ರೈಲ್ವೆ ಕೋಚ್ ಕಾರ್ಖಾನೆ ಸ್ಥಾಪನೆಗೆ ಒತ್ತಾಯಿಸಿ ರೈತ ಸಂಘದಿಂದ ಕುಮಾರಸ್ವಾಮಿಗೆ ಮನವಿ

ಕೋಲಾರ: ಸ್ಥಗಿತಗೊಂಡಿರುವ ಜಿಲ್ಲೆಯ ರೈಲ್ವೆ ಕೋಚ್ ಕಾರ್ಖಾನೆಗೆ ಮರುಜೀವ ಕೊಟ್ಟು, ಸ್ಥಳೀಯ ಕಾರ್ಖಾನೆಗಳನ್ನು ರೈತ ಮಕ್ಕಗಳಿಗೆ ಉದ್ಯೋಗ ನೀಡುವ ಕಾನೂನು ಪ್ರಭಲಗೊಳಿಸಬೇಕೆಂದು ರೈತ ಸಂಘದಿಂದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.

ಸುಮಾರು ೧೫ ವರ್ಷಗಳ ಹಿಂದೆ ಕೇಂದ್ರ ಸಚಿವರಾಗಿದ್ದ ಕೆ.ಹೆಚ್.ಮುನಿಯಪ್ಪ ರವರ ಅವಧಿಯಲ್ಲಿ ಶ್ರೀನಿವಾಸಪುರ ವ್ಯಾಪ್ತಿಯಲ್ಲಿ ಶಂಕುಸ್ಥಾಪನೆಗೊಂಡಿರುವ ರೈಲ್ವೆ ಕೋಚ್ ಕಾರ್ಖಾನೆಗೆ ಪೂಜೆಗೆ ಮಾತ್ರ ಸೀಮಿತವಾಗಿ ಇದುವರೆವಿಗೂ ಯಾವುದೇ ಕಾಮಗಾರಿ ಮಾಡದೆ ನಿರ್ಲಕ್ಷೆ ಮಾಡುತ್ತಿರುವ ಕಾರ್ಖಾನೆಗೆ ಕೇಂದ್ರ ಸಚಿವರಾದ ತಾವುಗಳು ಮರು ಜೀವ ಕೊಟ್ಟು ಸ್ಥಳೀಯರಿಗೆ ಉದ್ಯೋಗದ ಅವಕಾಶ ನೀಡಬೇಕೆಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮನವಿ ಮೂಲಕ ಒತ್ತಾಯಿಸಿದರು.

ಅರಣ್ಯ ಅಧಿಕಾರಿಗಳು ಬಡವರ ಭೂ ಒತ್ತುವರಿಯನ್ನು ತೆರವುಗೊಳಿಸಿ ಬಲಾಡ್ಯರು ರಾಜಕೀಯ ದುರಿಣರು ಮಾಜಿ ಸಭಾಪತಿಗಳಾದ ಕೆ.ಎನ್.ರಮೇಶ್ ಕುಮಾರ್ ರವರು ಒತ್ತುವರಿ ಮಾಡಿಕೊಂಡಿರುವ ೬೫ ಎಕರೆ ಅರಣ್ಯ ಭೂಮಿಯನ್ನು ತೆರವುಗೊಳಿಸಲು ಕೇಂದ್ರ ಸರ್ಕಾರದಿಂದ ಸೂಚನೆ ಮಾಡಿದ್ದರೂ ತಾಂತ್ರಿಕ ದೋಷದ ನೆಪದಲ್ಲಿ ಕಂದಾಯ ಸರ್ವೆ ಅಧಿಕಾರಿಗಳು ರೈತ ವಿರೋಧಿ ದೋರಣೆ ಅನುಸರಿಸುತ್ತಿದ್ದಾರೆ. ಕೂಡಲೇ ಅರಣ್ಯ ಸಚಿವರ ಜೊತೆ ಮಾತನಾಡಿ ಮಾಜಿ ಶಾಸಕರ ಅರಣ್ಯ ಭೂಮಿಯನ್ನು ತೆರವುಗೊಳಿಸಬೇಕು. ಇಲ್ಲವೆ ಒತ್ತುವರಿ ಮಾಡಿಕೊಂಡಿರುವ ಬಡವರ ಭೂಮಿ ಹಿಂದಿರುಗಿಸಲು ಅರಣ್ಯ ಅಧಿಕಾರಿಗಳಿಗೆ ಸೂಚನೆ ಮಾಡಬೇಕೆಂದು ಒತ್ತಾಯಿಸಿದರು.

ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ ಮಾತನಾಡಿ ಜಿಲ್ಲೆಯ ಬಿ.ಇ.ಎಂ.ಎಲ್. ಕಾರ್ಖಾನೆಯಲ್ಲಿ ಹತ್ತಾರು ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ದುಡಿಯುತ್ತಿರುವ ಕಾರ್ಮಿಕರನ್ನು ಖಾಯಂಗೊಳಿಸಲು ಆಡಳಿತ ಮಂಡಳಿ ವಿಫಲವಾಗಿದೆ. ಗುತ್ತಿಗೆ ಕಾರ್ಮಿಕರನ್ನು ಖಾಯಂ ಗೊಳಿಸುವ ಜೊತೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ಒತ್ತಾಯಿಸಿದರು.

ಜಿಲ್ಲಾದ್ಯಂತ ಕೈಗಾರಿಕಾ ಅಭಿವೃದ್ದಿಗೆ ಭೂಮಿ ಕಳೆದುಕೊಂಡಿರುವ ರೈತ ಮಕ್ಕಳಿಗೆ ಉದ್ಯೋಗ ನೀಡುತ್ತಿಲ್ಲ. ಸ್ಥಳೀಯರ ಉದ್ಯೋಗವನ್ನು ಹೊರರಾಜ್ಯದ ಕಾರ್ಮಿಕರಿಗೆ ಮಾರಾಟಕ್ಕಿಟ್ಟಿದ್ದಾರೆ. ಸ್ಥಳೀಯವಾಗಿರುವ ರೈತ ಮಕ್ಕಳು ಪದವಿಧರರು ಉದ್ಯೋಗಕ್ಕಾಗಿ ಬೆಂಗಳೂರು ಕಡೆ ಮುಖಾ ಮಾಡಬೇಕಾದ ಪರಿಸ್ಥಿತಿ ಇದೆ. ಕೂಡಲೇ ಕೇಂದ್ರ ಸರ್ಕಾರ ಸ್ಥಳೀಯ ರೈತ ಮಕ್ಕಳಿಗೆ ಉದ್ಯೋಗ ನೀಡಲು ಕಾನೂನು ರಚನೆ ಮಾಡಬೇಕೆಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ರವರು ರಮೇಶ್ ಕುಮಾರ್ ರವರ ಅರಣ್ಯ ಭೂ ಒತ್ತುವರಿ ಬಗ್ಗೆ ಈಗಾಗಲೇ ಅರಣ್ಯ ಸಚಿವರ ಬಗ್ಗೆ ಚರ್ಚೆ ಮಾಡಿದ್ದೇನೆ. ಜೊತೆಗೆ ರೈಲ್ವೆ ಕೋಚ್ ಕಾರ್ಖಾನೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ವರದಿ ತರಿಸಿಕೊಂಡು ಕಾರ್ಖಾನೆ ಸ್ಥಾಪನೆ ಮಾಡುವ ಭರವಸೆ ನೀಡುವ ಭರವಸೆಯನ್ನು ನೀಡಿದರು.

ಮನವಿ ನೀಡುವಾಗ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ತಾ.ಅದ್ಯಕ್ಷ ಮೂರಂಡಹಳ್ಳಿ ಶಿವಾರಡ್ಡಿ, ತರ‍್ನಹಳ್ಳಿ ಆಂಜಿನಪ್ಪ, ಪುತ್ತೇರಿ ರಾಜು, ಮಂಗಸಂದ್ರ ತಿಮ್ಮಣ್ಣ ಮುಂತಾದವರು ಇದ್ದರು.

Leave a Reply

Your email address will not be published. Required fields are marked *