ರೈಲ್ವೆ ಹಳಿಗಳ ಮೇಲೆ ದುಷ್ಕರ್ಮಿಗಳು ಸೈಜ್ ಕಲ್ಲು ಇಟ್ಟಿದ್ದರಿಂದ ರೈಲಿನ ಮುಂಭಾಗ ಹಾನಿಯಾಗಿದೆ, ಸ್ಥಳಕ್ಕೆ ರೈಲ್ವೇ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ದೊಡ್ಡಬಳ್ಳಾಪುರ ರೈಲ್ವೆ ಸ್ಟೇಷನ್ ಮತ್ತು ವಡ್ಡರಹಳ್ಳಿ ರೈಲ್ವೆ ಸ್ಟೇಷನ್ ನಡುವಿನ ನಂದಿ ಮೋರಿ ಬಳಿ ಘಟನೆ ನಡೆದಿದೆ, ಕಳೆದ ಶನಿವಾರ ಸಂಜೆ 6 ಗಂಟೆ ಸಮಯದಲ್ಲಿ ದುಷ್ಕರ್ಮಿಗಳು ರೈಲ್ವೆ ಹಳಿ ಮೇಲೆ ಸೈಜ್ ಕಲ್ಲು ಇಟ್ಟಿದ್ದಾರೆ, ಇದೇ ಮಾರ್ಗದಲ್ಲಿ ಬಂದ ರೈಲಿಗೆ ಸೈಜ್ ಕಲ್ಲು ತಾಕಿದೆ, ಚಾಲಕ ರೈಲನ್ನು ನಿಲ್ಲಿಸಿ ನೋಡಿದ್ದಾಗ ಕೆಳಗಡೆ ಸೈಜ್ ಕಲ್ಲು ಪತ್ತೆಯಾಗಿದೆ, ಹಳಿಯ ಮೇಲಿದ್ದ ಸೈಜ್ ಕಲ್ಲು ಹೊರ ಹಾಕಿ ರೈಲು ಚಾಲನೆ ಮಾಡಿದ್ದಾನೆ ಚಾಲಕ.
ಸೈಜ್ ಕಲ್ಲಿನಿಂದ ರೈಲಿನ ಮುಂಭಾಗದಲ್ಲಿ ಸಣ್ಣ ಪ್ರಮಾಣದಲ್ಲಿ ಹಾನಿಯಾಗಿದೆ, ಘಟನೆ ಗಂಭೀರತೆ ಅರಿತ ರೈಲ್ವೇ ಪೊಲೀಸ್ ವರಿಷ್ಠಾಧಿಕಾರಿ ಡಾ.ಸೌಮ್ಯಲತಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು, ಯಾವ ಕಾರಣಕ್ಕೆ ದುಷ್ಕರ್ಮಿಗಳು ಕಲ್ಲನ್ನು ಇಟ್ಟಿದ್ದಾರೆಂಬ ಮಾಹಿತಿ ಇಲ್ಲ, ಘಟನಾ ಸ್ಥಳದ ಸುತ್ತಮುತ್ತ ಕುಡುಕರು ಎಣ್ಣೆ ಪಾರ್ಟಿ ಮಾಡುತ್ತಾರೆ, ಕುಡುಕರೇ ಸೈಜ್ ಕಲ್ಲು ಇಟ್ಟಿರುವ ಸಂಶಯ ವ್ಯಕ್ತವಾಗಿದೆ. ಘಟನೆಯಿಂದ ಎಚ್ಚೆತ್ತ ರೈಲ್ವೇ ಪೊಲೀಸರು ಈ ಮಾರ್ಗದಲ್ಲಿ ಕಾವಲು ಕಾಯವು ಗ್ಯಾಂಗ್ ಮ್ಯಾನ್ ಗಳ ಸಂಖ್ಯೆಯನ್ನ ಹೆಚ್ಚಿಸಿದ್ದಾರೆ.