ದೊಡ್ಡಬಳ್ಳಾಪುರ ಮತ್ತು ವಡ್ಡರಹಳ್ಳಿ ರೈಲು ನಿಲ್ದಾಣಗಳ ಮಾರ್ಗ ಮಧ್ಯೆ ಅಪರಿಚಿತ ವ್ಯಕ್ತಿಯೋರ್ವ ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಹೆಸರು, ವಿಳಾಸ ತಿಳಿದು ಬಂದಿರುವುದಿಲ್ಲ. ವಯಸ್ಸು 25 ರಿಂದ 30 ವರ್ಷ ಆಗಿರಬಹುದು ಎಂದು ಅಂದಾಜಿಸಲಾಗಿದೆ.
ಚಹರೆ: ಸುಮಾರು 172 ಸೆಂ.ಮೀ ಎತ್ತರ, ಸಾಧಾರಣ ಎಣ್ಣೆಗೆಂಪು ಮೈ ಬಣ್ಣ, ಗುಂಡು ಮುಖ, ದಪ್ಪ ಮೂಗು, ಸಣ್ಣನೆ ಕಿವಿಗಳು, ಎಡಗೈನ ಮೊಣಕೈನಲ್ಲಿ ಅಪ್ಪ ಎಂಬ ಅಚ್ಚೆ ಗುರುತು ಇದ್ದು, ತಲೆಯಲ್ಲಿ ಎರಡುವರೆ ಇಂಚು ಉದ್ದನಯ ಕಪ್ಪು ತಲೆ ಕೂದಲು ಇದ್ದು, ನೀಳಕಾಯ ಶರೀರವನ್ನು ಹೊಂದಿರುತ್ತಾರೆ.
ಶವದ ಮೇಲೆ ಕಪ್ಪು ಬಣ್ಣದ ಅರ್ಧ ತೋಳಿನ ಬನಿಯನ್, ಕಪ್ಪು ಬಣ್ಣದ ಹಳದಿ ಬಣ್ಣದ ಒಳಚಡ್ಡಿ, ಸೊಂಟದಲ್ಲಿ ಎರಡು ಎಳೆಯ ಕಪ್ಪು ಬಣ್ಣದ ಉಡದಾರ ಇದ್ದು, ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ ದೊಡ್ಡಬಳ್ಳಾಪುರ ರೈಲ್ವೆ ಪೊಲೀಸರ ಮೊಬೈಲ್ ಸಂಖ್ಯೆ 9480802143, 9480802118 ಸಂಪರ್ಕಿಸಬೇಕಾಗಿದೆ.