ಲಂಡನ್‌ನಲ್ಲಿ ತನ್ನ ಮಾಜಿ ಗೆಳತಿಗೆ ಇರಿದ ಆರೋಪದ ಮೇಲೆ ಹೈದರಾಬಾದ್ ವ್ಯಕ್ತಿಗೆ 16 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಆಕೆಯನ್ನು ಇರಿದು ಹಾಕುವ ಮುನ್ನ ‘ಮನುಷ್ಯನನ್ನು ಚಾಕುವಿನಿಂದ ತಕ್ಷಣ ಕೊಲ್ಲುವುದು ಹೇಗೆ’, ಯುಕೆಯಲ್ಲಿ ವಿದೇಶಿಗರು ಕೊಲೆ ಮಾಡಿದರೆ ಏನಾಗುತ್ತದೆ’, ‘ಯಾರನ್ನಾದರೂ ಚಾಕುವಿನಿಂದ ಕೊಲ್ಲುವುದು ಎಷ್ಟು ಸುಲಭ’ ಮತ್ತು ‘ಚಾಕುವಿನಿಂದ ಯಾರನ್ನಾದರೂ ತಕ್ಷಣವೇ ಕೊಲ್ಲುವುದು ಹೇಗೆ’? ಎಂಬುದರ ಬಗ್ಗೆ ಗೂಗಲ್ ನಲ್ಲಿ ಹುಡುಕಾಟ ನಡೆಸಿದ್ದಾನೆ ಎನ್ನಲಾಗಿದೆ.
ಮಾರ್ಚ್ 5, 2022 ರಂದು, ಹೈದರಾಬಾದ್‌ನ 23 ವರ್ಷದ ಶ್ರೀರಾಮ್ ಅಂಬರಲಾ ಲಂಡನ್‌ನ ಹೈದರಾಬಾದ್ ವಾಲಾ ರೆಸ್ಟೋರೆಂಟ್‌ನಲ್ಲಿ ತನ್ನ ಮಾಜಿ ಗೆಳತಿ ಕೇರಳದ 23 ವರ್ಷದ ಸೋನಾ ಬಿಜುಗೆ ಇರಿದಿದ್ದಾನೆ.
ರೆಸ್ಟೊರೆಂಟ್‌ನಲ್ಲಿ ಅರೆಕಾಲಿಕ ಉದ್ಯೋಗಿಯಾಗಿರುವ ಸೋನಾ ಬಿಜು ಅವರು ಶ್ರೀರಾಮ್ ಅವರನ್ನು ಇತರ ಗ್ರಾಹಕರಂತೆ ಉಪಚರಿಸಿದ್ದಾರೆ. ಈ ನಡುವೆ ಚಾಕುವಿನಿಂದ ಇರಿದಿದ್ದಾನೆ. ಚಾಕುವಿನಿಂದ ಇರಿದ ತಕ್ಷಣ ಆಕೆ ತೀವ್ರ ರಕ್ತ ಸ್ರಾವದಿಂದ ಸ್ಥಳದಲ್ಲೇ ಕುಸಿದು ಬೀಳುತ್ತಾಳೆ. ನಂತರ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಿದ್ದಾರೆ.