ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಸಾವು

ಗೌರಿಬಿದನೂರು ಮತ್ತು ತೊಂಡೇಭಾವಿ ರೈಲು ನಿಲ್ದಾಣಗಳ ಮಧ್ಯೆ ಇರುವ ಸೋಮೇಶ್ವರ(ಅಲಕಾಪುರ) ದೇವಸ್ಥಾನ ಹತ್ತಿರ ಇಂದು ಸಂಜೆ ಸುಮಾರು 30ವರ್ಷದ ಅಪರಿಚಿತ ವ್ಯಕ್ತಿ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾನೆ.

ಯಶವಂತಪುರ ರೈಲ್ವೆ ಪೊಲೀಸ್ ಠಾಣೆ ಯು.ಡಿ ಆರ್.ನಂ. 120/2024 ಕಲಂ 174 Cr.P.C ರೀತ್ಯಾ ಪ್ರಕರಣ ದಾಖಲು ಮಾಡಿಕೊಂಡಿದ್ದು, ಮೃತನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ.

 *ಚಹರೆ* – 5.5ಅಡಿ ಎತ್ತರ, ಕಪ್ಪು ಬಣ್ಣ, ತಲೆಯಲ್ಲಿ ಸುಮಾರು 2 ಇಂಚು ಉದ್ದದ ಕಪ್ಪು ಕೂದಲು ಇದ್ದು, ಸಾಧಾರಣವಾದ ಮೈಕಟ್ಟು ಹೊಂದಿರುತ್ತಾನೆ. ತಲೆಯು ನಜ್ಜುಗುಜ್ಜಾಗಿದ್ದು ಮುಖ ಚಹರೆ ಗುರುತು ಸಿಗುವುದಿಲ್ಲ.

 *ಬಟ್ಟೆಗಳು* – ನೀಲಿ ಬಣ್ಣದ ಬರಮೋಡ ಚಡ್ಡಿ ಇದ್ದು, ಎಡಕಾಲಿನಲ್ಲಿ ಕಪ್ಪು ದಾರ ಕಟ್ಟಿರುತ್ತಾನೆ. ವಾರಸುದಾರರು  ಯಾರಾದರು ಕಂಡು ಬಂದಲ್ಲಿ ರೈಲ್ವೆ PSI 9480802118/ ದೊಡ್ಡಬಳ್ಳಾಪುರ ರೈಲ್ವೆ ಪೊಲೀಸ್  9480802143,  ಸಂಪರ್ಕಿಸಲು ಕೋರಿದೆ.

Leave a Reply

Your email address will not be published. Required fields are marked *