ಹಳಿ ದಾಟುವ ವೇಳೆ ಗೂಡ್ಸ್ ರೈಲಿಗೆ ಸಿಲುಕಿದ ಮಹಿಳೆ. ಗೂಡ್ಸ್ ರೈಲಿನ ಭೋಗಿಗಳು ಸಂಪೂರ್ಣವಾಗಿ ಮಹಿಳೆ ಮೇಲೆ ಹಾದು ಹೋಗಿವೆ ಆದರೂ ಯಾವುದೇ ಪ್ರಾಣಾಪಯವಿಲ್ಲದೇ ಬದುಕುಳಿದು ರೈಲು ಹೋದ ಮೇಲೆ ಹಳಿಯಿಂದ ಎದ್ದು ಬಂದ ಮಹಿಳೆ.
ನಗರದ ಹೊರವಲಯದ ರಾಜಾನುಕುಂಟೆ ರೈಲ್ವೆ ನಿಲ್ದಾಣ ಬಳಿ ಘಟನೆ ನಡೆದಿದೆ. ಕಣ್ಣು, ಕಿವಿ ಮುಚ್ಚಿಕೊಂಡು ಮಲಗಿದ್ದ ಮಹಿಳೆ. ಅದೃಷ್ಟ ವಷಾತ್ ಪ್ರಾಣಾಪಯದಿಂದ ಪಾರಾಗಿದ್ದಾರೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.