ಬೆಂಗಳೂರಿನ ಹನುಮಂತ ನಗರ ಠಾಣಾ ಹೆಡ್ ಕಾನ್ಸ್ ಸ್ಟೇಬಲ್ ವ್ಯಕ್ತಿಯೊಬ್ಬರಿಂದ ಲಂಚ ಪಡೆಯುವ ವೇಳೆ ಲೋಕಾಯುಕ್ತಾ ಬಲೆಗೆ ಬಿದ್ದಿರುವ ಘಟನೆ ಇಂದು ನಡೆದಿದೆ.
ಕವೀಶ್, ಲೋಕಾಯುಕ್ತ ಬಲೆಗೆ ಬಿದ್ದ ಹನುಮಂತ ನಗರ ಹೆಡ್ ಕಾನ್ಸ್ ಸ್ಟೇಬಲ್. ವಾಹನ ಬಿಡುಗಡೆ ಮಾಡಲು 25 ಸಾವಿರಕ್ಕೆ ಡಿಮಾಂಡ್ ಮಾಡಿ, 20 ಸಾವಿರ ಮುಂಗಡವಾಗಿ ಹಣ ಪಡೆಯುವಾಗ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದಿದ್ದಾರೆ.
ಹಣದ ಸಮೇತ ಹೆಡ್ ಕಾನ್ಸ್ ಸ್ಟೇಬಲ್ ರನ್ನ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.