ರೈಲ್ವೆ ಸ್ಟೇಷನ್ ವೃತ್ತಕ್ಕೆ ಸಿಗ್ನಲ್ ದೀಪ, ಸಿಸಿಟಿವಿಗೆ ಚಾಲನೆ: ದೊಡ್ಡಬಳ್ಳಾಪುರಕ್ಕೆ ಟ್ರಾಫಿಕ್ ಪೊಲೀಸ್ ಸ್ಟೇಷನ್ ಗೆ ಪ್ರಸ್ತಾವನೆ- ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ್

ದೊಡ್ಡಬಳ್ಳಾಪುರ ಮತ್ತು ಚಂದಾಪುರಕ್ಕೆ ಶೀಘ್ರವಾಗಿ ಟ್ರಾಫಿಲ್ ಪೊಲೀಸ್ ಸ್ಟೇಷನ್ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ್ ತಿಳಿಸಿದರು.

ನಗರದ ರೈಲ್ವೆ ನಿಲ್ದಾಣದಲ್ಲಿ ಸೋಮವಾರ ಅಸ್ಟಿಮೋ ಫೈ ಪ್ರೈವೆಟ್ ಲಿಮಿಟೆಡ್ ಕಂಪನಿಯ ಸಿಎಸ್ಆರ್ ನಿಧಿಯಡಿ ಪೊಲೀಸ್ ಇಲಾಖೆ ವತಿಯಿಂದ ಸಿಗ್ನಲ್ ದೀಪ ಮತ್ತು ಆತ್ಯಾಧುನಿಕ ಸಿಸಿಟಿವಿಗೆ ಚಾಲನೆ ನೀಡಿ, ಬಳಿಕ ಅವರು ಮಾತನಾಡಿದರು.

ಸಿಗ್ನಲ್ ದೀಪ ಮತ್ತು ಸಿಸಿಟಿವಿಯ ಅಳವಡಿಕೆಯಿಂದ ಟ್ರಾಫಿಕ್ ನಿರ್ವಹಣೆಗೆ ಅನುಕೂಲವಾಗುತ್ತದೆ. ಈ ಭಾಗದಲ್ಲಿ ಅಪಘಾತಗಳು, ಹಿಟ್ ಅಂಡ್ ರನ್ ಸಂಖ್ಯೆ ಅಧಿಕವಾಗಿತ್ತು ಈ ಸಿಸಿಟಿವಿಗಳಿಂದ ಅಪಘಾತ ಪ್ರಕರಣಗಳ ಪತ್ತೆಗೂ ಸಹಕರಿಯಾಗಲಿದೆ. ಮುಂದಿನ ದಿನಗಳಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಪ್ರಮುಖ ವೃತ್ತ, ಪ್ರದೇಶಗಳಲ್ಲಿ ಸಿಸಿಟಿವಿ ಅಳವಡಿಕೆಗೆ ಕ್ರಮವಹಿಸಲಾಗಿದೆ. ಎಂದರು.

ನಗರಸಭಾ ಉಪಾಧ್ಯಕ್ಷ ಮಲ್ಲೇಶ್ ಮಾತನಾಡಿ ಇಲ್ಲಿನ ಜನರ ಬೇಡಿಕೆ ಮತ್ತು ಪೊಲೀಸ್ ಇಲಾಖೆಯ ಸಹಭಾಗಿತ್ವದಲ್ಲಿ ಉತ್ತಮವಾಗಿ ನಿರ್ವಹಣೆ ಮಾಡಲಾಗುವುದು ಎಂದರು.

ಡಿವೈಎಸ್ಪಿ ಪಾಂಡುರಂಗ, ನಗರಸಭೆ ಅಧ್ಯಕ್ಷೆ ಸುಮಿತ್ರಾ, ಉಪಾಧ್ಯಕ್ಷ ಮಲ್ಲೇಶ್, ಅಸ್ಟಿಮೋ ಫೈ ಪ್ರೈವೆಟ್ ಲಿಮಿಟೆಡ್ ಕಂಪನಿಯ ಪ್ಲಾಂಟ್ ಜನರಲ್ ವಿನಾಯಕ ಹೆಗಡೆ, ಸಿನಿಯರ್ ಮ್ಯಾನೇಜರ್ ಪ್ರಕಾಶ್, ಮ್ಯಾನೇಜರ್ ಪ್ರದೀಪ, ಎಚ್.ಆರ್ ಮನೋಹರ್, ಇನ್ಸ್ಪೆಕ್ಟರ್ ಗಳಾದ ಅಮರೇಶ್ ಗೌಡ, ಕಲ್ಲಪ್ಪ ಇದ್ದರು.

Ramesh Babu

Journalist

Recent Posts

111.355 ಕೆ.ಜಿ ಗಾಂಜಾ ನಾಶ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅಬಕಾರಿ ಇಲಾಖಾ ವತಿಯಿಂದ ವಿವಿಧ 47 ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾದ 111.355 ಕೆ.ಜಿ ಗಾಂಜಾವನ್ನು ಬೆಂಗಳೂರು ಗ್ರಾಮಾಂತರ…

9 hours ago

ಏ.12ಕ್ಕೆ ವಸತಿ ಶಾಲೆಗಳ 6ನೇ ತರಗತಿ ಪ್ರವೇಶ ಪರೀಕ್ಷೆ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ವಿವಿಧ ವಸತಿ ಶಾಲೆಗಳಲ್ಲಿ 2026-27ನೇ ಸಾಲಿನ 6ನೇ ತರಗತಿ ಪ್ರವೇಶಕ್ಕಾಗಿ ನಡೆಸಲಾಗುವ ರಾಜ್ಯಮಟ್ಟದ ಸಾಮಾನ್ಯ…

9 hours ago

ದೊಡ್ಡಬಳ್ಳಾಪುರದಲ್ಲಿ ಜಿಲ್ಲಾಸ್ಪತ್ರೆ ಪ್ರಾರಂಭಕ್ಕೆ ಕ್ರಮಕೈಗೊಳ್ಳಲು ಶಾಸಕ ಧೀರಜ್ ಮುನಿರಾಜ್ ಮನವಿ: ಕ್ರಮ ಕೈಗೊಳ್ಳುವ ಭರವಸೆ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ದೊಡ್ಡಬಳ್ಳಾಪುರದಲ್ಲಿ ಈ ಮೊದಲೇ ಅನುಮೋದನೆಗೊಂಡ ಜಿಲ್ಲಾಸ್ಪತ್ರೆಗೆ ಗುದ್ದಲಿಪೂಜೆ ಮಾಡಿ 2 ವರ್ಷವಾಗಿದೆ. ಈ ಬಾರಿಯಾದರೂ ಅನುದಾನ ನೀಡಿ ಜಿಲ್ಲಾಸ್ಪತ್ರೆ ಪ್ರಾರಂಭಿಸಲು…

10 hours ago

ಕೋಟಿ ವರದಕ್ಷಿಣೆ, ಕಿಯಾ ಕಾರು ಕೊಟ್ಟರು, ಹೆಂಡತಿಗೆ ಗಂಡ ಕಿರುಕುಳ ಆರೋಪ: ಗಂಡನ ವಿರುದ್ಧ ಹೆಂಡತಿ ದೂರು

ಕೋಟಿ ವರದಕ್ಷಿಣೆ, ಕಿಯಾ ಕಾರು ಕೊಟ್ಟರು, ಹೆಂಡತಿಗೆ ಕಿರುಕುಳ ನೀಡುತ್ತಿದ್ದ ಈ ಹಿನ್ನೆಲೆ ಗಂಡನ ವಿರುದ್ಧ ಹೆಂಡತಿ ದೂರು ನೀಡಿದ್ದಾರೆ...…

12 hours ago

ಸಂಕಷ್ಟದಿಂದ ಸುಸ್ಥಿತಿಗೆ – ವೈದ್ಯಕೀಯದ ಅದ್ಭುತ ಸಾಧನೆ

ಬೆಂಗಳೂರು, ವೈಟ್‌ಫೀಲ್ಡ್ : ಒಂದೂವರೆ ವರ್ಷಕ್ಕೂ ಹೆಚ್ಚು ಕಾಲ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದ ಪಶ್ಚಿಮ ಬಂಗಾಳದ 26 ವರ್ಷದ ಯುವಕನಿಗೆ…

13 hours ago

ಅಪಘಾತ: ಮಹಿಳೆ ಬಲಿ ಪ್ರಕರಣ: ಡಿಕ್ಕಿ ಹೊಡೆದ ವಾಹನ, ಡ್ರೈವರ್ ಹಾಗೂ ಮೃತಳ ಗುರುತು ಪತ್ತೆ

ದೊಡ್ಡಬಳ್ಳಾಪುರ ತಾಲೂಕಿನ ಹಮಾಮ್ ಗೇಟ್(ಶಿವಪುರ ಗೇಟ್) ಬಳಿ ಇಂದು ರಾತ್ರಿ ಸುಮಾರು 9:30ರಲ್ಲಿ ದಾರಿಯಲ್ಲಿದ್ದ ಮಹಿಳೆಗೆ ಕೋಳಿ ಸಾಗಿಸುವ ಐಷರ್…

1 day ago