ಲೋಕಸಭೆ ವಿರೋಧ ಪಕ್ಷದ ನಾಯಕನಾಗಿ ಕಾಂಗ್ರೆಸ್ ನಾಯಕ ಹಾಗೂ ರಾಯ್ಬರೇಲಿ ಸಂಸದ ರಾಹುಲ್ ಗಾಂಧಿ ಅವರನ್ನು ಆಯ್ಕೆ ಮಾಡಲಾಗಿದೆ.
ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದ ನಮ್ಮೆಲ್ಲರ ನೆಚ್ಚಿನ ನಾಯಕ ರಾಹುಲ್ ಗಾಂಧಿ ಅವರಿಗೆ ಅಭಿನಂದನೆಗಳು. ಸೇಡಿನ ರಾಜಕಾರಣ ಮತ್ತು ನಿರಂತರವಾದ ವೈಯಕ್ತಿಕ ಚಾರಿತ್ರ್ಯಹನನವನ್ನು ಎದುರಿಸುತ್ತಲೇ ತನ್ನ ದಣಿವರಿಯದ ಹೋರಾಟದ ಮೂಲಕ ಸರ್ವಾಧಿಕಾರಿ ಆಡಳಿತದಿಂದ ದೇಶವನ್ನು ರಕ್ಷಿಸಿದ ರಾಹುಲ್ ಗಾಂಧಿಯವರು ಸಾಧನೆಯ ಮೂಲಕ ಈ ಪದವಿಯನ್ನು ಗಳಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸೈದ್ಧಾಂತಿಕ ಬದ್ಧತೆ, ದೂರದರ್ಶಿತ್ವ ಮತ್ತು ಜನಪರ ಕಾಳಜಿಯ ರಾಹುಲ್ ಗಾಂಧಿಯವರು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಆಡಳಿತ ಪಕ್ಷಕ್ಕೆ ಸಿಂಹ ಸ್ವಪ್ನರಾಗಲಿದ್ದಾರೆ ಎಂದು ತಿಳಿಸಿದ್ದಾರೆ.