ಕೋಲಾರ: ತಾಲ್ಲೂಕಿನ ವಕ್ಕಲೇರಿ ಗ್ರಾಮದ ಕೋದಂಡರಾಮಸ್ವಾಮಿಯ ಬ್ರಹ್ಮರಥೋತ್ಸವವು ಬುಧವಾರ ಸಂಭ್ರಮದಿಂದ ನೆರವೇರಿತು ಬೆಳಗ್ಗೆ ಕೋದಂಡರಾಮಸ್ವಾಮಿಯ ಮೂರ್ತಿಗಳಿಗೆ ನಾನಾ ಬಗೆಯ ಹೂವುಗಳಿಂದ ಅಲಂಕರಿಸಲಾಗಿತ್ತು. ನಂತರ ಸೀತಾರಾಮ ಕಲ್ಯಾಣೋತ್ಸವು ಧಾರ್ಮಿಕ ಆಚರಣೆ ಮೂಲಕ ನೆರವೇರಿಸಿದ ನಂತರ ಅಲಂಕೃತ ರಥದಲ್ಲಿ ಕೋದಂಡರಾಮಸ್ವಾಮಿ ಉತ್ಸವಮೂರ್ತಿಯನ್ನು ಕುಳ್ಳರಿಸಿ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು
ಈ ಸಂದರ್ಭದಲ್ಲಿ ರಾಜ್ಯ ಒಕ್ಕಲಿಗ ಸಂಘದ ಮಾಜಿ ನಿರ್ದೇಶಕ ವಕ್ಕಲೇರಿ ರಾಮು ಮಾತನಾಡಿ ಪ್ರತಿವರ್ಷದಂತೆ ಶ್ರೀ ಕೋದಂಡರಾಮಸ್ವಾಮಿ ಬ್ರಹ್ಮರಥೋತ್ಸವದಲ್ಲಿ ಭಕ್ತರು ಸ್ವಾಮಿ ದರ್ಶನ ಪಡೆದಿದ್ದಾರೆ. ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚು ನಡೆದಾಗ ಮಾತ್ರ, ಸಮಾಜದಲ್ಲಿ ಶಾಂತಿ, ನೆಮ್ಮದಿ ಸಾಧ್ಯವಾಗುತ್ತದೆ ಮುಂದಿನ ದಿನಗಳಲ್ಲಿ ಉತ್ತಮ ಮಳೆಯನ್ನು ಕರುಣಿಸಿ ರೈತರು ಜೀವನವನ್ನು ಅಸುನು ಮಾಡಲಿ ಎಂದು ಇದೇ ಸಂದರ್ಭದಲ್ಲಿ ದೇವರಲ್ಲಿ ಪ್ರಾರ್ಥಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೋದಂಡರಾಮಸ್ವಾಮಿ ದೇವಾಲಯದ ಸ್ವಾಮೀಜಿಗಳಾದ ಸುಬ್ರಮಣಿ, ಮುರಳಿ, ರಾಜು, ಜಿಪಂ ಮಾಜಿ ಅಧ್ಯಕ್ಷೆ ಚೌಡೇಶ್ವರಿ ರಾಮು, ಮುಖಂಡರಾದ ಗುರುಗಂಜಿಗುರ್ಕಿ ಮಂಡಿ ನವೀನ್ ಕುಮಾರ್, ಮನೋಹರ್, ವೆಂಕಟೇಶ್, ಟೈಲರ್ ರಾಘವೇಂದ್ರ ಮುಂತಾದವರು ಇದ್ದರು.