ತನ್ನ ಹುಟ್ಟುಹಬ್ಬದ ಪ್ರಯುಕ್ತ ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಣ್ಣು ಹಂಪಲು ನೀಡುವ ಮೂಲಕ ಸರಳವಾಗಿ ಆಚರಿಸಿಕೊಂಡು ಇತರರಿಗೆ ಮಾದರಿಯಾದ 24 ವರ್ಷದ ಯುವಕ ಹೇಮಂತ್ ರಾಜ್.
ಪ್ರಸ್ತುತ ದಿನಗಳಲ್ಲಿ ಯುವಕರು ತಮ್ಮ ಹುಟ್ಟುಹಬ್ಬದಂದು ದುಂದು ವೆಚ್ಚ ಮಾಡಿ ಬಹಳ ವಿಜೃಂಭಣೆಯಿಂದ ಬರ್ತಡೆ ಆಚರಿಸಿಕೊಳ್ಳುವುದುಂಟು. ಆದರೆ ಯುವಕ ಹೇಮಂತ್ ರಾಜ್ ಸಮಾಜ ಸೇವೆ ಮಾಡುವ ಮೂಲಕ ವಿಭಿನ್ನವಾಗಿ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ.
ರೋಗಿಗಳಿಗೆ ಹಣ್ಣುಹಂಪಲು ವಿತರಿಸಿ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ಬೆ.ನಗರದ ವಿದ್ಯಾರ್ಥಿ ಘಟಕ ಪ್ರಧಾನ ಕಾರ್ಯದರ್ಶಿ ಹೇಮಂತ್ ರಾಜ್, ಸಮಾಜಮುಖಿ ಕೆಲಸ ಮಾಡುವ ಉದ್ದೇಶದಿಂದ ಜನರ ಕಷ್ಟಗಳನ್ನು ಅರಿತು ಇಲ್ಲದವರ ಕಷ್ಟಗಳಿಗೆ ನೆರವಾಗಬೇಕು. ಆದ್ದರಿಂದ ನನ್ನ ಹುಟ್ಟುಹಬ್ಬ ದಿನದಂದು ಸಾರ್ವಜನಿಕ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಣ್ಣು ಹಂಪಲು ನೀಡಿ ಅರ್ಥಪೂರ್ಣವಾಗಿ ಬರ್ತಡೆ ಆಚರಿಸಿಕೊಳ್ಳಲಾಯಿತು. ಮುಂದೆಯೂ ಇದೇರೀತಿ ಬಡವರಿಗೆ ನೆರವಾಗುವ ಮೂಲಕ ಹುಟ್ಟಿದ ದಿನವನ್ನು ಆಚರಿಸಿಕೊಳ್ಳುವೆ ಎಂದರು.