೂರು ಹೋಬಳಿ ಮಟ್ಟದ ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತರು ಹಾಗೂ ಮುಖಂಡರ ಸಭೆಯಲ್ಲಿ ಮಾತನಾಡಿದ ಮುಖಂಡರು ಕೋಮುಲ್ ನಿರ್ದೇಶಕ ವಡಗೂರು ಹರೀಶ್ ಕಾಂಗ್ರೆಸ್ ಪಕ್ಷದಿಂದಲ್ಲೇ ಎಲ್ಲಾ ರೀತಿಯ ಅಧಿಕಾರ ಮತ್ತು ಸೌಲಭ್ಯಗಳನ್ನು ಪಡೆದು ಬಂಗಾರಪೇಟೆ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಹಾಗೂ ಹೋಬಳಿ ವ್ಯಾಪ್ತಿಯ ನಿಷ್ಠಾವಂತ ಕಾಂಗ್ರೆಸ್ ಮುಖಂಡರು ಮೇಲೆ ಆರೋಪ, ನಿಂದನೆ, ಅಸಹಕಾರ ಮಾಡಿದ ವ್ಯಕ್ತಿಯನ್ನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷಕ್ಕೆ ಮರು ಸೇರ್ಪಡೆ ಮಾಡಿಕೊಳ್ಳಬಾರದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಬಂಗಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೀಸಂದ್ರ ಗೋಪಾಲಗೌಡ ಮಾತನಾಡಿ ವಡಗೂರು ಹರೀಶ್ ಅವರು ಹೋಬಳಿಯ ನಿಷ್ಠಾವಂತ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಮುಖಂಡರಿಗೆ ಕೊಟ್ಟಿರುವ ನೋವು ಯಾರು ಮರೆತಿಲ್ಲ ಅಧಿಕಾರ ಬೇಕಾದಾಗ ಕಾಂಗ್ರೆಸ್ ಪಕ್ಷಕ್ಕೆ ಬರೋದು ಅಧಿಕಾರ ಸಿಕ್ಕಿದ ಮೇಲೆ ಅನ್ಯ ಪಕ್ಷಕ್ಕೆ ಹೋಗುವ ಸ್ವಾರ್ಥ ರಾಜಕಾರಣ ಮಾಡುವ ವ್ಯಕ್ತಿ ಕಾಂಗ್ರೆಸ್ ಪಕ್ಷಕ್ಕೆ ಅವಶ್ಯಕತೆ ಇಲ್ಲ ಪಕ್ಷಕ್ಕಾಗಿ ದುಡಿದ ಸಾಮಾನ್ಯ ಕಾರ್ಯಕರ್ತರಿಗೆ ಸ್ಥಾನಮಾನ ಕೊಡಲಿ‌ ಅದು ಬಿಟ್ಟು ಪಕ್ಷ ಬಿಟ್ಟು ಹೋದವರನ್ನು ಕರೆ ತಂದು ಮತ್ತೆ ಅಧಿಕಾರ ಕೊಡುವುದಕ್ಕೆ ನಮ್ಮೆಲ್ಲರ ವಿರೋಧವಿದೆ ಎಂದರು.

ಈ ಸಂದರ್ಭದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಬೆಳಗಾನಹಳ್ಳಿ ಮುನಿವೆಂಕಟಪ್ಪ ಮಾತನಾಡಿ ಹೋಬಳಿಯಲ್ಲಿ ಪಕ್ಷದ ತೀರ್ಮಾನಗಳಿಗೆ ಸ್ಥಳೀಯ ಕಾರ್ಯಕರ್ತರು ಮುಖಂಡ ಅಭಿಪ್ರಾಯವನ್ನು ಪಡೆಯಬೇಕು ಹುತ್ತೂರು ಹೋಬಳಿಯನ್ನು ಈಗಾಗಲೇ ಕಂದಾಯ ವ್ಯಾಪ್ತಿಯಲ್ಲಿ ಕೋಲಾರ ತಾಲೂಕಿಗೆ ಒಳಗೊಂಡಿದೆ ಕೋಮುಲ್ ಕ್ಷೇತ್ರ ವಿಂಗಡಣೆಯಲ್ಲಿ ಯಾವುದೇ ಕಾರಣಕ್ಕೂ ಬಂಗಾರಪೇಟೆ ಕ್ಷೇತ್ರಕ್ಕೆ ಸೇರ್ಪಡೆ ಮಾಡಬಾರದು ರೈತರು ಹಾಲು ಉತ್ಪಾದಕರಿಗೆ ಅನುಕೂಲ ಮಾಡುವಂತೆ ಶಾಸಕರು ಕೂಡ ಕ್ರಮ ವಹಿಸಬೇಕು ಎಂದು ಸಭೆಯಲ್ಲಿ ತಿಳಿಸಿದರು.

ಹುತ್ತೂರು ಗ್ರಾಪಂ ಮಾಜಿ ಅಧ್ಯಕ್ಷ ವಿಟ್ಟಪ್ಪನಹಳ್ಳಿ ಕೋಟೆ ಸಿಎಂ ನಾರಾಯಣಸ್ವಾಮಿ ಮಾತನಾಡಿ ಕಾಂಗ್ರೆಸ್ ಪಕ್ಷವು ಕುಟುಂಬ ಇದ್ದಂತೆ ಅಂತಹ ಕುಟುಂಬದಲ್ಲಿ ಕತ್ತು ಕೊಯ್ದ ಬೇರೆ ಪಕ್ಷಕ್ಕೆ ಹೋಗಿದ್ದು ಅಲ್ಲದೇ ಇವತ್ತಿಗೂ ಕೂಡ ಹುತ್ತೂರು ಹೋಬಳಿಯಲ್ಲಿ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರಿಗೆ ನೋವು ಮಾಡಿಕೊಂಡು ಬಂದಿದ್ದಾರೆ ಅಂತಹ ವ್ಯಕ್ತಿ ಅಧಿಕಾರಕ್ಕೆ ಮಾತ್ರ ಸೀಮಿತವಾಗಿದ್ದಾರೆ ನಮ್ಮಲ್ಲಿನ ನಿಷ್ಠಾವಂತ ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸಿ ಅಧಿಕಾರ ಕೊಡುವ ಕೆಲಸವನ್ನು ಮಾಡೋಣ ಅದು ಬಿಟ್ಟು ಪಕ್ಷ ಬಿಟ್ಟು ಹೋದವರು ಮತ್ತೆ ಪಕ್ಷಕ್ಕೆ ಅವಶ್ಯಕತೆ ಇಲ್ಲ ಎಂದರು.

ಸಭೆಯಲ್ಲಿ ಮುಖಂಡರು ಮಾತನಾಡಿ ಹುತ್ತೂರು ಹೋಬಳಿಯಲ್ಲಿ ಕಾಂಗ್ರೆಸ್ ಪಕ್ಷವು ಬಲಿಷ್ಠವಾಗಿದೆ ಅಧಿಕಾರಕ್ಕಾಗಿ ಬರುವವರಿಂದ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಸಂಘಟನೆಗೆ ಲಾಭವಿಲ್ಲ ಜೊತೆಗೆ ಯಾವುದೇ ಕಾರಣಕ್ಕೂ ಕೋಮುಲ್ ಕ್ಷೇತ್ರ ವಿಂಗಡಣೆಯಲ್ಲಿ ಬಂಗಾರಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಹುತ್ತೂರು ಹೋಬಳಿ ಸೇರಿಸಬಾರದು ಎಂಬುದು ನಮ್ಮ ಎಲ್ಲರ ತೀರ್ಮಾನವಾಗಿದ್ದು ಇದ್ದನ್ನು ಶಾಸಕ ಎಸ್.ಎನ್ ನಾರಾಯಣಸ್ವಾಮಿ ಹಾಗೂ ಕಾಂಗ್ರೆಸ್ ಹೈಕಮಾಂಡ್ ಗಮನಕ್ಕೆ ತರಬೇಕು ಎಂದು ಒತ್ತಾಯಿಸಿದರು.

ಸಭೆಯಲ್ಲಿ ಷಾಪೂರು ಗ್ರಾಪಂ ಅಧ್ಯಕ್ಷ ರಾಮಕೃಷ್ಣೇಗೌಡ, ವಡಗೂರು ಗ್ರಾಪಂ ಅಧ್ಯಕ್ಷ ಚಂದ್ರಪ್ಪ, ಹುತ್ತೂರು ಗ್ರಾಪಂ ಅಧ್ಯಕ್ಷ ಚಂದ್ರಪ್ಪ, ಮುಖಂಡರಾದ ನಡುಪಳ್ಳಿ ಸಂತೋಷ್, ಹರಟಿ ನರೇಂದ್ರ ಬಾಬು, ಅಬ್ಬಣಿ ಸಂಪತ್, ಬೆಂಕಿ ನಾಗರಾಜ್, ಹರಳಕುಂಟೆ ವೆಂಕಟೇಶಪ್ಪ, ಮಲ್ಲಂಡಹಳ್ಳಿ ನಾಗಭೂಷಣ ಬಾಬು, ಹೊಲ್ಲಂಬಳ್ಳಿ ಚಲಪತಿ, ಯಾರಂಘಟ್ಟ ಮುನಿರಾಜು, ಸತೀಶ್, ರಮೇಶ್, ತಾತಪ್ಪ ಕೋದಂಡಪ್ಪ, ಹಳೆಸೋಮರಸನಹಳ್ಳಿ ಮಂಜುನಾಥ್, ಗಿರೀಶ್, ಮುಂತಾದವರು ಸಭೆಯಲ್ಲಿ ಮಾತನಾಡಿ ತೀರ್ಮಾನಗಳಿಗೆ ಅನುಮೋದಿಸಿದರು ಸಭೆಯಲ್ಲಿ ಅಜ್ಜಪ್ಪನಹಳ್ಳಿ ಸುರೇಶ್, ಕೆಂಬೋಡಿ ಗಿರೀಶ್ ಮುಂತಾದವರು ಇದ್ದರು.

Leave a Reply

Your email address will not be published. Required fields are marked *