ರೋಗಿಗಳಿಗೆ ಔಷಧಿಗಾಗಿ ಹೊರಗಡೆ ಚೀಟಿ ಕಳಸಿದರೆ ಕ್ರಮ-ಶಾಸಕ ಕೊತ್ತೂರು ಮಂಜುನಾಥ್

ಕೋಲಾರ: ಸಾರ್ವಜನಿಕ ಆಸ್ಪತ್ರೆಗೆ ಬರುವ ರೋಗಿಗಳಿಗೆ ಅಗತ್ಯ ಚಿಕಿತ್ಸೆ ಒದಗಿಸುವುದರ ಜೊತೆಗೆ‌ ಅಗತ್ಯವಾದ ಔಷಧಿಗಳ ವಿತರಣೆಗೆ ಕ್ರಮ ಕೈಗೊಳ್ಳಬೇಕು. ಔಷಧಿಗಳಿಗೆ ರೋಗಿಗಳಿಗೆ ಹೊರಗೆ ತೆಗೆದುಕೊಳ್ಳಿ ಎಂದು ಚೀಟಿ ಬರೆದು ಕೊಡುವುದು ಹಣ ಕೇಳುವುದು ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮಕ್ಕೆ ಶಿಫಾರಸು ಮಾಡಲಾಗುತ್ತದೆ ಎಂದು ವೈದ್ಯರಿಗೆ ಶಾಸಕ ಕೊತ್ತೂರು ಮಂಜುನಾಥ್ ಸೂಚನೆ ನೀಡಿದರು.

ನಗರದ ಕ್ಲಾಕ್ ಟವರ್ ಬಳಿಯಿರುವ ದರ್ಗಾ ಮೊಹಲ್ ಆಸ್ಪತ್ರೆಗೆ ಭೇಟಿ ಕುಂದುಕೊರತೆಗಳನ್ನು ಆಲಿಸಿದ ಮಾತನಾಡಿದ ಅವರು, ಸರ್ಕಾರಿ ಆಸ್ಪತ್ರೆಗಳ ಬಗ್ಗೆ ನಂಬಿಕೆ ಬರುವಂತೆ ನಿಗಾ ವಹಿಸಬೇಕು ಈ ಆಸ್ಪತ್ರೆಯಲ್ಲಿ ಜನರ ಮೆಚ್ಚುಗೆ ಇದೆ ಆದರೆ ದುರುಪಯೋಗವಾಗಬಾರದು ಸರ್ಕಾರಿ ಆಸ್ಪತ್ರೆಯಲ್ಲಿನ ಚಿಕಿತ್ಸೆ ಉಚಿತ ಯಾರು ಕೂಡ ಹಣ ಕೊಡಬಾರದು ತೆಗೆದುಕೊಳ್ಳುವುದು ತಪ್ಪು ಅಷ್ಟೇ ಅಲ್ಲ ಲಂಚ ಕೊಡುವುದು ದೊಡ್ಡ ತಪ್ಪು ಆಸ್ಪತ್ರೆಯಲ್ಲಿ ಇಲ್ಲದೇ ಇರುವ ಔಷಧಗಳನ್ನು ಖರೀದಿ ಮಾಡಿ‌ ನಿಮಗೆ ನೀಡಬೇಕು ಎಂದರು

ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳನ್ನು ಎಂ.ಆರ್. ಸ್ಕ್ಯಾನ್ ಮತ್ತು ಸಿಟಿ ಸ್ಕ್ಯಾನ್‌ಗೆ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸದಂತೆ ಎಚ್ಚರ ವಹಿಸಬೇಕು ನಮ್ಮಲ್ಲಿರುವ ಎಸ್.ಎನ್ ಆರ್ ಜಿಲ್ಲಾ ಆಸ್ಪತ್ರೆಗೆ ಕಳಸಿ ಮುಂದಿನ ದಿನಗಳಲ್ಲಿ ಇಲ್ಲಿಯೇ ಅ ವ್ಯವಸ್ಥೆ ಮಾಡಲಾಗುತ್ತದೆ ರೋಗಿಗಳಿಗೆ ವೈದ್ಯರು, ಸಿಬ್ಬಂದಿ ಲಭ್ಯವಿರುವಂತೆ ನೋಡಿಕೊಳ್ಳಿ ಆಸ್ಪತ್ರೆಯಲ್ಲಿ ಕೆಟ್ಟು ಹೋಗಿರುವ ಲಿಫ್ಟ್ ಅನ್ನು ನಾಳೆಯೇ ದುರಸ್ತಿ ಮಾಡಿಸಿ ಆದಷ್ಟು ಬೇಗ ರಾಂಫ್ ವ್ಯವಸ್ಥೆ ಸಹ ಮಾಡಲಾಗುತ್ತದೆ ಆಸ್ಪತ್ರೆಯಲ್ಲಿ ನೀರಿಗೆ ಅಭಾವವಿದ್ದು ಅವಶ್ಯಕತೆ ಇರುವ ಬೋರ್ ವೆಲ್ ದುರಸ್ತಿ ಸೇರಿದಂತೆ ಕ್ರಮ ವಹಿಸಲು ನಗರಸಭೆ ಅಧಿಕಾರಿಗಳು ನೋಡಿಕೊಳ್ಳಲು ಸೂಚನೆ ನೀಡಿದರು‌

ಈ ಸಂದರ್ಭದಲ್ಲಿ ತಾಲೂಕು ಆರೋಗ್ಯ ಅಧಿಕಾರಿ ನಾರಾಯಣಸ್ವಾಮಿ ಮಾತನಾಡಿ ಆಸ್ಪತ್ರೆಯಲ್ಲಿ ಲಿಫ್ಟ್, ಮೆಡಿಕಲ್ ಗ್ಯಾಸ್ ಲೈಫ್ ಲೈನ್, ನೀರು ಸೇರಿದಂತೆ ಸೌಲಭ್ಯಗಳ ಬಗ್ಗೆ ಶಾಸಕರಿಗೆ ಮನವರಿಕೆ ಮಾಡಿದರು ಕೂಡಲೇ ಒದಗಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿ ಅವಶ್ಯಕತೆ ಇರುವ ಬಗ್ಗೆ ಗಮನಕ್ಕೆ ತನ್ನಿ ಸರ್ಕಾರದಿಂದ ಅಥವಾ ಸಿಎಸ್ಆರ್ ಅನುದಾನದಿಂದ ಕೊಡಿಸುವ ಕೆಲಸ ಮಾಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಎಲ್ ಅನಿಲ್ ಕುಮಾರ್, ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ರಮೇಶ್, ಉಪಾಧ್ಯಕ್ಷೆ ಸಂಗೀತಾ, ಜಿಲ್ಲಾ ಆರೋಗ್ಯಾಧಿಕಾರಿ ಶ್ರೀನಿವಾಸ್, ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ಸೇರಿದಂತೆ ನಗರಸಭೆ ಸದಸ್ಯರು ಅಧಿಕಾರಿಗಳು ಕಾಂಗ್ರೆಸ್ ಮುಖಂಡರು ಇದ್ದರು

Leave a Reply

Your email address will not be published. Required fields are marked *

error: Content is protected !!