
ಹುಣಸೂರು ತಾಲೂಕು ಲಕ್ಷ್ಮಣ ತೀರ್ಥ ನದಿ ತೂಗುಸೇತುವೆ ಬಳಿ ಯುವತಿ ನೀರಿಗೆ ಬಿದ್ದು ಆ*ತ್ಮಹ*ತ್ಯೆಗೆ ಶರಣಾಗಿದ್ದಾಳೆ. ಹರವೆ ಗ್ರಾಮದ ನಿವಾಸಿ ನಂಜುಂಡಸ್ವಾಮಿ ಮತ್ತು ಅಂಬುಜ ರವರ ಪುತ್ರಿ ದೀಪಿಕಾ ಆತ್ಮಹತ್ಯೆಗೆ ಶರಣಾದ ಯುವತಿ.
ಈಕೆ ಜಯಲಕ್ಷ್ಮಿಪುರಂ ನಲ್ಲಿರುವ ವಿಶ್ವಕವಿ ಕುವೆಂಪು ಕಾಲೇಜಿನಲ್ಲಿ ದ್ವಿತೀಯ ಬಿಎ ವ್ಯಾಸಂಗ ಮಾಡುತ್ತಿದ್ದು ನನ್ನ ಆತ್ಮಹತ್ಯೆಗೆ ನಾನೆ ಕಾರಣ ಎಂದು ಬರೆದಿರುವ ಡೆತ್ ನೋಟ್ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಸಂಬಂಧ ಹುಣಸೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ…
ಹುಣಸೂರಿನ ಲಕ್ಷ್ಮಣತೀರ್ಥ ನದಿಯ ತೂಗು ಸೇತುವೆ ಬಳಿ ನೀರಿಗೆ ಬಿದ್ದು ಆತ್ಮಹತ್ಯೆಗೆ ಶರಣಾದ ಯುವತಿ ದೀಪಿಕಾ ಮೃತದೇಹ ಪತ್ತೆಯಾಗಿದೆ.ನಿನ್ನೆ ಡೆತ್ ನೋಟ್ ಬರೆದು ತುಂಬಿ ಹರಿಯುತ್ತಿರುವ ನದಿಗೆ ದೀಪಿಕಾ ಹಾರಿದ್ದಳು.ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್ ನೋಟ್ ಬರೆದು ನದಿಗೆ ಹಾರಿದ್ದಳು.ದೀಪಿಕಾ ಳಿಗಾಗಿ ಅಗ್ನಿಶಾಮಕ ಸಿಬ್ಬಂದಿ ನದಿಯಲ್ಲಿ ಶೋಧನಾ ಕಾರ್ಯ ನಡೆಸುತ್ತಿದ್ದ ವೇಳೆ ಆಕೆಯ ಮೃತದೇಹ ದೊರೆತಿದೆ.