ಕೋಲಾರ: ಏರಿಕೆಯಾಗಿರುವ.ವಿದ್ಯುತ್ತಿನ ಬೆಲೆ ಕಡಿಮೆ ಮಾಡಿ ಲೋಡ್ ಶೆಡ್ಡಿಂಗ್ ಹೆಸರಿನಲ್ಲಿ ಸಮರ್ಪಕವಾದ ವಿದ್ಯುತ್ ನೀಡದೆ ರೈತರ ಜೀವನ ಹಾಗೂ ಮಕ್ಕಳ ಭವಿಷ್ಯದ ಜೊತೆಗೆ ಚೆಲ್ಲಾಟವಾಡುತ್ತಿರುವ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಕ್ರಮಕೈಗೊಂಡು ಗುಣಮಟ್ಟದ 10 ತಾಸು ವಿದ್ಯುತ್ ನೀಡಬೇಕೆಂದು ರೈತಸಂಘದಿಂದ ಬೆಳೆ ಸಮೇತ ಏ.7 ರಂದು ಸೋಮವಾರ ಮಾಲೂರು ಶಾಸಕರ ಮನೆ ಮುಂದೆ ಪ್ರತಿಭಟನೆ ನಡೆಸಲು ನಗರದ ಹೊರವಲಯದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ರೈತ ಸಂಘದ ಸಭೆಯಲ್ಲಿ ತೀರ್ಮಾನ ಮಾಡಲಾಯಿತು
ಪ್ರಕೃತಿ ವಿಕೋಪ, ನಕಲಿ ಬಿತ್ತನೆ ಬೀಜ, ರೋಗಗಳ ಹಾವಳಿಯಿಂದ ರೈತರು ಬೆಳೆದಂತಹ ಬೆಳೆಗಳಿಗೆ ಸೂಕ್ತವಾದ ಮಾರುಕಟ್ಟೆ ವ್ಯವಸ್ಥೆಯಿಲ್ಲದೆ ಕಣ್ಣ ಮುಂದೆಯೇ ಬೆಳೆ ನಾಶ ಒಂದು ಕಡೆಯಾದರೆ ಮತ್ತೊಂದು ಕಡೆ ಬೆಳೆ ಸಮೃದ್ಧವಾಗಿ ಮಾರುಕಟ್ಟೆಯಲ್ಲಿ ಉತ್ತಮ ಬೆಳೆಯಿದ್ದರೂ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ರೈತ ವಿರೋಧಿ ಧೋರಣೆಯಿಂದ ಕೈಗೆ ಬಂದ ಬೆಳೆ ಕಣ್ಣ ಮುಂದೆಯೇ ಸಮರ್ಪಕವಾದ ನೀರು ಹಾಯಿಸದೆ ಒಣಗಿ ಹೋಗುವ ಜೊತೆಗೆ ಹಾಕಿದ ಬಂಡವಾಳ ಕೈಗೆ ಸಿಗದೆ ಸಾಲದ ಸುಳಿಗೆ ಸಿಲುಕಲು ಬೆಸ್ಕಾಂ ಅಧಿಕಾರಿಗಳೇ ನೇರ ಕಾರಣ ಎಂದು ಮಾಲೂರು ತಾಲ್ಲೂಕು ರೈತಸಂಘದ ತಾಲೂಕು ಅಧ್ಯಕ್ಷ ಪೆಮ್ಮದೊಡ್ಡಿ. ಯಲ್ಲಪ್ಪ ವಿದ್ಯುತ್ ಅವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಪರೀಕ್ಷೆಯ ಸಮಯದಲ್ಲಿ ರಾತ್ರಿಯ ವೇಳೆ ವಿದ್ಯುತ್ ಕಡಿತ ಮಾಡಿ. ಮಕ್ಕಳ. ಭವಿಷ್ಯದ ಜೊತೆ ಚೆಲ್ಲಾಟ ಅಳುವ.ಬೆಸ್ಕಾಂ. ಅಧಿಕಾರಿಗಳ. ವಿರುದ್ದ ದ್ವನಿ ಇಲ್ದದ ಜನಪ್ರತಿನಿದಿಗಳ ವಿರುದ್ದ ಅಸಮಾಧಾನ ವ್ಯಕ್ತಪಡಿಸಿ ಸಮರ್ಪಕವಾದ ವಿದ್ಯುತ್ ನೀಡದೆ ರೈತರ ಬೆಳೆ ನಾಶವಾದರೆ ಬೆಸ್ಕಾಂ ಅಧಿಕಾರಿಗಳ ಆಸ್ತಿ ಹರಾಜು ಹಾಕಿ ರೈತರ ಬೆಳೆ ಪರಿಹಾರ ನಷ್ಟ ತುಂಬಿಕೊಳ್ಳುವ ಕಾನೂನು ಜಾರಿಯಾಗಬೇಕೆಂದು ಸರ್ಕಾರಕ್ಕೆ ಆಗ್ರಹ ಮಾಡಿದರು.
ಬೇಸಿಗೆ ಆರಂಭಕ್ಕೂ ಮುನ್ನವೇ ಲೋಡ್ ಶೆಡ್ಡಿಂಗ್ ಹಾಗೂ ಕಲ್ಲಿದ್ದಲು ನೆಪದಲ್ಲಿ ಗ್ರಾಮೀಣ ಪ್ರದೇಶದ ರೈತರಿಗೆ ಕೊಡುವ ವಿದ್ಯುತ್ ಅಲ್ಲಿ ಮಾತ್ರ ವ್ಯತ್ಯಯವಾಗುತ್ತದೆ. ಕೈಗಾರಿಕೆಗಳಿಗೆ ಶ್ರೀಮಂತರ ಐಶಾರಾಮಿ ಜೀವನಕ್ಕೆ ವಿದ್ಯುತ್ ಕೊರತೆ ಉಂಟಾಗುವುದಿಲ್ಲ ಎಂದು ಬೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರಗತಿಪರ ರೈತ ಪುತ್ತೇರಿ ರಾಜು ಮಾತನಾಡಿ, ಪ್ರತಿ ವರ್ಷ ಬೇಸಿಗೆಯಲ್ಲಿ ಸಮರ್ಪಕವಾದ ವಿದ್ಯುತ್ ನೀಡದೆ ರೈತರ ವಿದ್ಯುತ್ ಕಡಿತ ಮಾಡುವುದರಿಂದ ಬೆಸ್ಕಾಂ ಅಧಿಕಾರಿಗಳಿಗೆ ಸರ್ಕಾರ ಚಿನ್ನದ ಪದಕ ಕೊಡುತ್ತಾರೆಯೇ ರೈತರು ಬೆಳೆದ ಅನ್ನ ತಿಂದು ಅನ್ನದ ಋಣ ತೀರಿಸದೆ ರೈತ ವಿರೋಧಿ ಧೋರಣೆ ಬೆಸ್ಕಾಂ ಅಧಿಕಾರಿಗಳು ಅನುಸರಿಸುತ್ತಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಬೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿಯಿಂದ 1 ಎಕರೆ ಬೆಳೆಗೆ ನೀರು ಹಾಯಿಸಬೇಕಾದರೆ ಕನಿಷ್ಠ ಪಕ್ಷ 3 ದಿನ ಕೊಳವೆಬಾವಿಗಳ ಹತ್ತಿರ ಠಿಕಾಣಿ ಹೂಡಿ ರಾತ್ರಿ ಹಗಲು ಶ್ರಮ ಪಡಬೇಕಾದ ಪರಿಸ್ಥಿತಿಯ ಜೊತೆಗೆ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆದ ಬೆಳೆ ಒಂದೇ ದಿನದಲ್ಲಿ ಬೆಸ್ಕಾಂ ಅಧಿಕಾರಿಗಳ ರೈತ ವಿರೋಧಿ ನೀತಿಗೆ ನಾಶವಾಗುತ್ತಿದೆ. ಅಷ್ಟರ ಮಟ್ಟಿಗೆ ವಿದ್ಯುತ್ ಸಮಸ್ಯೆ ಹೆಚ್ಚಾಗಿದ್ದರೂ ಸ್ಥಳೀಯ ಜನ ಪ್ರತಿನಿಧಿಗಳು ಚಕಾರವೆತ್ತುತ್ತಿಲ್ಲ ಎಂದು ಅವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
24 ಗಂಟೆಯಲ್ಲಿ ಗುಣಮಟ್ಟದ 10 ತಾಸು ವಿದ್ಯುತ್ ನೀಡುವ ಜೊತೆಗೆ ಟಿಸಿ ಸುಟ್ಟರೆ ಲಂಚವಿಲ್ಲದೆ 12 ತಾಸುಗಳಲ್ಲಿ ಸರಿಪಡಿಸುವಂತೆ ಏಪ್ರಿಲ್ 7 ರಂದು ಸೋಮವಾರ ಜಾನುವಾರುಗಳು ಮತ್ತು ಬೆಳೆ ಸಮೇತ ಶಾಸಕರ ಮನೆ ಮುಂದೆ ಹೋರಾಟ ಮಾಡುವ ರೈತ ಸಂಘದ ಸಭೆಯಲ್ಲಿನ ತೀರ್ಮಾನ ಕೈಗೊಳ್ಳಲಾಯಿತು
ಸಭೆಯಲ್ಲಿನ. ರೈತಸಂಘದ ರಾಜ್ಯಉಪಾಧ್ಯಕ್ಷ ಕೆ.ನಾರಾಯಣಗೌಡ,ರಾಜ್ಯ ಮುಖಂಡ ಬಂಗಾವಾದಿ ನಾಗರಾಜ ಗೌಡ, ಸುಪ್ರೀಂಚಲ ಜಿಲ್ಲಾದ್ಯಕ್ಷ ಈಕಂಬಹಳ್ಳಿ ಮಂಜುನಾಥ, ತಿಮ್ಮಣ್ಣ, ಹರೀಶ..ರೊಪೇಶ. ಮಾ.ವೆ.ಪ್ರಕಾಶ.. ಮುಂತಾದವರಿದ್ದರು.