Categories: Home

ಲಿಟ್ಲ್ ಮಾಸ್ಟರ್ ಶಾಲೆಯಲ್ಲಿ ಮೂನ್ ಲೈಟ್ ಡಿನ್ನರ್ ಕಾರ್ಯಕ್ರಮ: ಬೆಳದಿಂಗಳಲ್ಲಿ ಅಮ್ಮನ ಕೈ ತುತ್ತು ಸವಿದು ಸಂಭ್ರಮಿಸಿದ ಪುಟಾಣಿಗಳು

ಅಮ್ಮನ ಕೈ ತುತ್ತಿನೊಂದಿಗೆ ಶಕ್ತಿ, ಸದ್ಗುಣ ಸದಾಚಾರ ಪಡೆದ ಮಕ್ಕಳು… ಕನಸಿನ ಸಾಕಾರ ರೂಪವಾದ ಮಗುವಿಗೆ ಮಮತೆಯಿಂದ ಕೈ ತುತ್ತು ನೀಡಿ ಧನ್ಯತೆ‌ ಮೆರೆದ ತಾಯಂದಿರು… ಈ ಸುಂದರ ಕ್ಷಣಗಳಿಗೆ ಸಾಕ್ಷಿಯಾಗಿದ್ದು ಕಂಟನಕುಂಟೆಯ ಲಿಟ್ಲ್ ಮಾಸ್ಟರ್ ಪಬ್ಲಿಕ್ ಶಾಲೆಯಲ್ಲಿ ನಡೆದ ‘ಬೆಳದಿಂಗಳ ಕೈತುತ್ತು ಭೋಜನ’ ಕಾರ್ಯಕ್ರಮ.

ಮಕ್ಕಳು-ಪೋಷಕರಿಗಾಗಿ ಏರ್ಪಡಿಸಿದ್ದ ಬೆಳದಿಂಗಳ ಕೈ ತುತ್ತು ಭೋಜನಾ ಕಾರ್ಯಕ್ರಮವು ಶಾಲೆಯಲ್ಲಿ ಸಂಭ್ರಮದ ಭಾವಲೋಕ‌ವನ್ನೇ ತೆರೆದಿಟ್ಟಿತು. ಸದಾ ಸಂಸಾರ, ವೃತ್ತಿಯ ಒತ್ತಡದಲ್ಲೇ ಕಳೆಯುವ ಪೋಷಕರು, ತಮ್ಮ ಮಕ್ಕಳೊಂದಿಗೆ ಆಡಿ ನಲಿದರು.

ಪೋಷಕರಿಗಾಗಿ ವರ್ಣರಂಜಿತ ರಂಗೋಲಿ ಸ್ಪರ್ಧೆ ಸಹ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಸುಮಾರು 50ಕ್ಕೂ ಹೆಚ್ಚು ಪೋಷಕರು ಭಾಗವಹಿಸಿದ್ದರು. ಖಾದ್ಯ ತಯಾರಿಕೆ ಸ್ಪರ್ಧೆಯಲ್ಲಿ ಸುಮಾರು 100ಕ್ಕೂ ಅಧಿಕ ಪೋಷಕರು ಭಾಗವಹಿಸಿ ವಿಧ ವಿಧವಾದ ರುಚಿಕರ, ಆರೋಗ್ಯಕರ ತಿಂಡಿ ತಿನಿಸು ತಯಾರಿಸಿದರು.

ಅಜ್ಜ-ಅಜ್ಜಿಯೊಂದಿಗೆ ಮಕ್ಕಳ ರ‌್ಯಾಂಪ್

ಮೊಮ್ಮಕ್ಕಳೊಂದಿಗೆ ಅಜ್ಜ-ಅಜ್ಜಿಯರ ರ‌್ಯಾಂಪ್ ವಾಕ್, ನೃತ್ಯ ಬಹಳ ಅಚ್ಚುಕಟ್ಟಾಗಿ ನೆರವೇರಿತು. ನಂತರ ವಿದ್ಯಾರ್ಥಿಗಳು ತಂದೆ-ತಾಯಿಯೊಂದಿಗೆ ನೃತ್ಯ ಪ್ರದರ್ಶನ ನೀಡಿದರು.

ತಾಯಿ ತನ್ನ ಮಗು ಊಟ ಮಾಡಲು ಹಠ ಮಾಡಿದಾಗ ಬೆಳದಿಂಗಳಲ್ಲಿ ಚಂದಮಾಮನನ್ನು ತೋರಿಸಿ ಊಟ ಮಾಡಿಸುತ್ತಾಳೆ. ಅದರ ನೆನಪಿಗಾಗಿ ಇಂದು ನಮ್ಮ ಶಾಲೆಯಲ್ಲಿ ಕೈ ತುತ್ತು ಭೋಜನ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.  ಇದರಿಂದ ತಾಯಿ ಮತ್ತು ಮಗುವಿನ ನಡುವಿನ ಸಂಬಂಧ ಮತ್ತಷ್ಟು ಆಪ್ಯಾಯಮಾನವಾಗಲಿದೆ ಎಂದು ಶಾಲೆಯ ಕಾರ್ಯದರ್ಶಿ ಕೆ.ಜಿ.ಶ್ರೀನಿವಾಸಮೂರ್ತಿ ಹೇಳಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪೋಷಕರು, ಪುಟಾಣಿಗಳಿಗೆ ತುಂಬು ಹೃದಯದ ಧನ್ಯವಾದ ತಿಳಿಸಿದರು.

ಲಿಟ್ಲ್‌ ಮಾಸ್ಟರ್‌ ಪಬ್ಲಿಕ್ ಶಾಲೆಯು ರಂಗೋಲಿ ಸ್ಪರ್ಧೆ, ಮೂನ್ ಲೈಟ್ ಡಿನ್ನರ್, ಕಪಲ್ ಡ್ಯಾನ್ಸ್ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಏರ್ಪಡಿಸಿ, ಪೋಷಕರು ಈ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಮಾಡಿರುವುದು ಸಂತಸದ ಸಂಗತಿ, ಪೋಷಕರಾದ ನಾವೂ ಸಹ ಉತ್ಸಾಹದಿಂದ ಎಲ್ಲಾ ಕಾರ್ಯಕ್ರಮಗಲ್ಲಿ ಭಾಗವಹಿಸಿ ನಮ್ಮ ಪ್ರತಿಭೆ ಹೊರಹಾಕಿದ್ದೇವೆ ಎಂದು ವಿದ್ಯಾರ್ಥಿಯೊಬ್ಬರ  ಪೋಷಕಿ ರಜನಿ ಹೇಳಿದರು.

ಅಡುಗೆ ತಯಾರಿಕೆ ಸ್ಪರ್ಧೆಯಲ್ಲಿ ಹಣ್ಣು-ಹಂಪಲು, ತರಕಾರಿ, ಕಾಳುಗಳನ್ನು ಬಳಸಿ ಪೌಷ್ಟಿಕಾಂಶಯುಕ್ತ, ಆರೋಗ್ಯಕರವಾದ ತಿಂಡಿ ತಿನಿಸುಗಳನ್ನು ಮಾಡಲಾಗಿತ್ತು.

ಇತ್ತೀಚಿಗೆ ಎಲ್ಲರೂ ಜಂಕ್ ಫುಢ್ ಗೆ ಮಾರುಹೋಗಿ ತಮ್ಮ ಆರೋಗ್ಯ ಹಾಳು ಮಾಡಿಕೊಂಡು ಆಸ್ಪತ್ರೆ ಸೇರುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಉತ್ತಮ ಆರೋಗ್ಯ ಜೀವನ ನಡೆಸಲು ತಾಜಾ ಹಣ್ಣು-ಹಂಪಲು, ತರಕಾರಿ, ಮೊಳಕೆ ಕಾಳುಗಳ ಪಾತ್ರ ಬಹಳ ಮುಖ್ಯ ಎಂಬ ಸಂದೇಶ ಈ ಕಾರ್ಯಕ್ರಮ ನಮಗೆ ಮನವರಿಕೆ ಮಾಡಿಕೊಟ್ಟಿತು ಎಂದು ಮಮತಾ ಚಂದ್ರಶೇಖರ್ ಹೇಳಿದರು.

ಶಾಲೆ ಎಂದರೆ ಕೇವಲ ಪಠ್ಯ ಪುಸ್ತಕದಲ್ಲಿರುವ ವಿಷಯ ಅರಿತು ಒಳ್ಳೆ ಅಂಕ ಪಡೆದು ಉನ್ನತ ದರ್ಜೆಯಲ್ಲಿ ತೇರ್ಗಡೆಯಾಗುವಂತೆ ಮಾಡುವುದಲ್ಲ, ಬದಲಿಗೆ ಪಠ್ಯದ ಜೊತೆ ಜೊತೆಯಲ್ಲಿ ಸಾಂಸ್ಕೃತಿಕ, ನೈತಿಕ, ಕ್ರೀಡಾ ಮನೋಭಾವ, ಮಾನವೀಯ ಮೌಲ್ಯ, ಕಲೆ, ಸಾಹಿತ್ಯ, ದೇಶ ಭಕ್ತಿ, ಸಂಬಂಧಗಳಿಗೆ ಬೆಲೆ ಕೊಡುವುದು ಸೇರಿದಂತೆ ಇತರೆ ಪಠ್ಯೇತರ ಚಟುವಟಿಕೆಗಳನ್ನು ಸಹ ಮಗುವಿಗೆ ಹೇಳಿಕೊಡುವುದು ಶಾಲೆಯ ಉದ್ದೇಶವಾಗಿರಬೇಕು. ಆಗ ಮಾತ್ರ ಮಗುವಿನ ಸರ್ವತೋಮುಖ ಬೆಳವಣಿಗೆಯಿಂದ ಪರಿಪಕ್ವವಾಗಿ, ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ರೂಪುಗೊಳ್ಳಲು ಸಾಧ್ಯ ಎಂದು ಶಾಲೆಯ ಕೋ ಆರ್ಡಿನೇಟರ್ ನಾಗರಾಣಿ ಅವರು ತಿಳಿಸಿದರು.

ರಂಗೋಲಿ ಸ್ಪರ್ಧೆ, ಖಾದ್ಯ ತಯಾರಿಕೆ ಸ್ಪರ್ಧೆ, ನೃತ್ಯ ಪ್ರದರ್ಶನದಲ್ಲಿ ಅತ್ಯುತ್ತಮವಾಗಿ ಭಾಗವಹಿಸಿ ತಮ್ಮ ಕಲೆಯನ್ನು ಪ್ರಚುರಪಡಿಸಿದವರಿಗೆ ಪ್ರಶಸ್ತಿ ನೀಡಿ ಹುರಿದುಂಬಿಸಲಾಯಿತು.

Ramesh Babu

Journalist

Recent Posts

ಯುವಕರು ನೈತಿಕ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು- ವಕೀಲ ಬಿ. ಸುರೇಶ್ ಗೌಡ

ಯುವಕರು ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ವೈಯಕ್ತಿಕ ಬೆಳವಣಿಗೆಗೆ ಮಾತ್ರವಲ್ಲದೆ, ಆರೋಗ್ಯಕರ ಮತ್ತು ಸಮೃದ್ಧ ಸಮಾಜದ ನಿರ್ಮಾಣಕ್ಕೂ ಅತ್ಯಗತ್ಯವಾಗಿದೆ ಎಂದು ಹೈಕೋರ್ಟ್…

3 hours ago

ಕದನ ವಿರಾಮ…., ಕೊನೆಗೆ ಗೆಲ್ಲುವುದು ಹಿಂಸೆಯಲ್ಲ ಅಹಿಂಸೆ

ಕದನ ವಿರಾಮ...... ಯುದ್ಧ ವಿರಾಮ ಘೋಷಣೆಯಾಗಿದೆ. ಸಾವಿರಾರು ಜನರ ಹತ್ಯೆಗಳ ನಂತರ, ಅಪಾರ ಪ್ರಮಾಣದ ಭೂಪ್ರದೇಶ, ನೈಸರ್ಗಿಕ ಸಂಪನ್ಮೂಲಗಳು, ತೈಲ…

3 hours ago

ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆಯಾಗದಂತೆ ಕ್ರಮ – ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ

ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜಿನಲ್ಲಿ ಯಾವ ಲೋಪಗಳು ಉಂಟಾಗದಂತೆ ಮುಂಜಾಗರೂಕತಾ ಕ್ರಮ ಕೈಗೊಳ್ಳುವ ಸಲುವಾಗಿ ರಾಜ್ಯದ ಎಲ್ಲ…

13 hours ago

14 ರಿಂದ 15 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ತಪ್ಪದೇ ಎಚ್.ಪಿ.ವಿ ಲಸಿಕೆ ಹಾಕಿಸಿ- ಡಿಸಿ ಅನುರಾಧ

ಗರ್ಭಕಂಠ ಕ್ಯಾನ್ಸರ್ ಬಾರದಂತೆ ತಡೆಯುವಲ್ಲಿ ಹ್ಯೂಮನ್ ಪ್ಯಾಪಿಲೋಮ ವೈರಸ್ (ಎಚ್.ಪಿ.ವಿ) ಲಸಿಕೆಯು ಅತ್ಯಂತ ಪರಿಣಾಮಕಾರಿಯಾಗಿದ್ದು 14 ರಿಂದ 15 ವರ್ಷದೊಳಗಿನ…

13 hours ago

ಕೃಷಿ ಹೊಂಡದಲ್ಲಿ ಈಜಲು ಹೋಗಿ 34 ವರ್ಷದ ವ್ಯಕ್ತಿ ಸಾವು

ಕೃಷಿ ಹೊಂಡದಲ್ಲಿ ಈಜಲು ಹೋಗಿ 34ವರ್ಷದ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಲಿಂಗಾಪುರ ಗ್ರಾಮದಲ್ಲಿ ಇಂದು…

14 hours ago

ನಾಳೆ (ಏ.9ಕ್ಕೆ) ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟ

ಮಾ.9ರ ಗುರುವಾರ ಮಧ್ಯಾಹ್ನ 3.00 ಗಂಟೆಗೆ 2026ರ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ…

17 hours ago