ವೃತ್ತಿಯಲ್ಲಿ ವೈದ್ಯರಾಗಿರುವ ತೆಲಂಗಾಣದ ಅಚಂಪೇಟ್ ಕ್ಷೇತ್ರದ ಶಾಸಕ ಡಾ.ವಂಶಿಕೃಷ್ಣ ಅವರು ವೈದ್ಯರ ತಂಡದೊಂದಿಗೆ ಅಚಂಪೇಟ್ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಯೊಬ್ಬರಿಗೆ 10 ಕೆಜಿ ತೂಕದ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದ್ದಾರೆ.
ಬಳಮೂರು ಮಂಡಲದ ಕೊಂಡನಾಗುಳ ಗ್ರಾಮದ ಅನಿತಾ ಎಂಬ ರೋಗಿ ಹೊಟ್ಟೆಯಲ್ಲಿ ಗಡ್ಡೆಯಿಂದ ಬಳಲುತ್ತಿದ್ದರು. ಶಸ್ತ್ರಚಿಕಿತ್ಸೆ ನಡೆಸಿ ಗಡ್ಡೆಯನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ.
2017 ರಲ್ಲಿ ನಾಗರ್‌ಕರ್ನೂಲ್ ಜಿಲ್ಲೆಯ ಸಿಬಿಎಂ ಆಸ್ಪತ್ರೆಯಲ್ಲಿ ಡಾ.ವಂಶಿ ಕೃಷ್ಣ ಮಹಿಳೆಯೊಬ್ಬರ ಹೊಟ್ಟೆಯಿಂದ 4.7 ಕಿಲೋಗ್ರಾಂಗಳಷ್ಟು ಗಡ್ಡೆಯನ್ನು ತೆಗೆದಿದ್ದರು.